ಮಂಗಳೂರು:ಜಾಗತಿಕವಾಗಿ ಜನಪ್ರಿಯವಾಗಿರುವ ತನ್ನ ಪ್ರೀಮಿಯಂ ಎನರ್ಜಿ ಡ್ರಿಂಕ್ ಬ್ರ್ಯಾಂಡ್ ‘ಅಡ್ರಿನಾಲಿನ್ ರಶ್’ ಅನ್ನು ಪೆಪ್ಸಿಕೋ ಇಂಡಿಯಾ ಮಂಗಳೂರಿನಲ್ಲಿ ಬಿಡುಗಡೆ ಮಾಡಿದೆ.
ಪ್ಯಾಶನ್ ರಶ್ ಮತ್ತು ಕ್ಲಾಸಿಕ್ ರಶ್ ಎಂಬ ಎರಡು ಫ್ಲೇವರ್ಗಳಲ್ಲಿ ಲಭ್ಯವಿರುವ ಈ ಎನರ್ಜಿ ಡ್ರಿಂಕ್ಗೆ ರೂ.60 ದರ ನಿಗದಿಪಡಿಸಲಾಗಿದೆ. ಯುವಜನರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ಉತ್ಪನ್ನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ಕಂಪನಿ ತಿಳಿಸಿದೆ.
ಭಾರತದಲ್ಲಿ ಎನರ್ಜಿ ಡ್ರಿಂಕ್ ವಿಭಾಗ ವೇಗವಾಗಿ ಬೆಳೆಯುತ್ತಿದ್ದು, ಗ್ರಾಹಕರ ಆಕಾಂಕ್ಷೆಗಳಿಗೆ ತಕ್ಕ ಉತ್ಪನ್ನಗಳನ್ನು ಒದಗಿಸುವ ಉದ್ದೇಶದಿಂದ ಅಡ್ರಿನಾಲಿನ್ ರಶ್ ಪರಿಚಯಿಸಲಾಗಿದೆ ಎಂದು ಪೆಪ್ಸಿಕೋ ಇಂಡಿಯಾದ ಬಿವರೇಜಸ್ ವಿಭಾಗದ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ತರುಣ್ ಭಗತ್ ತಿಳಿಸಿದ್ದಾರೆ.
ಪೆಪ್ಸಿಕೋ ಇಂಡಿಯಾದ ಎನರ್ಜಿ ಡ್ರಿಂಕ್ಸ್ ವಿಭಾಗದ ಮುಖ್ಯಸ್ಥರಾದ ದೀಕ್ಷಾ ಬಜಾಜ್ ಅವರು ಮಾತನಾಡಿ, “ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿ ಕೆಲಸ ಮಾಡಲು ಹೊರಡುವ ಹೊಸ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಅಡ್ರಿನಾಲಿನ್ ರಶ್ ಬಿಡುಗಡೆ ಮಾಡಿದ್ದೇವೆ. ಯುವ ಗ್ರಾಹಕರು ತಮ್ಮ ಗುರಿಗಳನ್ನು ಬೆನ್ನಟ್ಟಲು ಪ್ರೇರೇಪಿಸುವ ಬ್ರ್ಯಾಂಡ್ ಅನ್ನು ಕಟ್ಟುವುದು ನಮ್ಮ ಉದ್ದೇಶ ಎಂದರು.
What do you feel about this post?
Like
Love
Happy
Haha
Sad
