ಮಂಗಳೂರು ಬಜ್ಪೆ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಸೇವೆಯಲ್ಲಿ ದೇಶದ ನಾಲ್ಕನೇ ಸ್ಥಾನ

ಮಂಗಳೂರು: ಪ್ರಯಾಣಿಕರಿಗೆ ಗುಣಮಟ್ಟದ ಸೇವೆ ಹಾಗೂ ವಿಶ್ವದರ್ಜೆಯ ಪ್ರಯಾಣ ಅನುಭವ ಕಲ್ಪಿಸಿರುವ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಜಾಗತಿಕ ಮಟ್ಟದ ಅತ್ಯುನ್ನತ ಗ್ರಾಹಕ ಸೇವಾ ಮಾನ್ಯತೆ ಲಭಿಸಿದೆ. ಈ ಮೂಲಕ ದೇಶದಲ್ಲಿ ಈ ಗೌರವ ಪಡೆದ ನಾಲ್ಕನೇ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ವಿಮಾನ ನಿಲ್ದಾಣಗಳ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರ ಸೇವೆಯ ಗುಣಮಟ್ಟವನ್ನು ಮೌಲ್ಯಮಾಪನ ಮಾಡುವ ಅಂತರರಾಷ್ಟ್ರೀಯ ಸಂಸ್ಥೆಯು ಈ ಮಾನ್ಯತೆಯನ್ನು ನೀಡಿದೆ. ಪ್ರಯಾಣಿಕರ ಅಗತ್ಯಗಳನ್ನು ಕೇಂದ್ರಬಿಂದುವಾಗಿಟ್ಟುಕೊಂಡು ಸೇವೆ, ಆಡಳಿತ, […]

Continue Reading

ಓಣಂ ರಜೆ, ಐಆರ್‌ಸಿಟಿಸಿಯಿಂದ ಭಾರತ ಗೌರವ ವಿಶೇಷ ಟೂರ್ ಪ್ಯಾಕೇಜ್, ರೈಲು, ವಿಮಾನ ಸೇವೆ: ಸ್ಯಾಮ್ ಜೋಸೆಫ್

ಮಂಗಳೂರು: ಓಣಂ ರಜೆ ಪ್ರಯುಕ್ತ ಐಆರ್‌ಸಿಟಿಸಿ ‘ಭಾರತ ಗೌರವ’ ವಿಶೇಷ ಪ್ರವಾಸಿ ರೈಲ ಅನ್ನು ಆಯೋಜಿಸಿದ್ದು, ಅಹಮದಾಬಾದ್ ಸೇರಿದಂತೆ ಗೋಲ್ಡನ್ ಟ್ರಯಾಂಗಲ್ ಪ್ರವಾಸಕ್ಕೆ ಅವಕಾಶ ಕಲ್ಪಿಸಿದೆ. ವಿಶೇಷ ರೈಲು ಅ 22 ರಂದು ಮಂಗಳೂರಿನ ಮೂಲಕ ಪ್ರಯಾಣ ಆರಂಭಿಸಿ, ಸೆಪ್ಟೆಂಬರ್ 1 ರಂದು ವಾಪಸ್ ಆಗಲಿದೆ ಎಂದು ಐಆರ್ ಸಿಟಿಸಿ ಜಂಟಿ ಜನರಲ್ ಮ್ಯಾನೇಜರ್ ಸ್ಯಾಮ್ ಜೋಸೆಫ್ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಹಮದಾಬಾದ್‌ನ ಸಾಬರ್ಮತಿ ಆಶ್ರಮ, ರಾಣಿ ಕಿ ವಾವ್, ಅಡಲಜ್ ಮೆಟ್ಟಿಲು ಬಾವಿ, ಏಕತಾ […]

Continue Reading

ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲಿ ಎಷ್ಟು ಮಂದಿ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕಿದ್ದೀರಿ: ಐವನ್ ಡಿಸೋಜ

ಮಂಗಳೂರು: ಬಾಂಗ್ಲಾದೇಶಿ ವಲಸಿಗರ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡುತ್ತಿರುವ ಬಿಜೆಪಿ, ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮೊದಲು ಶ್ವೇತಪತ್ರ ಬಿಡುಗಡೆ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು. ಪಶ್ಚಿಮ ಬಂಗಾಳದಲ್ಲಿ ಅಧಿಕಾರಕ್ಕೆ ಬಂದ ಕೂಡಲೇ ಬಾಂಗ್ಲಾದೇಶಿ ವಲಸಿಗರನ್ನು ಹೊರಹಾಕುವುದಾಗಿ ಬಿಜೆಪಿ ಹೇಳಿತ್ತು. ಆದರೆ ಅಧಿಕಾರಕ್ಕೆ ಬಂದ ಎರಡು ತಿಂಗಳಾದರೂ ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರ, ಒಡಿಶಾ, ಅಸ್ಸಾಂ ಸೇರಿದಂತೆ ಬಿಜೆಪಿ […]

Continue Reading

ಪಡೀಲ್‌ಗೆ ಪಂಚಗಂಗಾ ಎಕ್ಸ್‌ಪ್ರೆಸ್ ನಿಲುಗಡೆಗೆ ಒತ್ತಾಯ, ರೈಲ್ವೆ ಅಧಿಕಾರಿಗಳ ಶೀಘ್ರವೇ ಭೇಟಿ: ಪಿ.ವಿ. ಮೋಹನ್

ಮಂಗಳೂರು: ನಗರದ ಪಡೀಲ್ ರೈಲು ನಿಲ್ದಾಣ ಹಲವು ವರ್ಷಗಳಿಂದ ಅಭಿವೃದ್ಧಿ ಮತ್ತು ಅಗತ್ಯ ರೈಲು ನಿಲುಗಡೆಯಿಂದ ವಂಚಿತವಾಗಿದ್ದು, ಸಾವಿರಾರು ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕಾರವಾರ–ಬೆಂಗಳೂರು ಪಂಚಗಂಗಾ ಸೂಪರ್ ಎಕ್ಸ್‌ಪ್ರೆಸ್‌ಗೆ ಪಡೀಲ್‌ನಲ್ಲಿ ನಿಲುಗಡೆ ಕಲ್ಪಿಸಿ, ಸ್ಥಳೀಯರ ಬಹುಕಾಲದ ಬೇಡಿಕೆಯನ್ನು ಈಡೇರಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಪಿ.ವಿ. ಮೋಹನ್ ಆಗ್ರಹಿಸಿದರು. ಪಡೀಲ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳ ಅಹವಾಲು ಆಲಿಸಿ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಮಂಗಳೂರು ರೈಲು ಸಂಪರ್ಕಕ್ಕೆ 120 […]

Continue Reading

ಮಂಗಳೂರಿನಲ್ಲಿ ನಾಗರಿಕ ಸೇವಾ ಪರೀಕ್ಷೆಗಳ ತರಬೇತಿ ಕೇಂದ್ರ ಉದ್ಘಾಟಿಸಿದ ಡಾ. ಹೆನ್ರಿ ಡಿಸೋಜ

ಮಂಗಳೂರು: ನಾಗರಿಕ ಸೇವೆಗಳ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಆರಂಭಿಸಲಾದ ಹೊಸ ತರಬೇತಿ ಕೇಂದ್ರದ ಉದ್ಘಾಟನಾ ಸಮಾರಂಭ ನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು. ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಪ್ರತಿಷ್ಠಾನದ ಅಧ್ಯಕ್ಷ ಡಾ. ಹೆನ್ರಿ ಡಿಸೋಜ ಅವರು ಉದ್ಘಾಟನೆ ನೆರವೇರಿಸಿದರು. ಬಳಿಕ ರಾಮಕೃಷ್ಣ ಮಠದ ಸ್ವಾಮಿ ಯುಗಾನಂದ ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ. ಹೆನ್ರಿ ಡಿಸೋಜ ಅವರು, ನಾವು ಎಲ್ಲಿ ಹುಟ್ಟಿದ್ದೇವೆ ಎಂಬುದು ಮುಖ್ಯವಲ್ಲ. ಜೀವನದಲ್ಲಿ ಯಾವ […]

Continue Reading

ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆಗೆ ಆದ್ಯತೆ ನೀಡಿ: ಶಾಸಕ ಡಾ. ಭರತ್ ಶೆಟ್ಟಿ ಒತ್ತಾಯ

ಮಂಗಳೂರು: ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯನ್ನು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ, ಮತದಾರರ ಪಟ್ಟಿಯ ಪರಿಷ್ಕರಣೆಯ ಜೊತೆಗೆ ಅಕ್ರಮ ಬಾಂಗ್ಲಾದೇಶಿ ವಲಸಿಗರ ಪತ್ತೆ ಕಾರ್ಯಕ್ಕೂ ಆದ್ಯತೆ ನೀಡಬೇಕು ಎಂದು ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಅವರು ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಬಾಂಗ್ಲಾದೇಶದ ನಾಗರಿಕರು ಅಕ್ರಮವಾಗಿ ದೇಶ ಪ್ರವೇಶಿಸಿರುವುದು ಆತಂಕಕಾರಿ ಬೆಳವಣಿಗೆ ಆಗಿದೆ. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಮುಕ್ಕ ಹಾಗೂ ಕೋಡಿಕಲ್ ಪ್ರದೇಶಗಳಲ್ಲಿ ಈಗಾಗಲೇ 16 ಮಂದಿ ಅಕ್ರಮ ವಲಸಿಗರನ್ನು ಪೊಲೀಸರು […]

Continue Reading

ಅದಾನಿ ರಿವಾರ್ಡ್ಸ್‌ಗೆ 10 ತಿಂಗಳಲ್ಲಿ 50 ಲಕ್ಷ ಸದಸ್ಯರು, ಪ್ರಯಾಣಿಕರಿಗೆ ಇನ್ನಷ್ಟು ಸೌಲಭ್ಯಗಳ ಭರವಸೆ: ಅದಾನಿ ಸಂಸ್ಥೆ

ಮಂಗಳೂರು: ಅದಾನಿ ವಿಮಾನ ನಿಲ್ದಾಣ ಹೋಲ್ಡಿಂಗ್ಸ್ ಲಿಮಿಟೆಡ್‌ನ ಗ್ರಾಹಕ ಸೇವಾ ಅನ್ವಯಿಕೆ ‘ಅದಾನಿ ಒನ್’ ಮೂಲಕ ಪರಿಚಯಿಸಲಾದ ವಿಮಾನ ನಿಲ್ದಾಣ ಗ್ರಾಹಕ ಪ್ರೋತ್ಸಾಹ ಯೋಜನೆ ‘ಅದಾನಿ ರಿವಾರ್ಡ್ಸ್’ ಆರಂಭಗೊಂಡು ಕೇವಲ 10 ತಿಂಗಳಲ್ಲಿ 50 ಲಕ್ಷ ಸದಸ್ಯರನ್ನು ಹೊಂದುವ ಮೂಲಕ ಮಹತ್ವದ ಮೈಲುಗಲ್ಲು ಸಾಧಿಸಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಏಳು ರಾಜ್ಯಗಳಲ್ಲಿರುವ ಅದಾನಿ ಸಂಸ್ಥೆ ನಿರ್ವಹಿಸುತ್ತಿರುವ ಎಂಟು ವಿಮಾನ ನಿಲ್ದಾಣಗಳಲ್ಲಿ ಈ ಯೋಜನೆ ಲಭ್ಯವಿದೆ. ಪ್ರಯಾಣಿಕರು ವಿಮಾನ ನಿಲ್ದಾಣದಲ್ಲಿನ ಖರೀದಿ, ಉಪಾಹಾರ ಸೇವೆ ಹಾಗೂ ಇತರ […]

Continue Reading

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ: ತಡೆಗೆ ಸುಪ್ರೀಂ ನಿರಾಕರಣೆ, ಮತ್ತೇ ಹಿನ್ನಡೆ

ಬೆಳ್ತಂಗಡಿ : ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆ ಸಂಸ್ಥಾಪಕ, ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧದ ಗಡೀಪಾರು ಆದೇಶ ಶಿಕ್ಷೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಅಪರಾಧ ಹಿನ್ನೆಲೆಯುಳ್ಳ ಕಾರಣಕ್ಕೆ ಮತ್ತು ನಿರಂತರವಾಗಿ ಸಮಾಜದ ಸ್ವಾಸ್ಥಕ್ಕೆ ಧಕ್ಕೆ ತರುವ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಆದೇಶ ಹೊರಡಿಸಿದ್ದರು. ಗಡೀಪಾರು ಆದೇಶವನ್ನು ಪ್ರಶ್ನಿಸಿ ಮಹೇಶ್ […]

