ವೆಂಕಟ್ ಭಾರದ್ವಾಜ್ ನಿರ್ದೇಶನದ ರಕ್ಕಿ, ಭೂಗತ ರೌಡಿಗಳ ಕಥೆ ಜತೆಗೆ ಕೌಟುಂಬಿಕ, ಲವ್ ಸ್ಟೋರಿ ಟಚ್

ಬೆಂಗಳೂರು: ಸದಭಿರುಚಿಯ ಚಿತ್ರಗಳಿಂದ ಗಮನ ಸೆಳೆಯುವ ನಿರ್ದೇಶಕ ವೆಂಕಟ್ ಭಾರದ್ವಾಜ್ ಈ ಬಾರಿ ಕೂಡ ಅಂತಹದ್ದೇ ಮತ್ತೊಂದು ಪ್ರಯತ್ನ ಮಾಡಿದ್ದಾರೆ.‌ ಭೂಗತ ರೌಡಿಗಳ ಕಥೆಯನ್ನು ಇಟ್ಟುಕೊಂಡು ಲವ್ ಸ್ಟೋರಿಗಳು ಬಂದಿವೆ. ಆದರೆ ಕೌಟುಂಬಿಕ ಕಥೆಯನ್ನು ಕೂಡ ಇಷ್ಟು ಚೆನ್ನಾಗಿ ಹೇಳಬಹುದು ಎನ್ನವುದನ್ನು ಸಾಬೀತು ಮಾಡಿರುವ ಚಿತ್ರ ರಕ್ಕಿ. ಅಪರಾಧದ ಹಿನ್ನೆಲೆಯ ಚಿತ್ರವಾದರೂ ಎಲ್ಲಿಯೂ ರಕ್ತಪಾತವಿಲ್ಲ. ಕೇಂದ್ರ ಪಾತ್ರ ರಿಕ್ಕಿಯ ವಿಚಾರಕ್ಕೆ ಬರುವುದಾದರೆ ಯುವನಟರ ಸಾಲಿಗೆ ಸೇರಿಸಬಹುದಾದ ಪ್ರತಿಭಾವಂತ ಕಲಾವಿದ ರಿಕ್ಕಿ. ನಟನೆ ಮಾತ್ರವಲ್ಲದೆ ಆ್ಯಕ್ಷನ್ ದೃಶ್ಯಗಳಲ್ಲಿಯೂ ಗಮನ […]

Continue Reading

ಉ.ಕ ಜಿಲ್ಲೆಯಾದ್ಯಂತ 12,28,857 ಎನ್ಯುಮರೇಷನ್ ಫಾರ್ಮ್ ವಿತರಣೆ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಪ್ರಕ್ರಿಯೆ ಚುರುಕಿನಿಂದ ಸಾಗಿದ್ದು, ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಇದುವರೆಗೂ ಜಿಲ್ಲೆಯಾದ್ಯಂತ ಒಟ್ಟು 12,28,857 ಎನ್ಯುಮರೇಷನ್ ಫಾರ್ಮ್ ಗಳನ್ನು ವಿತರಿಸಲಾಗಿದ್ದು, 2,29,171 ಫಾರ್ಮ್ಗಳನ್ನು ಗಣಕೀಕರಣ ಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ತಿಳಿಸಿದ್ದಾರೆ. ಈವರೆಗಿನ ಮನೆ ಮನೆ ಭೇಟಿಯ ಸಂದರ್ಭದಲ್ಲಿ ಸ್ಥಳಾಂತರ, ಮರಣ ಹಾಗೂ ದ್ವಿಪ್ರತಿ ಪ್ರಕರಣಗಳಿಗೆ ಸಂಬ0ಧಿಸಿದಂತೆ ಒಟ್ಟು 2520 ಮತದಾರರನ್ನು ಗುರುತಿಸಲಾಗಿದೆ. ಇದರಲ್ಲಿ 402 ಶಾಶ್ವತ ವಲಸೆ ಹಾಗೂ […]

Continue Reading

ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಲು ಯುವಜನತೆ ತಪ್ಪದೇ ಮತದಾನ ಮಾಡಿ: ಸಿಇಒ ಡಾ.ದಿಲೀಷ್ ಶಶಿ

ಕಾರವಾರ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಯುವ ಜನತೆ ತಪ್ಪದೇ ಮತದಾನ ಮಾಡುವ ಮೂಲಕ ತಮ್ಮ ಆಯ್ಕೆಯ ಉತ್ತಮ ಜನಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ದಿಲೀಷ್ ಶಶಿ ಹೇಳಿದರು. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 ಅಂಗವಾಗಿ,ವಿದ್ಯಾರ್ಥಿಗಳಿಂದ ಪೋಷಕರಿಗೆ ಅರಿವು ಮೂಡಿಸಲು ಕಾರವಾರದ ಹಿಂದುಳಿದ ವರ್ಗಗಳ ಪೋಸ್ಟ್ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯದಲ್ಲಿ ಆಯೋಜಿಸಿದ್ದ ಪತ್ರ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತದಾರರ ಪಟ್ಟಿ ಸಮಗ್ರ ಪರಿಷ್ಕರಣೆಯ ಕಾರ್ಯದಲ್ಲಿ ಈಗಾಗಲೇ ಬಿ.ಎಲ್.ಓ ಗಳು ತಮ್ಮ ಮನೆಗಳಿಗೆ ಎನ್ಯುಮರೇಷನ್ […]

Continue Reading

ಹೊರ ಜಿಲ್ಲೆಗಳಿಂದ ರೋಗಿಗಳ ಶಿಫಾರಸು ಮಾಡುವಾಗ ಹೆಲ್ಪ್ ಡೆಸ್ಕ್ ಸಂಪರ್ಕಿಸಿ, ನಂತರ ಪರದಾಟ ಬೇಡ, ದ.ಕ. ಜಿಲ್ಲೆಯ ರೋಗಿಗಳಿಗೂ ವೆನ್ಲಾಕ್ ಆಸ್ಪತ್ರೆ ಸೌಲಭ್ಯ ಸಿಗಲಿ: ಅಧೀಕ್ಷಕ ಡಾ. ಶಿವಪ್ರಕಾಶ್

ಮಂಗಳೂರು: ರಾಜ್ಯದ ಹೊರ ಜಿಲ್ಲೆಗಳಿಂದ ತುರ್ತು ಚಿಕಿತ್ಸೆಗೆ ಹೆಚ್ಚಿನ ಸಂಖ್ಯೆಯಲ್ಲಿ ರೋಗಿಗಳನ್ನು ಮಂಗಳೂರು ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಐಸಿಯು ಹಾಸಿಗೆ ಕೊರತೆ ಕಾಡುತ್ತಿದೆ. ಪರಿಣಾಮ ಒತ್ತಡ ಹೆಚ್ಚಿದ್ದು, ರೋಗಿಗಳನ್ನು ಶಿಫಾರಸು ಮಾಡುವ ಮೊದಲು ಆಸ್ಪತ್ರೆಯಲ್ಲಿ ಹಾಸಿಗೆ ಲಭ್ಯತೆ ಪರಿಶೀಲಿಸುವ ವ್ಯವಸ್ಥೆ ಕಡ್ಡಾಯಗೊಳಿಸಬೇಕು. ಇದಕ್ಕಾಗಿ ಸಹಾಯವಾಣಿ ವ್ಯವಸ್ಥೆ ಮಾಡಲಾಗಿದೆ. ಹೊರ ಜಿಲ್ಲೆಗಳ ರೋಗಿಗಳನ್ನು ಏಕಾಏಕಿ ಕರೆತರುವುದರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸಾಕಷ್ಟು ಅರ್ಹ ಬಡ ರೋಗಿಗಳಿಗೆ ವೆನ್ಲಾಕ್ ಆಸ್ಪತ್ರೆಯ ಲಾಭ ಸಿಗದೇ ಇರುವಂತಹ ಸ್ಥಿತಿ ನಿರ್ಮಾಣ ಆಗಿದೆ […]

Continue Reading

ಶಾಸಕ ವೇದವ್ಯಾಸ ಕಾಮತ್ ವಿರುದ್ಧದ ಎಫ್ಐಆರ್ ಹೈಕೋರ್ಟ್ ರದ್ದು, ರಾಜಕೀಯ ಪ್ರೇರಿತ ದೂರ ಆಗಿತ್ತು: ಕಾಮತ್

ಮಂಗಳೂರು: ಶಕ್ತಿನಗರದ ಕೃಷ್ಣ ಭಜನಾ ಮಂದಿರದಲ್ಲಿ ಧಾರ್ಮಿಕ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣದ ಆರೋಪಕ್ಕೆ ಸಂಬಂಧಿಸಿದಂತೆ ಶಾಸಕ ವೇದವ್ಯಾಸ ಕಾಮತ್ ಹಾಗೂ ಇತರರ ವಿರುದ್ಧದ ಎಫ್ಐಆರ್ ಅನ್ನು ಹೈಕೋರ್ಟ್ ರದ್ದುಗೊಳಿಸಿತು. ಕಳೆದ ವರ್ಷ ಮಾರ್ಚ್ ನಲ್ಲಿ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಇದೊಂದು ರಾಜಕೀಯ ಪ್ರೇರಿತ ದುರುದ್ದೇಶದ ಪ್ರಕರಣ ಆಗಿತ್ತು. ಹೈಕೋರ್ಟ್ ನೀಡಿರುವ ತೀರ್ಪು ನ್ಯಾಯಕ್ಕೆ ಸಂದ ಜಯವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನನ್ನ […]

Continue Reading

ಅಕ್ರಮ ಬಾಂಗ್ಲಾ ಪ್ರಜೆಗಳ ಪತ್ತೆ, ಇದು ಎಚ್ಚರಿಕೆ ಗಂಟೆ, ಸರಕಾರ ಎಚ್ಚೆತ್ತುಕೊಳ್ಳಲಿ: ಶಾಸಕ ಡಾ. ಭರತ್ ಶೆಟ್ಟಿ

 ಸುರತ್ಕಲ್ : ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕಾದಲ್ಲಿ 8 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಕೂಲಿ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲೆಸಿ, ಅನಧಿಕೃತ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಘಟನೆ ರಾಜ್ಯದ ಭದ್ರತೆಗೆ ಎಚ್ಚರಿಕೆಯ ಗಂಟೆ ಆಗಿದೆ. ಇಂತಹ ಅಕ್ರಮ ನುಸುಳುವಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಇದರ ಪರಿಣಾಮ ಭೀಕರ ಆಗಿರುತ್ತದೆ. ಬಾಂಗ್ಲಾದೇಶಿಗರನ್ನು ಹೊರಹಾಕಲು ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರ ಕೈಜೋಡಿಸಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ. ದುರದೃಷ್ಟವಶಾತ್ ರಾಜ್ಯದ ಗೃಹ ಮಂತ್ರಿ […]

Continue Reading

ನಕಲಿ ಆಧಾರ ಕಾರ್ಡ್ ಬಳಸಿ ಅಕ್ರಮವಾಗಿ ಭಾರತಕ್ಕೆ ಪ್ರವೇಶ,  ಮಂಗಳೂರಿನ ಮುಕ್ಕದಲ್ಲಿ 8 ಮಂದಿ ಬಾಂಗ್ಲಾದೇಶದ ಪ್ರಜೆಗಳ ಪತ್ತೆ: ಸುಧೀರ್ ಕುಮಾರ್

ಮಂಗಳೂರು: ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಮಂಗಳೂರಿನ ಮುಕ್ಕಾ ಪ್ರದೇಶದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ. ಬಂಧಿತರು ಸುಮಾರು ಮೂರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದು, ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ದೇಶ ಪ್ರವೇಶ ಮಾಡಿದ್ದಾರೆ. ಬಳಿಕ ಮುರ್ಶಿದಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳ […]

Continue Reading

ಮುಂಡಗೋಡಿನಲ್ಲಿ ಬಾಲ್ಯ ವಿವಾಹ ತಡೆ: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ತ್ವರಿತ ಕಾರ್ಯಾಚರಣೆ

