ಮಂಗಳೂರು: ವೈದ್ಯರ ದಿನಾಚರಣೆಯ ಅಂಗವಾಗಿ ನಗರದ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರನ್ನು ಸನ್ಮಾನಿಸುವ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಕಳೆದ ಏಳು ದಶಕಗಳಿಂದ ತಾಯಿ ಮತ್ತು ಮಗುವಿನ ಆರೋಗ್ಯ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಎರಡೂ ಸಂಸ್ಥೆಗಳ ವೈದ್ಯರ ಸೇವೆಯನ್ನು ಕಾರ್ಯಕ್ರಮದಲ್ಲಿ ಸ್ಮರಿಸಲಾಯಿತು.

ಹಿರಿಯ ವೈದ್ಯರಾದ ಡಾ. ಆರ್.ಎಲ್. ಕಾಮತ್, ಡಾ. ಎಸ್.ಆರ್. ನಾಯಕ್, ಡಾ. ಅಶ್ಫಾಕ್, ಡಾ. ಸುರೇಶ್ ಶೆಟ್ಟಿ, ಡಾ. ಶ್ರದ್ಧಾ ಶೆಟ್ಟಿ, ಡಾ. ಪ್ರಿಯಾ ಬಲ್ಲಾಳ್, ಡಾ. ಅನುಪಮಾ ಸುರೇಶ್, ಡಾ. ನಿಖಿಲ್ ಶೆಟ್ಟಿ, ಡಾ. ಭಾರತಿ ರಾವ್, ಡಾ. ಸಂತೋಷ್ ರೈ, ಡಾ. ರಂಜನ್, ಡಾ. ಸುಮೇಶ್ ರಾವ್, ಡಾ. ನೂತನ್ ಕಾಮತ್, ಡಾ. ಸುಚೇತಾ ರಾವ್, ಡಾ. ಪುಂಡಲೀಕ ಬಾಳಿಗಾ, ಡಾ. ಶ್ರದ್ಧಾ ಪೂಜಾರಿ, ಡಾ. ಜಗದೀಶ್, ಡಾ. ದಯಾನಂದ್ ಹಾಗೂ ಡಾ. ಸದಾನಂದ ಪೂಜಾರಿ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ಡೀನ್ ಡಾ. ಬಿ. ಉನ್ನಿಕೃಷ್ಣನ್, ವೈದ್ಯರ ಸೇವೆ ಗುರುತಿಸಿ ಗೌರವಿಸಿರುವ ಲೇಡಿಗೋಷನ್ ಆಸ್ಪತ್ರೆ ಆಡಳಿತಕ್ಕೆ ಕೃತಜ್ಞತೆ ಸಲ್ಲಿಸುವೆ ಎಂದರು.
ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರು ಮಾತನಾಡಿ, ತಾಯಿ ಮತ್ತು ಮಗುವಿನ ಆರೋಗ್ಯ ರಕ್ಷಣೆಯಲ್ಲಿ ಸರ್ಕಾರಿ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಮಹಾವಿದ್ಯಾಲಯದ ವೈದ್ಯರು ನೀಡಿರುವ ಸೇವೆ ಅನನ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ ತಾಯಿ ಮರಣ ಪ್ರಮಾಣವನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಲ್ಲಿ ಹಿರಿಯ ವೈದ್ಯರ ಸೇವೆ ಮಹತ್ವದ ಪಾತ್ರ ವಹಿಸಿದ್ದು, ಅವರ ಸೇವೆ ಸದಾ ಸ್ಮರಣೀಯವಾಗಿರಲಿದೆ ಎಂದು ಹೇಳಿದರು.
ಕಾರ್ಯಕ್ರಮದ ಅಂತ್ಯದಲ್ಲಿ ಆಸ್ಪತ್ರೆಯ ಸಿಬ್ಬಂದಿ ವತಿಯಿಂದ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರನ್ನು ಸನ್ಮಾನಿಸಲಾಯಿತು. ಸೀಮಾ ಸ್ವಾಗತಿಸಿದರು. ಅಂಬಿಕಾ ಪ್ರಸ್ತಾವಿಕ ಮಾತನಾಡಿದರು. ಜ್ಯೋತಿ ಪ್ರಭಾ ಹಾಗೂ ಜಯಲಕ್ಷ್ಮಿ ನಿರೂಪಿಸಿದರು. ಲವಿನಾ ವಂದಿಸಿದರು.
What do you feel about this post?
Like
Love
Happy
Haha
Sad