Continue Reading

40 ನೇ ವಯಸ್ಸಿನಲ್ಲಿ ಈಜು ಕಲಿತು, ಇಂಗ್ಲಿಷ್ ಚಾನೆಲ್ ಈಜಿದ ಮೊದಲ ಮಂಗಳೂರಿಗನಾಗಿರುವದು ನನಗೆ ಹೆಮ್ಮೆ: ಡಾ. ಗುರುಪ್ರಸಾದ್

ಮಂಗಳೂರು: ಪುತ್ರನಿಗೆ ಈಜು ಕಲಿಸುವ ಉದ್ದೇಶದಿಂದ 40ನೇ ವಯಸ್ಸಿನಲ್ಲಿ ಈಜು ಕಲಿತಿದ್ದೇ ತನ್ನ ಬದುಕಿನ ಮಹತ್ವದ ತಿರುವಾಯಿತು. ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸದಿಂದ ಇಂಗ್ಲಿಷ್ ಚಾನೆಲ್ ರಿಲೇ ಈಜು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಗುರುಪ್ರಸಾದ್ ಹೇಳಿದರು. ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 3ರಂದು ಭಾರತದಿಂದ ಆರು ಸದಸ್ಯರ ತಂಡ ಇಂಗ್ಲೆಂಡ್‌ನಿಂದ ಫ್ರಾನ್ಸ್‌ವರೆಗೆ ಇಂಗ್ಲಿಷ್ ಚಾನೆಲ್ ರಿಲೇ ಈಜನ್ನು 13 ಗಂಟೆ 5 ನಿಮಿಷಗಳಲ್ಲಿ […]

Continue Reading

ಜೆಇಇ, ಸಿಇಟಿ ಪರೀಕ್ಷೆಯಲ್ಲಿ ಅನೀಶ್ ನಾಯ್ಕ್‌ ಸಾಧನೆ, ಅರ್ಜುನ ವಿಜ್ಞಾನ ಪಿಯು ಕಾಲೇಜು, ಬಾಲ ಮಂದಿರ ಶಾಲೆಯಿಂದ ಸನ್ಮಾನ

ಕಾರವಾರ: ರಾಷ್ಟ್ರೀಯ ಪರೀಕ್ಷಾ ಮಂಡಳಿ ನಡೆಸುವ ಜೆಇಇ ಹಾಗೂ ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಅತ್ಯುತ್ತಮ ರ್ಯಾಂಕ್ ಗಳಿಸಿ ಗಮನಾರ್ಹ ಸಾಧನೆ ಮಾಡಿದ ವಿದ್ಯಾರ್ಥಿ ಅನೀಶ್ ನಾಯ್ಕ್ ಅವರನ್ನು ಧಾರವಾಡ ಅರ್ಜುನ ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯ, ಕಾರವಾರ ಬಾಲ ಮಂದಿರ ಪ್ರೌಢಶಾಲೆ ಆಶ್ರಯದಲ್ಲಿ ಸನ್ಮಾನಿಸಲಾಯಿತು. ಅನೀಶ್ ನಾಯ್ಕ್ ದ್ವಿತೀಯ ಪಿಯುಸಿಯಲ್ಲಿ ಶೇ 96 ಅಂಕ ಗಳಿಸಿದ್ದು, ಜೆಇಇ ಮೇನ್ಸ್‌ನಲ್ಲಿ 99.56 ಪರ್ಸೆಂಟೈಲ್, ಜೆಇಇ ಅಡ್ವಾನ್ಸ್‌ನಲ್ಲಿ 5,809ನೇ ರ‍್ಯಾಂಕ್ ಹಾಗೂ ಕರ್ನಾಟಕ ಸಿಇಟಿಯಲ್ಲಿ 892ನೇ ರ‍್ಯಾಂಕ್ […]

Continue Reading