ಮುಂಡಗೋಡು: ಮಕ್ಕಳ ಸಹಾಯವಾಣಿ (1098)ಗೆ ಬಂದ ದೂರಿನ ಆಧಾರದಲ್ಲಿ ಮುಂಡಗೋಡು ತಾಲೂಕಿನಲ್ಲಿ ನಡೆಯಲಿದ್ದ ಅಪ್ರಾಪ್ತೆಯ ಬಾಲ್ಯ ವಿವಾಹವನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ತಡೆದು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ. ಜುಲೈ 9 ರಂದು ಅಪ್ರಾಪ್ತೆಗೆ ಬಾಲ್ಯ ವಿವಾಹ ನಡೆಸಲಾಗುತ್ತಿದೆ ಎಂಬ ಮಾಹಿತಿ ಮಕ್ಕಳ ಸಹಾಯವಾಣಿಗೆ ಬಂದ ತಕ್ಷಣ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕುಮಾರ ಎನ್. ಅವರು ಅಧಿಕಾರಿಗಳ ತಂಡವನ್ನು ಸ್ಥಳಕ್ಕೆ ಕಳುಹಿಸಿದರು. ತಂಡವು ಸ್ಥಳಕ್ಕೆ ಭೇಟಿ ನೀಡಿ ಕುಟುಂಬ ಸದಸ್ಯರೊಂದಿಗೆ ಸಮಾಲೋಚನೆ ನಡೆಸಿ ಬಾಲ್ಯ ವಿವಾಹದ […]

Continue Reading

ಮಕ್ಕಳ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ತಾಲ್ಲೂಕು ಪಂಚಾಯಿತಿ ಇಒ ಭಾರತಿ ಎನ್

ಕಾರವಾರ: ಮಕ್ಕಳು ಈ ದೇಶದ ಸಂಪತ್ತು. ಮಕ್ಕಳನ್ನು ಕಾಪಾಡುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಮಕ್ಕಳನ್ನು ಕಾಪಾಡುವುದು ಅಥವಾ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಂದು ಜೋಯಿಡಾ ತಾ.ಪಂ. ಕಾರ್ಯನಿರ್ವಣಾಧಿಕಾರಿ ಭಾರತಿ ಎನ್ ಹೇಳಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ಘಟಕ ಹಾಗೂ ಸಖಿ ಆಶ್ರಯದಲ್ಲಿ ಜೋಯಿಡಾದ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗಾಗಿ ಆಯೋಜಿಸಲಾದ , ಸಾಮಾಜಿಕ ಪಿಡುಗು ಹಾಗೂ ಪೋಕ್ಸೋ ಕಾಯ್ದೆ, ಬಾಲ ನ್ಯಾಯ ಕಾಯ್ದೆ, ಬಾಲ್ಯ ವಿವಾಹ ನಿಷೇಧ ಕಾಯ್ದೆ, […]

Continue Reading

ಯಲ್ಲಾಪುರ: ಭೀಕರ ರಸ್ತೆ ಅಪಘಾತ 7 ಮಂದಿ ಸಾವು, ಡಿಸಿ ಲಕ್ಷ್ಮಿಪ್ರಿಯಾ, ಎಸ್ಪಿ ದೀಪನ್ ಸ್ಥಳಕ್ಕೆ ದೌಡು, ಪರಿಶೀಲನೆ

ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಮಾಡಿದೆ. ಕ್ರೂಸರ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಪ್ರಯಾಣಿಸುವವರಲ್ಲಿ ಭಯ ಹುಟ್ಟಿಸಿದೆ. ಘಟನೆಯಲ್ಲಿ ಮೃತಪಟ್ಟವರು ಧಾರವಾಡದ ಬಸವರಾಜ್ ಕನಕನವರ್ (48), ಧಾರವಾಡ ಜಯನಗರದ ಅಭಿಷೇಕ ಈಶ್ವರ (28) ವರ್ಷ, ಸಾಧನಕೇರಿಯ ಅಕ್ಷಯ (26), ಸಪ್ತಾಪುರದ ಅಭಿಷೇಕ ಮಲ್ಲೇಶ ಮಡಬಾವಿ (26), ಕುರುಬಗಟ್ಟಿಯ ಸಂಜೀವ […]

Continue Reading