ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲ್ಲೂಕಿನ ಆರತಿಬೈಲ್ ನಲ್ಲಿ ನಡೆದ ಭೀಕರ ಅಪಘಾತದಲ್ಲಿ 7 ಮಂದಿ ಮೃತಪಟ್ಟಿರುವುದು ಜಿಲ್ಲೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಮಾಡಿದೆ.
ಕ್ರೂಸರ್ ಹಾಗೂ ಲಾರಿ ನಡುವೆ ನಡೆದ ಭೀಕರ ಅಪಘಾತ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ಪ್ರಯಾಣಿಸುವವರಲ್ಲಿ ಭಯ ಹುಟ್ಟಿಸಿದೆ. ಘಟನೆಯಲ್ಲಿ ಮೃತಪಟ್ಟವರು ಧಾರವಾಡದ ಬಸವರಾಜ್ ಕನಕನವರ್ (48), ಧಾರವಾಡ ಜಯನಗರದ ಅಭಿಷೇಕ ಈಶ್ವರ (28) ವರ್ಷ, ಸಾಧನಕೇರಿಯ ಅಕ್ಷಯ (26), ಸಪ್ತಾಪುರದ ಅಭಿಷೇಕ ಮಲ್ಲೇಶ ಮಡಬಾವಿ (26), ಕುರುಬಗಟ್ಟಿಯ ಸಂಜೀವ ಮೈಲಾರ ಅಂಗಡಿ (33), ಮುರುಗಾಮಠದ ಮಂಜುನಾಥ ಅಶೋಕ ಚುಳಕಿ (38) ಹಾಗೂ ಮೆಹಬೂಬನಗರದ ಸಚಿನ್ ( 26) ಎಂದು ಗುರುತಿಸಲಾಗಿದೆ.
9 ಮಂದಿ ಗೆಳೆಯರು ಧರ್ಮಸ್ಥಳ, ಕೊಲ್ಲೂರು ಪ್ರವಾಸಕ್ಕೆ ಕ್ರೂಸರ್ ಮೇಲೆ ಹೊರಟವರು ಸಾವಿನ ಮನೆ ಸೇರಿದ್ದಾರೆ. ಘಟನೆಯಿಂದ ಕೆಲಹೊತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಸ್ತವ್ಯಸ್ತವಾಯಿತು. ಘಟನೆಯ ಸುದ್ದಿ ತಿಳಿದ ತಕ್ಷಣವೇ ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್, ಡಿ.ವೈ.ಎಸ್.ಪಿ ಗೀತಾ ಪಾಟೀಲ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ, ಮೃತರ ಮರಣೋತ್ತರ ಪರೀಕ್ಷೆ ಕುರಿತಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
What do you feel about this post?
Like
Love
Happy
Haha
Sad



