ಸೇತುವೆ ಇಲ್ಲದ ಸಂಕಷ್ಟ: ಉಕ್ಕಿ ಹರಿಯುತ್ತಿದ್ದ ಭಾಸ್ಕೇರಿ ಹೊಳೆಯಲ್ಲಿ ಶವ ಹೊತ್ತು ಅಂತ್ಯಸಂಸ್ಕಾರ, ಮೂಲ ಸೌಕರ್ಯದಿಂದ ವಂಚಿತ ಗ್ರಾಮಸ್ಥರು
ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ದೊಡ್ಡ ಹಿತ್ತಲ ಗ್ರಾಮದಲ್ಲಿ ಮೂಲ ಸೌಕರ್ಯಗಳ ಕೊರತೆಯ ಮತ್ತೊಂದು ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬರ ಮೃತದೇಹವನ್ನು ಅಂತ್ಯಸಂಸ್ಕಾರಕ್ಕೆ ಕೊಂಡೊಯ್ಯಲು ಉಕ್ಕಿ ಹರಿಯುತ್ತಿದ್ದ ಹೊಳೆಯನ್ನು ಗ್ರಾಮಸ್ಥರು ಜೀವದ ಹಂಗು ತೊರೆದು ದಾಟಿದ ಘಟನೆ ನಡೆದಿದೆ. ಈ ಘಟನೆ ಜಾಲತಾಣದಲ್ಲಿ ವೈರಲ್ ಅಗುತ್ತಿದ್ದು, ಬಾರಿ ಚರ್ಚೆಗೆ ಗ್ರಾಸವಾಗುತ್ತಿದೆ. ನಿರಂತರ ಮಳೆಯಿಂದ ಭಾಸ್ಕೇರಿ ಹೊಳೆ ತುಂಬಿ ಹರಿಯುತ್ತಿದ್ದು, ಗ್ರಾಮದ ಸಂಪರ್ಕ ರಸ್ತೆಯೂ ಜಲಾವೃತ ಆಗಿದೆ. ಈ ಹಿನ್ನೆಲೆಯಲ್ಲಿ ಅಂತ್ಯಸಂಸ್ಕಾರಕ್ಕೆ […]
Continue Reading