ಮಂಗಳೂರು: ಲಕ್ಷಾಂತರ ರೂ. ಮೌಲ್ಯದ ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣವೊಂದನ್ನು ಪತ್ತೆ ಹಚ್ಚಿರುವ ಬಂಟ್ವಾಳ ಗ್ರಾಮಾಂತರ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೋಳಂತೂರು ಗ್ರಾಮದ ಎನ್.ಸಿ.ರೋಡ್ ನಿವಾಸಿ ಮುಹಮ್ಮದ್ ನಿಝಾಮುದ್ದೀನ್ ಹಾಗೂ ಆತನ ಸಹೋದರ ಮಹಮ್ಮದ್ ಸಾಹೀಮ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ತಾಲೂಕಿನ ಮಂಚಿ ಎಂಬಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸುಮಾರು 42.30 ಲಕ್ಷ ರೂ. ಮೌಲ್ಯದ 423 ಗ್ರಾಂ ಎಂಡಿಎಂಎ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ. ಡ್ರಗ್ಸ್ ಸಾಗಣಗೆ ಬಳಸಲಾದ ವಾಹನ, 3 ಮೊಬೈಲ್ ಸೇರಿದಂತೆ 47 ಲಕ್ಷ ರೂ. ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದ.ಕ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಅರುಣ್ ಕೆ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರಡ್ಡಿ ಮಾರ್ಗದರ್ಶನದಲ್ಲಿ ಬಂಟ್ವಾಳ ಉಪ ವಿಭಾಗದ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಯಶ್ ಕುಮಾರ್ ಶರ್ಮಾ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಬಂಟ್ವಾಳ ಗ್ರಾಮಾಂತರ ಠಾಣಾ ಪಿಎಸ್ಸೈ ಮಂಜುನಾಥ್ ಟಿ., ಬಂಟ್ವಾಳ ನಗರ ಠಾಣಾ ಪಿಎಸ್ಸೈ ಸಂದೀಪ್ ಶೆಟ್ಟಿ, ಹಾಗೂ ಸಿಬ್ಬಂದಿ ನಝೀರ್, ಲೋಕೇಶ್, ಪ್ರಶಾಂತ್, ಶೇಖರ್, ವಿಜಯ ಕುಮಾರ್, ಕುಮಾರ್ ಎಚ್.ಕೆ., ವಿವೇಕ್ ರೈ, ನಾಗನಾಥ, ಸುರೇಶ್ ಉಪ್ಪಾರ್, ಬಸವರಾಜ್, ಮಹಾದೇವ್, ಜಗದೀಶ್ ಹಾಗೂ ಜಿಲ್ಲಾ ತಾಂತ್ರಿಕ ವಿಭಾಗದ ಸಂಪತ್, ದಿವಾಕರ್ ಈ ಕಾರ್ಯಾಚರಣೆಯಲ್ಲಿ ಇದ್ದರು.
What do you feel about this post?
Like
Love
Happy
Haha
Sad
