ಎಂಸಿಸಿ ಬ್ಯಾಂಕ್‌ಗೆ ಐತಿಹಾಸಿಕ ಶೇ 25 ರಷ್ಟು ಸಾಧನೆ, ಸಾಧಕರಿಗೆ ಪ್ರಶಸ್ತಿ ಪ್ರದಾನ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ
<

Spread the love

ಮಂಗಳೂರು: ಎಂಸಿಸಿ ಬ್ಯಾಂಕ್‌ನ 2025-26ನೇ ಹಣಕಾಸು ವರ್ಷದ ವಾರ್ಷಿಕ ಕಾರ್ಯಕ್ಷಮತೆ ಪರಿಶೀಲನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

<

ಮಂಗಳೂರು ಧರ್ಮಪ್ರಾಂತ್ಯದ ಎಸ್ಟೇಟ್ ವ್ಯವಸ್ಥಾಪಕ ವಂ. ಫಾ. ಮ್ಯಾಕ್ಸಿಂ ರೊಸಾರಿಯೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಂಸಿಸಿ ಬ್ಯಾಂಕ್ ಕ್ಯಾಥೋಲಿಕ್ ಸಮುದಾಯದ ಹೆಮ್ಮೆ ಹಾಗೂ ಅಮೂಲ್ಯ ಸಂಸ್ಥೆ ಆಗಿದೆ. ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೋ ಅವರ ನಾಯಕತ್ವ, ನಿರ್ದೇಶಕರ ಮಂಡಳಿಯ ಮಾರ್ಗದರ್ಶನ ಹಾಗೂ ಸಿಬ್ಬಂದಿ ಸಮರ್ಪಿತ ಸೇವೆ ಶ್ಲಾಘಿಸಿದರು.

ಅಧ್ಯಕ್ಷ ಅನಿಲ್ ಲೋಬೊ ಅವರು ಮಾತನಾಡಿ, 2025-26ನೇ ಹಣಕಾಸು ವರ್ಷದಲ್ಲಿ ಬ್ಯಾಂಕ್ ದಾಖಲಿಸಿರುವ ಐತಿಹಾಸಿಕ ಶೇ 25ರ ಬೆಳವಣಿಗೆಗೆ ಸಿಬ್ಬಂದಿಯನ್ನು ಅಭಿನಂದಿಸಿದರು. ಬ್ರಹ್ಮಾವರ ಶಾಖೆಯು ಎರಡು ವರ್ಷಗಳಲ್ಲೇ ಲಾಭದಾಯಕತೆಯನ್ನು ಸಾಧಿಸಿದ್ದು, ಹೊಸ ಶಾಖೆಗಳು ಅಲ್ಪಾವಧಿಯಲ್ಲೇ ₹10 ಕೋಟಿ ವ್ಯವಹಾರದ ಮೈಲಿಗಲ್ಲು ದಾಟಿರುವುದು ಗಮನಾರ್ಹ ಸಾಧನೆ ಎಂದರು.

ಬ್ಯಾಂಕ್‌ನ ಸಲಹೆಗಾರ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್‌ನ ಮಾಜಿ ಉಪ ಮಹಾಪ್ರಬಂಧಕ ಎಸ್.ಎಚ್. ವಿಶ್ವೇಶ್ವರಯ್ಯ ಅವರು ಬ್ಯಾಂಕ್‌ನ ಠೇವಣಿ, ಸಾಲ ವಿತರಣೆ, ವ್ಯವಹಾರ ವಹಿವಾಟು, ಬೆಳವಣಿಗೆ ಹಾಗೂ ಸುಸ್ತಿಸಾಲದ ಕುರಿತ ಕಾರ್ಯಕ್ಷಮತಾ ವರದಿ ಮಂಡಿಸಿದರು.

