ತಿರುವನಂತಪುರಂ: ಕೇರಳದಲ್ಲಿ ಅಧಿಕಾರದ ಚುಕ್ಕಾಣೆ ಹಿಡಿದಿರುವ ಯುಡಿಎಫ್ ಸರ್ಕಾರವು ನೂತನ ಸಚಿವ ಸಂಪುಟಕ್ಕೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಅಸ್ತು ಎಂದಿದ್ದಾರೆ. ಸಿಎಂ ಸಂಪುಟ ಖಾತೆಗಳನ್ನು ಹಂಚಿಕೆ ಮಾಡಿ ರಾಜ್ಯಪಾಲರಿಂದ ಅನುಮೋದನೆ ಪಡೆದಿದ್ದಾರೆ.
ವಿ. ಡಿ. ಸತೀಶನ್ (ಮುಖ್ಯಮಂತ್ರಿ): ಹಣಕಾಸು, ಕಾನೂನು, ಕೇರಳ ಫೈನಾನ್ಷಿಯಲ್ ಕಾರ್ಪೊರೇಷನ್, ಬಂದರ್, ಮಾಲಿನ್ಯ ನಿಯಂತ್ರಣ, ವಿಮಾನ ನಿಲ್ದಾಣಗಳು, ಮೆಟ್ರೋ ರೈಲು, ರೈಲ್ವೆ ಮತ್ತು ಇತರೆ ಉಳಿದಿರುವ ಖಾತೆ
ರಮೇಶ್ ಚೆನ್ನಿತ್ತಲ: ಗೃಹ ಇಲಾಖೆ, ವಿಜಿಲೆನ್ಸ್, ಅಗ್ನಿಶಾಮಕ ಮತ್ತು ತುರ್ತು ಸೇವೆ, ಕಾರಾಗೃಹ
ಸನ್ನಿ ಜೋಸೆಫ್ (ಕೆಪಿಸಿಸಿ ಅಧ್ಯಕ್ಷ): ವಿದ್ಯುತ್, ಪರಿಸರ, ಸಂಸದೀಯ ವ್ಯವಹಾರಗಳು ಮತ್ತು ಅನೆರ್ಟ್ .
ಕೆ. ಮುರಳೀಧರನ್: ಆರೋಗ್ಯ, ವೈದ್ಯಕೀಯ ಶಿಕ್ಷಣ, ವೈದ್ಯಕೀಯ ವಿಶ್ವವಿದ್ಯಾಲಯ, ಆಯುಷ್, ಡ್ರಗ್ಸ್ ಕಂಟ್ರೋಲ್ ಮತ್ತು ದೇವಸ್ವಂ.
ಎ.ಪಿ. ಅನಿಲ್ ಕುಮಾರ್: ಭೂ ಕಂದಾಯ, ಸಮೀಕ್ಷೆ ಮತ್ತು ಭೂ ದಾಖಲೆಗಳು ಮತ್ತು ಭೂ ಸುಧಾರಣೆಗಳು.
ಪಿ. ಸಿ. ವಿಷ್ಣುನಾಥ್: ಪ್ರವಾಸೋದ್ಯಮ, ಸಂಸ್ಕೃತಿ ಮತ್ತು ಕೇರಳ ರಾಜ್ಯ ಚಲನಚಿತ್ರ ಅಭಿವೃದ್ಧಿ ನಿಗಮ
ಎಂ. ಲಿಜು: ಸಹಕಾರ ಮತ್ತು ಅಬಕಾರಿ
ರೋಜಿ ಎಂ. ಜಾನ್: ಕಾಲೇಜು ಶಿಕ್ಷಣ, ತಾಂತ್ರಿಕ ಶಿಕ್ಷಣ, ವಿಶ್ವವಿದ್ಯಾಲಯಗಳು (ಕೃಷಿ, ಪಶುವೈದ್ಯಕೀಯ, ಮೀನುಗಾರಿಕೆ, ವೈದ್ಯಕೀಯ ಮತ್ತು ಡಿಜಿಟಲ್ ಹೊರತುಪಡಿಸಿ), ಪ್ರವೇಶ ಪರೀಕ್ಷೆ, ಎನ್‌ಸಿಸಿ ಮತ್ತು ಅಸ್ಯಾಪ್ ಕೇರಳ
ಟಿ. ಸಿದ್ದಿಕಿ: ಕೃಷಿ, ಮಣ್ಣಿನ ಸಮೀಕ್ಷೆ ಮತ್ತು ಮಣ್ಣಿನ ಸಂರಕ್ಷಣೆ, ಕೇರಳ ಕೃಷಿ ವಿಶ್ವವಿದ್ಯಾಲಯ ಮತ್ತು ಉಗ್ರಾಣ ನಿಗಮ.
ಕೆ.ಎ. ತುಳಸಿ: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ
ಬಿಂದು ಕೃಷ್ಣ: ಕಾರ್ಮಿಕ, ಪಶುಸಂಗೋಪನೆ, ಹಾಲು ಮಾರಾಟ ಸಹಕಾರ ಸಂಘಗಳು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ವಿ.ಇ. ಅಬ್ದುಲ್ ಗಫೂರ್ (ಲೀಗ್) : ಮೀನುಗಾರಿಕೆ, ಹಾರ್ಬರ್ ಇಂಜಿನಿಯರಿಂಗ್ ಮತ್ತು ಸಾಮಾಜಿಕ ನ್ಯಾಯ.
ಮೊನ್ಸ್ ಜೋಸೆಫ್ (ಕೇರಳ ಕಾಂಗ್ರೆಸ್): ನೀರಾವರಿ ಇಲಾಖೆ
ಅನೂಪ್ ಜೇಕಬ್ (ಕೇರಳ ಕಾಂಗ್ರೆಸ್ – ಜೇಕಬ್): ಆಹಾರ ಮತ್ತು ನಾಗರಿಕ ಸರಬರಾಜು, ಗ್ರಾಹಕ ವ್ಯವಹಾರಗಳು ಮತ್ತು ಕಾನೂನು ಮಾಪನ ಶಾಸ್ತ್ರ.
ಶಿಬು ಬೇಬಿ ಜಾನ್ (ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ.
ಸಿ.ಪಿ. ಜಾನ್ (ಕಮ್ಯುನಿಸ್ಟ್ ಮಾರ್ಕ್ಸ್‌ವಾದಿ ಪಕ್ಷ – ರಸ್ತೆ ಸಾರಿಗೆ, ಮೋಟಾರು ವಾಹನಗಳು ಮತ್ತು ಜಲ ಸಾರಿಗೆ
ಒ.ಜೆ. ಜನೀಶ್: ಕ್ರೀಡೆ, ಯುವಜನ ವ್ಯವಹಾರಗಳು, ಪ್ರಾಣಿ ಸಂಗ್ರಹಾಲಯಗಳು ಮತ್ತು ವಸ್ತು ಸಂಗ್ರಹಾಲಯ
ಪಿ.ಕೆ. ಕುಂಞಾಲಿಕುಟ್ಟಿ (ಮುಸ್ಲಿಂ ಲೀಗ್) : ಕೈಗಾರಿಕೆ ಮತ್ತು ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ .
ಎನ್. ಶಂಸುದ್ದೀನ್(ಲೀಗ್) : ಸಾರ್ವಜನಿಕ ಶಿಕ್ಷಣ, ವಕ್ಫ್, ಹಜ್ ಯಾತ್ರೆ ಮತ್ತು ಅಲ್ಪಸಂಖ್ಯಾತರ ಕಲ್ಯಾಣ.
ಕೆ.ಎಂ. ಶಾಜಿ (ಲೀಗ್) : ಪಂಚಾಯತ್ ಮತ್ತು ಗ್ರಾಮೀಣಾಭಿವೃದ್ಧಿ.
ಪಿ.ಕೆ. ಬಶೀರ್ ( ಲೀಗ್) : ಸಾರ್ವಜನಿಕ ಲೋಕೋಪಯೋಗಿ ಇಲಾಖೆ
What do you feel about this post?
Like
Love
Happy
Haha
Sad
