ಎನ್ಯುಮರೇಷನ್ ಫಾರ್ಮ್ ವಿತರಣೆಯಲ್ಲಿ ಉ.ಕ ಜಿಲ್ಲೆಗೆ ರಾಜ್ಯದಲ್ಲಿ 3 ನೇ ಸ್ಥಾನ: ಡಿಸಿ ಲಕ್ಷ್ಮಿಪ್ರಿಯಾ

ಜಿಲ್ಲಾ ಸುದ್ದಿ ಕಾರವಾರ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು ಜಿಲ್ಲೆಯಲ್ಲಿ ಇದುವರೆಗೆ 11,91,548 ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಾಗಿದ್ದು, ಶೇ.96.87 ಸಾಧನೆಯೊಂದಿಗೆ ಫಾರ್ಮ್ ವಿತರಣೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.

<

ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು,ಈಗಾಗಲೇ 11,58,776 ಮಂದಿಯ ಮ್ಯಾಪಿಂಗ್ ಮಾಡಿದ್ದು, ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 59,123 ಫಾರ್ಮ್ ಗಳನ್ನು ಗಣಕೀಕರಣ ಗೊಳಿಸಲಾಗಿದೆ. ಹಳಿಯಾಳ ಕ್ಷೇತ್ರದಲ್ಲಿ ಒಟ್ಟು 1,87,543 ಮತದಾರರ ಪೈಕಿ 1,73,750 ನಮೂನೆಗಳನ್ನು ವಿತರಿಸಲಾಗಿದ್ದು, 14,375 ನಮೂನೆಗಳು ಗಣಕೀಕೃತಗೊಂಡಿವೆ ಎಂದು ತಿಳಿಸಿದ್ದಾರೆ.

ಕಾರವಾರ ಕ್ಷೇತ್ರದಲ್ಲಿ ಒಟ್ಟು 2,23,390 ಮತದಾರರ ಪೈಕಿ 2,22,950 ನಮೂನೆಗಳನ್ನು ವಿತರಿಸಲಾಗಿದ್ದು,9024 ನಮೂನೆಗಳು ಗಣಕೀಕೃತಗೊಂಡಿವೆ. ಕುಮಟಾ ಕ್ಷೇತ್ರದಲ್ಲಿ ಒಟ್ಟು 1,92,055 ಮತದಾರರ ಪೈಕಿ 1,92,054 ನಮೂನೆಗಳನ್ನು ವಿತರಿಸಲಾಗಿದ್ದು, 15,078 ನಮೂನೆಗಳು ಗಣಕೀಕೃತಗೊಂಡಿವೆ. ಭಟ್ಕಳ ಕ್ಷೇತ್ರದಲ್ಲಿ ಒಟ್ಟು 2,31,778 ಮತದಾರರ ಪೈಕಿ 2,23,064 ನಮೂನೆಗಳನ್ನು ವಿತರಿಸಲಾಗಿದ್ದು,8,670 ನಮೂನೆಗಳು ಗಣಕೀಕೃತಗೊಂಡಿವೆ. ಸಿರಸಿ ಕ್ಷೇತ್ರದಲ್ಲಿ ಒಟ್ಟು 2,05,743 ಮತದಾರರ ಪೈಕಿ 1,95,617 ನಮೂನೆಗಳನ್ನು ವಿತರಿಸಲಾಗಿದ್ದು, 5175 ನಮೂನೆಗಳು ಗಣಕೀಕೃತಗೊಂಡಿವೆ. ಯಲ್ಲಾಪುರ ಕ್ಷೇತ್ರದಲ್ಲಿ ಒಟ್ಟು 1,89,528 ಮತದಾರರ ಪೈಕಿ 1,84,113 ನಮೂನೆಗಳನ್ನು ವಿತರಿಸಲಾಗಿದ್ದು,6801 ನಮೂನೆಗಳು ಗಣಕೀಕೃತಗೊಂಡಿವೆ.ಕುಮಟಾ ವಿಧಾನ ಸಭಾ ಕ್ಷೇತ್ರವು ಎನ್ಯುಮರೇಷನ್ ಫಾರ್ಮ್ ಗಳ ವಿತರಣೆಯಲ್ಲಿ ಶೇ. 100 ರಷ್ಟು ಸಾಧನೆಯಾಗಿದ್ದು ರಾಜ್ಯ ಮಟ್ಟದಲ್ಲಿ 3 ನೇ ಸ್ಥಾನದಲ್ಲಿದೆ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದ0ತೆ ಒಟ್ಟು 1092 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 149 ಶಾಶ್ವತ ವಲಸೆ ಹಾಗೂ 868 ಮರಣ ಹೊಂದಿದ ಪ್ರಕರಣಗಳು,70 ದ್ವಿಪ್ರತಿಗಳು ಸೇರಿವೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *