ಮಂಗಳೂರು: ಸಾರಿ ವಾಕ್ ಅಂಡ್ ರನ್ ಲೋಗೊ ಬಿಡುಗಡೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಮಹಿಳೆಯರಲ್ಲಿ ಆರೋಗ್ಯ ಜಾಗೃತಿ ಹಾಗೂ ಸಾಂಪ್ರದಾಯಿಕ ಉಡುಗೆ ಸೀರೆಯ ಮಹತ್ವವನ್ನು ಸಾರುವ ಉದ್ದೇಶದಿಂದ ಮಂಗಳೂರಿನಲ್ಲಿ ಇದೇ 4 ರಂದು ನಾರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿರುವ ಸಾರಿ ವಾಕ್ ಅಂಡ್ ರನ್ ಲೋಗೊ ಅನಾವರಣ ಕಾರ್ಯಕ್ರಮ ಶುಕ್ರವಾರ ಬಿಜೈ ಜಯಲಕ್ಷ್ಮಿ ಬಟ್ಟೆ ಮಳಿಗೆಯಲ್ಲಿ ನಡೆಯಿತು.

ಮಂಗಳೂರಿನ ನಾರಿ ಕ್ಲಬ್ ತಂಡದ ನೇತೃತ್ವದಲ್ಲಿ ಮೈಸೂರು ಸಿಲ್ಕ್ ಕಾರ್ಪೊರೇಷನ್, ಫ್ರೀಡಂ ಆಯಿಲ್, ಮೈಸೂರು ಸ್ಯಾಂಡಲ್, ಜಯಲಕ್ಷ್ಮಿ ಬಿಜೈ, ಕೆನರಾ ಬ್ಯಾಂಕ್, ಆಭರಣ ಜ್ಯುವೆಲರ್ಸ್, ಎ.ಜೆ. ಆಸ್ಪತ್ರೆ, ಇನ್ನರ್‌ ವ್ಹೀಲ್ ಕ್ಲಬ್ ಮಂಗಳೂರು ನಾರ್ತ್ ಮತ್ತು ಸುರತ್ಕಲ್ ಸೇರಿದಂತೆ ವಿವಿಧ ಮಹಿಳಾ ಸಂಘಟನೆಗಳ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ಸಾಂಪ್ರದಾಯಿಕ ಉಡುಗೆ ಸೀರೆಯನ್ನು ಕೇಂದ್ರವಾಗಿಟ್ಟುಕೊಂಡು ಆರೋಗ್ಯ, ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಒಗ್ಗಟ್ಟಿನ ಸಂದೇಶವನ್ನು ಸಾರುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ.

ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೊ, ಇನ್ನರ್ ವ್ಹೀಲ್ ನಾರ್ಥ ಅಧ್ಯಕ್ಷೆ ಕವಿತಾ ಕಾಮತ್, ಫ್ರೀಡಂ ಆಯಿಲ್ ಏರಿಯಾ ಮ್ಯಾನೇಜರ್ ಸಂತೋಷ್, ಜಯಲಕ್ಷ್ಮಿ ಸಂಸ್ಥೆಯ ಮ್ಯಾನೇಜರ್ ಯೆಸ್ಪಾಲ್, ಕಾರ್ಯಕ್ರಮ ಆಯೋಜಕರಾದ ರಾಜೇಶ್ ರಾಮಯ್ಯ, ಉಪಾಸನಾ ತಂಡದ ಪ್ರತೀಕ್ಷಾ ಪ್ರಭು, ನಾರಿ ಕ್ಲಬ್ ಅಧ್ಯಕ್ಷೆ ರಾಧಿಕಾರಿ ಹೆಗ್ಡೆ, ಸಂಚಾಲಕಿ ಸ್ವಾತಿ ಶೆಣೈ ಸೇರಿದಂತೆ ಹಲವರು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *