ಹೃದಯಾಘಾತ: ಹಿರಿಯ ನಟ ನಾನಾ ಪಾಟೇಕರ್ ನಿಧನ

ಅಂತರ ಜಿಲ್ಲೆ ದೇಶ ವಿದೇಶ ಮಹಾನಗರ ಸಿನಿಮಾ

Spread the love

ನವದೆಹಲಿ: ಹಿರಿಯ ನಟ ಹಾಗೂ ಚಿತ್ರ ನಿರ್ದೇಶಕ ನಾನಾ ಪಾಟೇಕರ್ (75) ಅವರು ಗೋವಾದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು.

ರಾತ್ರಿ ತಲೆನೋವು ಕಾಣಿಸಿಕೊಂಡಿತ್ತು. ಬಳಿಕ ಅವರು ನಾನಾ ಪಾಟೇಕರ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಆಸ್ಪತ್ರೆಗೆ ದಾಖಲಿಸಿದ ಬಳಿಕ ವೈದ್ಯರು 45 ನಿಮಿಷಗಳ ಕಾಲ ಹೃದಯ ಪುನಶ್ಚೇತನಕ್ಕೆ ಪ್ರಯತ್ನಿಸಿದರೂ ಯಾವುದೇ ಸ್ಪಂದನೆ ಸಿಗಲಿಲ್ಲ. ಬೆಳಿಗ್ಗೆ 5.20ಕ್ಕೆ ಅವರು ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಾನಾ ಪಾಟೇಕರ್ ಅವರ ಪುತ್ರ ಮಲ್ಹಾರ್ ಪಾಟೇಕರ್ ಪುಣೆಯಲ್ಲಿದ್ದು, ತಂದೆ ನಿಧನದ ಸುದ್ದಿ ತಿಳಿದ ಬಳಿಕ ಗೋವಾಕ್ಕೆ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮೂರು ರಾಷ್ಟ್ರೀಯ ಪ್ರಶಸ್ತಿ

ನಟ ನಾನಾ ಪಾಟೇಕರ್ ಅವರು ತಮ್ಮ ವಿಶಿಷ್ಟ ಅಭಿನಯ, ಸಂಭಾಷಣೆ ಹೇಳುವ ಶೈಲಿ ಹಾಗೂ ವಿಭಿನ್ನ ಪಾತ್ರಗಳ ಮೂಲಕ ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ್ದರು.

1978 ರಲ್ಲಿ ಬಿಡುಗಡೆಯಾದ ‘ಗಮನ್’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ‘ಪರಿಂಡಾ’, ‘ವಜೂದ್’, ‘ಯಶವಂತ್’, ‘ಅಬ್ ತಕ್ ಛಪ್ಪನ್’, ‘ನಟಸಮ್ರಾಟ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದರು.

‘ವೆಲ್ಕಮ್’ (2007) ಚಿತ್ರದಲ್ಲಿ ಉದಯ್ ಶೆಟ್ಟಿ ಪಾತ್ರದ ಮೂಲಕ ಅವರು ಮತ್ತಷ್ಟು ಜನಪ್ರಿಯರಾಗಿದ್ದರು. ‘ವೆಲ್ಕಮ್ ಬ್ಯಾಕ್’, ‘ಹೌಸ್‌ಫುಲ್ 5’, ‘ರಾಜ್‌ನೀತಿ’ ಸೇರಿದಂತೆ ಹಲವು ಚಿತ್ರಗಳಲ್ಲಿಯೂ ಅಭಿನಯಿಸಿದ್ದರು.

ಮರಾಠಿ ಚಿತ್ರ ‘ನಟಸಮ್ರಾಟ್’ನ ಅಭಿನಯಕ್ಕಾಗಿ 2016ರಲ್ಲಿ ಫಿಲ್ಮ್‌ಫೇರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದರು. ಚಿತ್ರರಂಗ ಹಾಗೂ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ 2013ರಲ್ಲಿ ಪದ್ಮಶ್ರೀ ಪ್ರಶಸ್ತಿಯೂ ಅವರಿಗೆ ಲಭಿಸಿತ್ತು.

ನಟನೆಯ ಜತೆಗೆ ‘ಯಶವಂತ್’, ‘ವಜೂದ್’ ಮತ್ತು ‘ಆಂಚ್’ ಚಿತ್ರಗಳಲ್ಲಿ ಹಿನ್ನೆಲೆ ಗಾಯಕರಾಗಿಯೂ ಅವರು ಕಾಣಿಸಿಕೊಂಡಿದ್ದರು.

ನಿಧನಕ್ಕೂ ನಾಲ್ಕು ದಿನಗಳ ಹಿಂದಷ್ಟೇ ಗೋವಾದ ಡೋನಾ ಪೌಲಾದಲ್ಲಿ ನಡೆದ ಸಾಮ್ರಾಟ್ ಕ್ಲಬ್ ಇಂಟರ್‌ನ್ಯಾಷನಲ್‌ನ ಪದಗ್ರಹಣ ಸಮಾರಂಭದಲ್ಲಿ ನಾನಾ ಪಾಟೇಕರ್ ಭಾಗವಹಿಸಿ ಮಾತನಾಡಿದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *