ಕಾರವಾರ: ಇಲ್ಲಿನ ನಗರಸಭೆಯ ವ್ಯಾಪ್ತಿಯ ನೀರು ಸರಬರಾಜು ಮಾಡುವ ಜೋನ್ 2 ರ ಪ್ರದೇಶದ 300 ಎಂಎಂ ನೀರಿನ ಮುಖ್ಯ ಕೊಳವೆ ಒಡೆದ ಪರಿಣಾಮ ಜೂನ್ 4 ರಿಂದ 7ರವರೆಗೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ನಗರಸಭೆಯ ಕಮಿಷನರ್ ಜಗದೀಶ್ ಬಿ. ಹುಲಗೆಜ್ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರವಾರ ನಗರದ ಕಾಜುಭಾಗ್, ಕೋಡಿಬಾಗ ಮುಖ್ಯ ರಸ್ತೆ, ಮಧ್ಯವಾಡ್, ಶಿವಾಜಿವಾಡ್ , ಟೋಲನಾಕಾ, ತಾಮಸೆವಾಡ್, ನದಿವಾಡ್, ಅಂಬೇಡ್ಕರ್ ಕಾಲೋನಿ, ತೆಲಂಗರೋಡ್, ಚಂದ್ರಾದೇವಿ, ಗಿಂಡಿವಾಡ್, ಸುಂಕೇರಿವರಿಗೆ ದುರಸ್ತೆ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದ್ದು, ಕಾಮಗಾರಿ ಪೂರ್ಣಗೊಂಡ ತಕ್ಷಣವೇ ನೀರು ಸರಬರಾಜು ಪುನರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ.
What do you feel about this post?
0%
Like
0%
Love
0%
Happy
0%
Haha
0%
Sad
0%
