ಹರ್ ಘರ್ ತಿರಂಗಾ’ ರಾಜ್ಯ ಸಂಚಾಲಕಿಯಾಗಿ ರೂಪಾಲಿ ನಾಯ್ಕ ನೇಮಕ

ಕಾರವಾರ: ಬಿಜೆಪಿ ಮಹತ್ವಾಕಾಂಕ್ಷೆಯ ‘ಹರ್ ಘರ್ ತಿರಂಗಾ’ ಅಭಿಯಾನದ ಕರ್ನಾಟಕ ರಾಜ್ಯ ಸಂಚಾಲಕಿಯಾಗಿ ಬಿಜೆಪಿ ರಾಜ್ಯ ಉಪಾಧ್ಯಕ್ಷೆ ಹಾಗೂ ಕಾರವಾರ–ಅಂಕೋಲಾ ಕ್ಷೇತ್ರದ ಮಾಜಿ ಶಾಸಕಿ ರೂಪಾಲಿ ಎಸ್. ನಾಯ್ಕ ಅವರನ್ನು ನೇಮಕ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವ ಅಂಗವಾಗಿ ರಾಜ್ಯಾದ್ಯಂತ ನಡೆಯಲಿರುವ ಅಭಿಯಾನದ ನೇತೃತ್ವವನ್ನು ಅವರು ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ರೂಪಾಲಿ ನಾಯ್ಕ ಅವರಿಗೆ ಈ ಮಹತ್ವದ ಜವಾಬ್ದಾರಿ ವಹಿಸಲಾಗಿದ್ದು, ಸಮಿತಿಯ ಸಹ ಸಂಚಾಲಕರಾಗಿ ಶಾಸಕರಾದ ಹರೀಶ್ ಪೂಂಜಾ, ಬಸವರಾಜ್ ಹಾಗೂ ಲಿಂಗರಾಜ್ […]

Continue Reading

ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾವ್ 146 ನೇ ಜನ್ಮದಿನ, ಸಹಕಾರಿ ದಿಗ್ಗಜನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ರಾಜೇಂದ್ರ ಕುಮಾರ್

ಮಂಗಳೂರು: ಮೊಳಹಳ್ಳಿ ಶಿವರಾವ್ ಅವರು ತಮ್ಮ ಇಡೀ ಜೀವನವನ್ನು ಸಹಕಾರಿ ಚಳವಳಿಯ ಅಭಿವೃದ್ಧಿಗೆ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ. ಅವರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಮೌಲ್ಯಗಳನ್ನು ಅನುಸರಿಸುತ್ತಲೇ ಸಹಕಾರಿ ಕ್ಷೇತ್ರ ಮತ್ತಷ್ಟು ಬಲಿಷ್ಠವಾಗಿ ಬೆಳೆಯುತ್ತಿದೆ, ಸಹಕಾರಿ ಕ್ಷೇತ್ರಕ್ಕೆ ದಿಕ್ಸೂಚಿ ಹಾಕಿಕೊಟ್ಟ ಮಹಾನ್ ವ್ಯಕ್ತಿ ಎಂದು ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಹೇಳಿದರು. ಸಹಕಾರಿ ಪಿತಾಮಹ’ ಮೊಳಹಳ್ಳಿ ಶಿವರಾವ್ ಅವರ 146 ನೇ ಜನ್ಮದಿನದ ಅಂಗವಾಗಿ ಮಂಗಳವಾರ ನಡೆದ ಕಾರ್ಯಕ್ರಮಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ […]

Continue Reading

ಶಾಸಕರು ರಾಜೀನಾಮೆ ಕೊಟ್ಟರೆ ಎರಡೇ ನಿಮಿಷದಲ್ಲಿ ಅಂಗೀಕಾರ, ಅಸಮಾಧಾನಿತರಿಗೆ ಡಿಕೆ ಶಿವಕುಮಾರ್ ಖಡಕ್ ಸಂದೇಶ

ಬೆಂಗಳೂರು: ಸಚಿವ ಸ್ಥಾನ ಹಾಗೂ ನಿಗಮ-ಮಂಡಳಿಗಳ ನೇಮಕಾತಿ ವಿಚಾರವಾಗಿ ಪಕ್ಷದೊಳಗಿನ ಅಸಮಾಧಾನದ ನಡುವೆಯೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಸಮಾಧಾನಿತ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರು ರಾಜೀನಾಮೆ ನೀಡಲು ಮುಂದಾದರೆ ಅದನ್ನು ವಿಳಂಬವಿಲ್ಲದೆ ಅಂಗೀಕರಿಸುವಂತೆ ಸೂಚಿಸಿರುವುದಾಗಿ ಅವರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ಪಕ್ಷವೇ ಮುಖ್ಯ, ಪಕ್ಷದ ಶಿಸ್ತು ಎಲ್ಲಕ್ಕಿಂತ ಮುಖ್ಯ. ಯಾರೊಬ್ಬರ ವೈಯಕ್ತಿಕ ಆಸೆ-ಆಕಾಂಕ್ಷೆಗಳಿಗಿಂತ ಪಕ್ಷದ ಹಿತವೇ ಮೇಲು” ಎಂದು ಸ್ಪಷ್ಟಪಡಿಸಿದರು. ಹಿಂದಿನ ರಾಜಕೀಯ ಬೆಳವಣಿಗೆಗಳನ್ನು ಉಲ್ಲೇಖಿಸಿದ ಅವರು, ಮಾಜಿ […]

Continue Reading

ವಿಶೇಷ ಪ್ರದರ್ಶನಗಳಲ್ಲೇ ಪ್ರೇಕ್ಷಕರ ಮನ ಗೆದ್ದ ‘ಓಹ್ ಮೈ ಡಾಗ್’; ಅ. 7 ರಂದು ವಿಶ್ವಾದ್ಯಂತ ತೆರೆಗೆ

ಬೆಂಗಳೂರು: ಬಿಡುಗಡೆಯಾಗುವ ಮುನ್ನವೇ ದೇಶದಾದ್ಯಂತ ನಡೆದ ವಿಶೇಷ ಪ್ರದರ್ಶನಗಳ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿರುವ ‘ಓಹ್ ಮೈ ಡಾಗ್’ ಚಿತ್ರವು ಆಗಸ್ಟ್ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ನಿರ್ಮಾಪಕ-ನಿರ್ದೇಶಕ ಅಮಿತ್ ರೈ ಅವರ ಈ ಕೌಟುಂಬಿಕ ಮನರಂಜನಾ ಚಿತ್ರವು ಭಾವನಾತ್ಮಕ ಕಥಾಹಂದರ, ಮನುಷ್ಯ ಮತ್ತು ಶ್ವಾನಗಳ ನಡುವಿನ ಆತ್ಮೀಯ ಸಂಬಂಧ ಹಾಗೂ ಪ್ರಾಣಿ ದಯೆಯ ಸಂದೇಶದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ. ಸಾಮಾನ್ಯವಾಗಿ ಬಿಡುಗಡೆಯ ಮುನ್ನ ಭಾರೀ ಪ್ರಮಾಣದ ಜಾಹೀರಾತು ಮತ್ತು ಪ್ರಚಾರಕ್ಕೆ ಒತ್ತು ನೀಡುವ […]

Continue Reading

10 ಲಕ್ಷ ಕೊಟ್ಟರೆ ಫೈಲ್ ಕ್ಲಿಯರ್’… 5.50 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ

ಮೈಸೂರು: ಕಂದಾಯ ಮೇಲ್ಮನವಿ ಪ್ರಕರಣ ಇತ್ಯರ್ಥಪಡಿಸಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ಆರೋಪದ ನಡುವೆ, 2ನೇ ಕಂತಿನ 5.50 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗಲೇ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧನ ಮಾಡಿದ್ದಾರೆ. ಈ ಕಾರ್ಯಾಚರಣೆ ಮೈಸೂರು ಜಿಲ್ಲೆಯಲ್ಲಿ ಭಾರೀ ಸಂಚಲನಕ್ಕೆ ಕಾರಣ ಆಗಿದೆ. ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರ 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಲಯ ಆದೇಶ […]

Continue Reading

ಲೇಖಕ ಜಗದೀಶ್ ಅಂಚನ್ ಅವರ ’ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆಗೊಳಿಸಿದ ಡಾ. ರಾಜೇಂದ್ರಕುಮಾರ್

ಮಂಗಳೂರು: ಸಹಕಾರ ಚಳವಳಿಗೆ ಜೀವನವನ್ನೇ ಸಮರ್ಪಿಸಿದ ದಾರ್ಶನಿಕ ನಾಯಕ ಮೊಳಹಳ್ಳಿ ಶಿವರಾವ್ ಅವರ ಜೀವನ ಸಾಧನೆ, ಸಮಾಜಮುಖಿ ಚಿಂತನೆ ಹಾಗೂ ಸಹಕಾರ ಕ್ಷೇತ್ರಕ್ಕೆ ನೀಡಿದ ಅಪೂರ್ವ ಕೊಡುಗೆಯನ್ನು ದಾಖಲಿಸುವ ‘ತ್ಯಾಗಮಯಿ ಮೊಳಹಳ್ಳಿ’ ಕೃತಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಬಿಡುಗಡೆಗೊಳಿಸಿದರು. ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್. ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ರಚಿಸಿರುವ ಈ ಕೃತಿ ಲೋಕಾರ್ಪಣೆಗೊಂಡಿತು. ಬಳಿಕ ಮಾತನಾಡಿದ ಡಾ. ಎಂ.ಎನ್. ರಾಜೇಂದ್ರ ಕುಮಾರ್, ಸಹಕಾರ […]

Continue Reading

ಸಾವಿರಾರು ಉದ್ಯೋಗಗಳ ಅವಕಾಶ: ಅ. 7-8ರಂದು ಮೂಡುಬಿದಿರೆಯಲ್ಲಿ ‘ಆಳ್ವಾಸ್ ಪ್ರಗತಿ-2026’: ಪ್ರಸಾದ ಶೆಟ್ಟಿ

ಕಾರವಾರ: ಉದ್ಯೋಗದ ನಿರೀಕ್ಷೆಯಲ್ಲಿ ಇರುವ ಪದವೀಧರರು, ತಾಂತ್ರಿಕ ಶಿಕ್ಷಣ ಪಡೆದವರು ಹಾಗೂ ಅನುಭವಿ ಅಭ್ಯರ್ಥಿಗಳಿಗೆ ಒಂದೇ ವೇದಿಕೆಯಲ್ಲಿ ಸಾವಿರಾರು ಉದ್ಯೋಗಾವಕಾಶಗಳನ್ನು ಕಲ್ಪಿಸುವ ‘ಆಳ್ವಾಸ್ ಪ್ರಗತಿ-2026’ ಬೃಹತ್ ಉದ್ಯೋಗ ಮೇಳವು ಆಗಸ್ಟ್ 7 ಮತ್ತು 8ರಂದು ಮೂಡುಬಿದಿರೆಯ ಆಳ್ವಾಸ್ ವಿದ್ಯಾಗಿರಿ ಆವರಣದಲ್ಲಿ ನಡೆಯಲಿದೆ. ದೇಶದ ವಿವಿಧ ಕ್ಷೇತ್ರಗಳ 350ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಲಿದ್ದು, 24 ಸಾವಿರಕ್ಕೂ ಅಧಿಕ ಹುದ್ದೆಗಳಿಗೆ ನೇರ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರಸಾದ ಶೆಟ್ಟಿ […]

Continue Reading

ನಾಲ್ಕನೇ ಬಾರಿ ಸಚಿವರಾಗಿ ಶಿವರಾಜ್ ತಂಗಡಗಿ: ವಿದ್ಯಾರ್ಥಿ ನಾಯಕನಿಂದ ಸಂಪುಟದ ಹಿರಿಯ ಮುಖಂಡ,ನಾಗುವವರೆಗೆ ರಾಜಕೀಯ ಪಯಣ

ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಇಳಕಲ್‌ ಸಾಮಾನ್ಯ ಕುಟುಂಬದಿಂದ ರಾಜಕೀಯ ಬದುಕು ಆರಂಭಿಸಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಛಾಪು ಮೂಡಿಸಿರುವ ಶಿವರಾಜ್ ಎಸ್. ತಂಗಡಗಿ ಅವರು ಮತ್ತೊಮ್ಮೆ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದಲ್ಲಿ ಅವರು ನಾಲ್ಕನೇ ಬಾರಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದು, ಅವರ ರಾಜಕೀಯ ಜೀವನಕ್ಕೆ ಮತ್ತೊಂದು ಮಹತ್ವದ ಮೈಲಿಗಲ್ಲು ಸೇರ್ಪಡೆಯಾಗಿದೆ. 1971ರ ಜೂನ್ 10ರಂದು ಸಂಗಪ್ಪ ತಂಗಡಗಿ ಹಾಗೂ ಹುಲಿಗೆಮ್ಮ ದಂಪತಿಯ ಹಿರಿಯ ಪುತ್ರನಾಗಿ ಜನಿಸಿದ ಶಿವರಾಜ್ ತಂಗಡಗಿ ಅವರು […]

Continue Reading

ರಾಜ್ಯ ಸಚಿವ ಸಂಪುಟ ವಿಸ್ತರಣೆ ಪೂರ್ಣ: 20 ಮಂದಿಗೆ ಸಚಿವ ಸ್ಥಾನ, 13 ಹೊಸ ಮುಖಗಳಿಗೆ ಅವಕಾಶ,  ಹೆಬ್ಬಾಳಕರ್, ಆರ್ವಿಡಿಗೆ ನಿರಾಶೆ

ಬೆಂಗಳೂರು:  ಹಲವು ದಿನಗಳ ರಾಜಕೀಯ ಚರ್ಚೆ, ಲೆಕ್ಕಾಚಾರ ಮತ್ತು ತೀವ್ರ ನಿರೀಕ್ಷೆಗೆ ತೆರೆ ಬಿದ್ದಿದ್ದು, ರಾಜ್ಯ ಸರ್ಕಾರದ ಸಚಿವ ಸಂಪುಟವನ್ನು ಸೋಮವಾರ ವಿಸ್ತರಿಸಲಾಗಿದೆ. ಒಟ್ಟು 20 ಮಂದಿ ಶಾಸಕರು ಸಚಿವರಾಗಿ ಆಯ್ಕೆಯಾಗಿದ್ದು, ಅವರ ಅಧಿಕೃತ ಪಟ್ಟಿಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಈ ಪೈಕಿ 13 ಮಂದಿ ಮೊದಲ ಬಾರಿಗೆ ಸಚಿವ ಸಂಪುಟ ಪ್ರವೇಶಿಸಿದ್ದು, ಒಬ್ಬ ಮಹಿಳಾ ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ನೂತನ ಸಚಿವರು ಸೋಮವಾರ ಸಂಜೆ ಬೆಂಗಳೂರಿನ ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಸಚಿವ […]

Continue Reading

ಉತ್ತರ ಕನ್ನಡಕ್ಕೆ ಮತ್ತೆ ಸಚಿವ ಸ್ಥಾನ: ಮಂಕಾಳ್ ಎಸ್. ವೈದ್ಯ ಸಂಪುಟಕ್ಕೆ ಸೇರ್ಪಡೆ

ಬೆಂಗಳೂರು:  ರಾಜ್ಯ ಸಚಿವ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಕ್ಷೇತ್ರದ ಶಾಸಕ ಮಂಕಾಳ್ ಎಸ್. ವೈದ್ಯ ಅವರಿಗೆ ಸಚಿವ ಸ್ಥಾನ ದೊರೆತಿದ್ದು, ಜಿಲ್ಲೆಯ ರಾಜಕೀಯ ವಲಯದಲ್ಲಿ ಹೊಸ ಚೈತನ್ಯ ಮೂಡಿದೆ. ಸಚಿವ ಸಂಪುಟದಲ್ಲಿ ಉತ್ತರ ಕನ್ನಡಕ್ಕೆ ಮತ್ತೆ ಪ್ರಾತಿನಿಧ್ಯ ಸಿಕ್ಕಿರುವುದು ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ಬೆಳವಣಿಗೆಯಾಗಿ ಪರಿಗಣಿಸಲಾಗಿದೆ. ಮಂಕಾಳ್ ಎಸ್. ವೈದ್ಯ ಅವರು ಕಾಂಗ್ರೆಸ್‌ನ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ನಾಯಕರಾಗಿದ್ದು, ಪಕ್ಷದ ನಾಯಕತ್ವದ ವಿಶ್ವಾಸ ಗಳಿಸಿರುವ ಮುಖಂಡರಲ್ಲಿ ಒಬ್ಬರಾಗಿದ್ದಾರೆ. ಕ್ಷೇತ್ರದ ಜನರೊಂದಿಗೆ […]

Continue Reading