ಎಸಿಪಿ ರವೀಶ್ ಎಸ್. ನಾಯಕ್ ಅವರು ಮಾತನಾಡಿ, ಇಂದಿನ ಡಿಜಿಟಲ್ ಯುಗದಲ್ಲಿ ಸೈಬರ್ ಸುರಕ್ಷತಾ ಜಾಗೃತಿಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ದೈಜಿವರ್ಲ್ಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ವಾಲ್ಟರ್ ನಂದಳಿಕೆ, ಲೂರ್ಡ್ಸ್ ಸೆಂಟ್ರಲ್ ಶಾಲೆಯ ಪ್ರಾಂಶುಪಾಲ ವಂ. ಫಾ. ಜಾನ್ ಎಲ್. ಸಿಕ್ವೇರ ಹಾಗೂ ಬ್ಯಾಂಕ್‌ನ ಮಹಾಪ್ರಬಂಧಕ ಸುನಿಲ್ ಮಿನೇಜಸ್ ಹಾಗೂ ನಿರ್ದೇಶಕರ ಮಂಡಳಿ ಉಪಸ್ಥಿತರಿತ್ತು.

2025-26ನೇ ಸಾಲಿನ ಸ್ಟಾರ್ ಅಚೀವರ್ಸ್ ಪ್ರಶಸ್ತಿಯನ್ನು ವಿಲ್ಮಾ ಜ್ಯೋತಿ ಸಿಕ್ವೇರ್, ಶರೋನ್ ರೊಸಾರಿಯೊ, ಅನ್ಸಿಲ್ಲಾ ಫರ್ನಾಂಡಿಸ್, ಜ್ಯೋತಿ ಬ್ಯಾರೆಟ್ಟೋ ಹಾಗೂ ಸಂದೀಪ್ ಕ್ವಾಡ್ರಸ್ ಅವರಿಗೆ ಪ್ರದಾನ ಮಾಡಲಾಯಿತು. ಅಶೋಕನಗರ ಶಾಖೆಗೆ ಠೇವಣಿ ಮತ್ತು ಸಾಲ ವಿಭಾಗದ ಅತ್ಯುತ್ತಮ ಕಾರ್ಯನಿರ್ವಹಣೆ ಪ್ರಶಸ್ತಿ ಲಭಿಸಿತು.

ಪುತ್ತೂರು ಶಾಖೆಯ ವ್ಯವಸ್ಥಾಪಕಿ ಐರಿನ್ ಡಿಸೋಜಾ ಹಾಗೂ ಬಜ್ಪೆ ಶಾಖೆಯ ವೈಲೆಟ್ ಕ್ರಾಸ್ತಾ ಅವರನ್ನು ನಿವೃತ್ತಿ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು. ಹೊಸದಾಗಿ ವಿವಾಹವಾದ ಸಿಬ್ಬಂದಿಯವರನ್ನೂ ಅಭಿನಂದಿಸಲಾಯಿತು.

ನಿರ್ದೇಶಕರಾದ ಜೋಸೆಫ್ ಅನಿಲ್ ಪತ್ರಾವೊ, ಅಂಡ್ರ್ಯೂ ಡಿಸೋಜ, ಹೆರಾಲ್ಡ್ ಮೊಂತೇರೊ, ಮೆಲ್ವಿನ್ ವಾಸ್, ರೋಶನ್ ಡಿಸೋಜ, ಐರಿನ್ ರೆಬೆಲ್ಲೊ, ಎಲ್‌ರೊಯ್ ಕಿರಣ್ ಕ್ರಾಸ್ಟೊ, ಡಾ. ಜೆರಾಲ್ಡ್ ಪಿಂಟೊ, ಫೆಲಿಕ್ಸ್ ಡಿಕ್ರುಜ್ ಹಾಗೂ ವೃತ್ತಿಪರ ನಿರ್ದೇಶಕ ಸಿ.ಜಿ. ಪಿಂಟೊ ಇದ್ದರು.

ಸೈಬರ್ ಸುರಕ್ಷತೆ ಕುರಿತು ಸಹಾಯಕ ಪೊಲೀಸ್ ಆಯುಕ್ತರ ಕಚೇರಿ ಸುರೇಶ್ ಎಂ. ಜಾಗೃತಿ ಕಾರ್ಯಕ್ರಮ ನಡೆಸಿಕೊಟ್ಟರು. ಉಪ ಮಹಾಪ್ರಬಂಧಕ ರಾಜ್ ಎಫ್. ಮಿನೇಜಸ್ ವಂದಿಸಿದರು. ಐಟಿ ವಿಭಾಗದ ಮುಖ್ಯಸ್ಥ ಅಲ್ವಿನ್ ಝೇವಿಯರ್ ಡಿಸೋಜ ನಿರೂಪಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *