ಮೂಡುಬಿದಿರೆ: ಗೋಪಾಲಕೃಷ್ಣ ದೇವಸ್ಥಾನದ 110ನೇ ವರ್ಷದ ಮೊಸರು ಕುಡಿಕೆ ಉತ್ಸವದ ಅಂಗವಾಗಿ ಜವನೆರ್ ಬೆದ್ರ ಫೌಂಡೇಶನ್ ಆಯೋಜಿಸಿರುವ ‘ಬೆದ್ರದ ಕೃಷ್ಣೋತ್ಸವ 2026’ರಲ್ಲಿ ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ ಅವರಿಗೆ ‘ಕೃಷ್ಣೋತ್ಸವ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.
ಸೆಪ್ಟೆಂಬರ್ 5ರಂದು ಮೂಡುಬಿದಿರೆಯ ಕೆ. ಅಮರನಾಥ ಶೆಟ್ಟಿ ವೃತ್ತದ ಬಳಿಯ ವೇಣೂರು ಕೃಷ್ಣಯ್ಯ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಜವನೆರ್ ಬೆದ್ರ ಫೌಂಡೇಶನ್ ಸ್ಥಾಪಕ ಅಮರ್ ಕೋಟೆ ತಿಳಿಸಿದ್ದಾರೆ.
ಶಿಕ್ಷಣ ಹಾಗೂ ಸಮಾಜಸೇವಾ ಕ್ಷೇತ್ರದ ಸೇವೆಗಾಗಿ ಯುವರಾಜ್ ಜೈನ್ ಅವರಿಗೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಶಿಕ್ಷಣ ಶ್ರೇಷ್ಠತಾ, ಕೇಶವಾನಂದ ಭಾರತಿ, ಕರ್ನಾಟಕದ ಅತ್ಯುತ್ತಮ ಶಿಕ್ಷಣ ಸಂಸ್ಥೆ, ಶಿಕ್ಷಣಭೀಷ್ಮ, ವಿಶ್ವಶಾಂತಿ ವಿದ್ಯಾ ಸೇವಾರತ್ನ, ಗ್ಲೋಬಲ್ ಅಂಬಾಸಿಡರ್ ಆಫ್ ಎಜುಕೇಷನ್ ಎಕ್ಸಲೆನ್ಸ್, ಮಿಲನಶ್ರೀ ಹಾಗೂ ಶಿಕ್ಷಣ ರತ್ನ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.


