ಮೂಡುಬಿದಿರೆ: ಮಂಗಳೂರು ವಿವಿ ಕ್ಯಾಂಪಸ್‌ನಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾಲಯದ ಅಂತರ ಕಾಲೇಜು ಮಹಿಳೆಯರ ಥ್ರೋಬಾಲ್ ಪಂದ್ಯಾಟದಲ್ಲಿ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿಯರು ಅದ್ಭುತ ಪ್ರದರ್ಶನ ನೀಡಿ, 21ನೇ ಬಾರಿಯೂ ಚಾಂಪಿಯನ್ ಕಿರೀಟ ಮುಡಿಗೇರಿಸಿಕೊಂಡು, ಪೂರ್ಣಪ್ರಜ್ಞಾ ರೋಲಿಂಗ್ ಟ್ರೋಫಿ ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಕ್ವಾರ್ಟರ್ ಫೈನಲ್ ಮಡಂತ್ಯಾರ್ ಸೇಕ್ರೆಡ್ ಹಾರ್ಟ್ ಕಾಲೇಜಿನ ತಂಡವನ್ನು ಆಳ್ವಾಸ್ ತಂಡ 25 -10 ಹಾಗೂ 25-12 ಅಂಕಗಳ ನೇರ ಸೆಟ್‌ನಲ್ಲಿ ಮಣಿಸಿತು. ಸೆಮಿಫೈನಲ್‌ನಲ್ಲಿ ಹಂಪನಕಟ್ಟೆಯ ವಿಶ್ವವಿದ್ಯಾಲಯ ಕಾಲೇಜಿನ ವಿರುದ್ಧ 25-18 ಹಾಗೂ 25-12 ಅಂಕಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿತು.
ಫೈನಲ್ ಹಣಾಹಣಿಯಲ್ಲಿ ಮಂಗಳೂರು ವಿವಿ ಕ್ಯಾಂಪಸ್ ತಂಡವನ್ನು 25-18 ಮತ್ತು 25-16 ಅಂಕಗಳ ನೇರ ಸೆಟ್‌ನಿಂದ ಸೋಲಿಸಿ ಆಳ್ವಾಸ್ ಚಾಂಪಿಯನ್ ಷಿಪ್ ಕಿರೀಟವನ್ನು ತನ್ನದಾಗಿಸಿಕೊಂಡಿತು.
ವಿಜೇತ ತಂಡವನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದಿಸಿದ್ದಾರೆ.
What do you feel about this post?
Like
Love
Happy
Haha
Sad
