ಸಿರಸಿ: ಕ್ರೀಡಾಕೂಟಗಳು ಮಕ್ಕಳಲ್ಲಿ ಕ್ರೀಡಾ ಪ್ರತಿಭೆಯ ಜತೆಗೆ ಶಿಸ್ತು, ಸಮಯಪ್ರಜ್ಞೆ ಹಾಗೂ ತಂಡದ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್. ನಾಯ್ಕ್ ಹೇಳಿದರು.
ಬಿಸಲಕೊಪ್ಪದಲ್ಲಿ 2026-27ನೇ ಸಾಲಿನ 14 ವರ್ಷ ವಯೋಮಾನದೊಳಗಿನವರ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸಮೂಹ ಸಂಪನ್ಮೂಲ ಕೇಂದ್ರ ದಮನಬೈಲ್ನ ನೇತೃತ್ವ ಹಾಗೂ ಸಂಘಟನೆಯಲ್ಲಿ ಕ್ರೀಡಾಕೂಟ ಅಚ್ಚುಕಟ್ಟಾಗಿ ನಡೆಯಿತು. ಶಿರಸಿ ತಾಲೂಕಿನ ಈ ಶೈಕ್ಷಣಿಕ ಸಾಲಿನ ಪ್ರಥಮ ವಲಯ ಮಟ್ಟದ ಕ್ರೀಡಾಕೂಟ ಇದಾಗಿದ್ದು, ಉತ್ತಮ ಸಂಘಟನೆಯೊಂದಿಗೆ ಗಮನ ಸೆಳೆಯಿತು.
ಕ್ರೀಡಾಕೂಟದಲ್ಲಿ ದಮನಬೈಲ್ ಕ್ಲಸ್ಟರ್ ವ್ಯಾಪ್ತಿಯ ಸಂಘಟನೆಯ ವತಿಯಿಂದ ಭಾಗವಹಿಸಿದ ಎಲ್ಲ 25 ಶಾಲೆಗಳಿಗೆ ಪ್ರಥಮ ಚಿಕಿತ್ಸಾ ಕಿಟ್ಗಳನ್ನು ವಿತರಿಸಲಾಯಿತು. ಕ್ರೀಡಾಕೂಟಕ್ಕೆ ಆಗಮಿಸಿದ್ದ ದೈಹಿಕ ಶಿಕ್ಷಣ ಶಿಕ್ಷಕರಿಗೆ ಕ್ರೀಡಾ ಸಾಮಗ್ರಿಗಳ ಕಿಟ್ಗಳನ್ನು ನೀಡಿರುವುದು ವಿಶೇಷವಾಗಿತ್ತು.
ಕ್ರೀಡಾಕೂಟದ ಯಶಸ್ಸಿಗೆ ದಮನಬೈಲ್, ದಾಸನಕೊಪ್ಪ ಹಾಗೂ ಬಿಸಲಕೊಪ್ಪ ಕ್ಲಸ್ಟರ್ಗಳ ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳು, ಎಸ್ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು, ಶಾಲೆಗಳ ಮುಖ್ಯಶಿಕ್ಷಕರು, ಶಿಕ್ಷಕ ವೃಂದ, ಊರಿನ ಹಿರಿಯರು, ಹಳೆಯ ವಿದ್ಯಾರ್ಥಿ ಸಂಘಗಳು ಹಾಗೂ ಪಾಲಕ-ಪೋಷಕರ ಸಹಕಾರ ಪ್ರಮುಖ ಕಾರಣವಾಯಿತು.
ತಾಲೂಕಿನ ಹಿರಿಯ ಮತ್ತು ಕಿರಿಯ ಶಿಕ್ಷಣಾಧಿಕಾರಿಗಳು, ದೈಹಿಕ ಶಿಕ್ಷಣ ಪರಿವೀಕ್ಷಕರು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕರ ಶ್ರಮದೊಂದಿಗೆ ದಮನಬೈಲ್ ಕ್ಲಸ್ಟರ್ನ ಸಂಘಟನಾ ಸಾಮರ್ಥ್ಯ ಕ್ರೀಡಾಕೂಟದ ಯಶಸ್ಸಿಗೆ ಮತ್ತಷ್ಟು ಬಲ ನೀಡಿತು.
What do you feel about this post?
Like
Love
Happy
Haha
Sad





