ಬೆಂಗಳೂರು: 15 ವರ್ಷ ವಯೋಮಿತಿಯೊಳಗಿನ ಬಾಲಕರಿಗಾಗಿ 14 ನೇ ಅಖಿಲ ಭಾರತ ಫುಟ್ಬಾಲ್ (5–ಎ–ಸೈಡ್) ಟೂರ್ನಿಯು ಆಗಸ್ಟ್ 23 ಮತ್ತು 24ರಂದು ಇಲ್ಲಿನ ಕುಕ್ಟೌನ್ ರಶ್ ಅರೆನಾ ಫುಟ್ಬಾಲ್ ಮೈದಾನದಲ್ಲಿ ನಡೆಯಲಿದೆ ಎಂದು ಆಯೋಜಕರಾದ ಡೆಂಜಿಲ್ ಫರ್ನಾಂಡಿಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಾಲೆಗಳು, ಕ್ಲಬ್ಗಳು, ಕ್ರೀಡಾ ಅಕಾಡೆಮಿಗಳು, ಸಂಘಗಳು ಹಾಗೂ ವಿವಿಧ ಕ್ರೀಡಾ ಗುಂಪುಗಳಿಗೆ ಟೂರ್ನಿಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. 2011ರ ಜನವರಿ 1 ಅಥವಾ ನಂತರ ಜನಿಸಿದ ಆಟಗಾರರು ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ಲೀಗ್ ಹಾಗೂ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಟೂರ್ನಿಯಲ್ಲಿ ಫೈನಲ್ಗೆ ತಲುಪುವ ತಂಡಗಳಿಗೆ ಆಕರ್ಷಕ ಟ್ರೋಫಿಗಳನ್ನು ನೀಡಲಾಗುವುದು. ಅಲ್ಲದೆ, ಉತ್ತಮ ಪ್ರದರ್ಶನ ತೋರಿದ ವೈಯಕ್ತಿಕ ಆಟಗಾರರಿಗೂ ವಿಶೇಷ ಟ್ರೋಫಿಗಳನ್ನು ಪ್ರದಾನ ಮಾಡಲಾಗುತ್ತದೆ.
ಆಟಗಾರರು ನೋಂದಣಿ ಸಂದರ್ಭದಲ್ಲಿ ತಮ್ಮ ಮೂಲ ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣಪತ್ರವನ್ನು ವಯೋಮಿತಿ ಪರಿಶೀಲನೆಗಾಗಿ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಆಯೋಜಕರು ತಿಳಿಸಿದ್ದಾರೆ.
ಯುವ ಫುಟ್ಬಾಲ್ ಆಟಗಾರರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಈ ಟೂರ್ನಿ ಉತ್ತಮ ವೇದಿಕೆಯಾಗಲಿದೆ. ಡೆನ್ಜ್ ಫೌಂಡೇಶನ್ ಈ ಸ್ಪರ್ಧೆಯನ್ನು ಆಯೋಜಿಸುತ್ತಿದೆ.
ಟೂರ್ನಿಯಲ್ಲಿ ಭಾಗವಹಿಸಲು ತಂಡಗಳ ನೋಂದಣಿಗೆ ಜುಲೈ 30 ಕೊನೆಯ ದಿನವಾಗಿದೆ. ಆಸಕ್ತ ತಂಡಗಳು denzsports@gmail.com](mailto:denzsports@gmail.com ಇ-ಮೇಲ್ ಮೂಲಕ ಸಂಪರ್ಕಿಸಬಹುದಾಗಿದ್ದು, ಹೆಚ್ಚಿನ ಮಾಹಿತಿಗಾಗಿ 8095810030 ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
What do you feel about this post?
Like
Love
Happy
Haha
Sad
