ವೈದ್ಯಕೀಯ ಪ್ರವೇಶ: ಎಕ್ಸ್‌ಪರ್ಟ್‌ ಕಾಲೇಜಿನ 852 ವಿದ್ಯಾರ್ಥಿಗಳ ದಾಖಲೆಯ ಸಾಧನೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ನೀಟ್–ಯುಜಿ 2026ರ ಎರಡನೇ ಸುತ್ತಿನ ಸೀಟು ಹಂಚಿಕೆಯಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ 852 ವಿದ್ಯಾರ್ಥಿಗಳು ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಪಡೆದಿದ್ದಾರೆ. ಇವರಲ್ಲಿ 763 ವಿದ್ಯಾರ್ಥಿಗಳು ಎಂಬಿಬಿಎಸ್ ಹಾಗೂ 89 ವಿದ್ಯಾರ್ಥಿಗಳು ಬಿಡಿಎಸ್ ಪ್ರವೇಶ ಪಡೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.

<

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಹಾಗೂ ವೈದ್ಯಕೀಯ ಸಮಾಲೋಚನಾ ಸಮಿತಿ (ಎಂಸಿಸಿ) ಪ್ರಕಟಿಸಿರುವ ಎರಡನೇ ಸುತ್ತಿನ ಸೀಟು ಹಂಚಿಕೆ ಫಲಿತಾಂಶದಲ್ಲಿ ಈ ಸಾಧನೆ ದಾಖಲಾಗಿದೆ.

ದೇಶದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಗಳಾದ ಏಮ್ಸ್, ಜಿಪ್ಮರ್, ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜು (ಎಎಫ್‌ಎಂಸಿ) ಹಾಗೂ ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಗಳಲ್ಲೂ ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಎರಡನೇ ಸುತ್ತಿನಲ್ಲಿ 13 ಮಂದಿ ಏಮ್ಸ್, ಇಬ್ಬರು ಜಿಪ್ಮರ್, ಮೂವರು ಪುಣೆಯ ಎಎಫ್‌ಎಂಸಿ ಹಾಗೂ 25 ಮಂದಿ ಬಿಎಂಸಿಆರ್‌ಐಗೆ ಪ್ರವೇಶ ಪಡೆದಿದ್ದಾರೆ.

ಸರ್ಕಾರಿ ಕೋಟಾದಡಿ 520 ಮಂದಿಗೆ ಎಂಬಿಬಿಎಸ್

ಎಂಬಿಬಿಎಸ್ ಸೀಟು ಪಡೆದ 763 ವಿದ್ಯಾರ್ಥಿಗಳಲ್ಲಿ 520 ಮಂದಿ ಸರ್ಕಾರಿ ಕೋಟಾದಡಿ ಪ್ರವೇಶ ಪಡೆದಿದ್ದಾರೆ. 21 ಮಂದಿ ಖಾಸಗಿ ಕೋಟಾ, 18 ಮಂದಿ ಆಡಳಿತ ಮಂಡಳಿ ಕೋಟಾ ಹಾಗೂ ನಾಲ್ವರು ಎನ್‌ಆರ್‌ಐ ಕೋಟಾದಡಿ ಸೀಟು ಪಡೆದಿದ್ದಾರೆ.

ಒಟ್ಟು 632 ವಿದ್ಯಾರ್ಥಿಗಳು ಕೆಇಎ ಮೂಲಕ ಹಾಗೂ 131 ವಿದ್ಯಾರ್ಥಿಗಳು ಅಖಿಲ ಭಾರತ ಮಟ್ಟದ ಎಂಸಿಸಿ ಸಮಾಲೋಚನೆ ಮೂಲಕ ಎಂಬಿಬಿಎಸ್ ಸೀಟು ಪಡೆದುಕೊಂಡಿದ್ದಾರೆ.

ಜಿಪ್ಮರ್ ಪಾಂಡಿಚೇರಿಗೆ ಕೃತಿಕಾ ಮಲ್ಲಿಕಾರ್ಜುನ್ ಪಾಟೀಲ್ ಮತ್ತು ಪ್ರೀತಂ ಸಂಕನಲ್, ಪುಣೆಯ ಎಎಫ್‌ಎಂಸಿಗೆ ಕದಂ ಸಾತ್ವಿಕ್ ಸುನಿಲ್, ಸಮನ್ಯು ಎಸ್. ಶೆಟ್ಟಿ ಮತ್ತು ಅಭಿಮನ್ಯು ಎ.ಜೆ. ಪ್ರವೇಶ ಪಡೆದಿದ್ದಾರೆ.

ಏಮ್ಸ್ ಭುವನೇಶ್ವರಕ್ಕೆ ಧೀರಜ್ ಎನ್., ಉಜ್ವಲ್ ಶಿವಾನಂದ ಬೂದಿಹಾಳ್ ಹಾಗೂ ಸಮಯ್ ಎ.ಎಸ್.; ಏಮ್ಸ್ ಭೋಪಾಲ್‌ಗೆ ಅಂಕಿತ್ ಅಶೋಕ್ ದೊಡವಾಡ; ಏಮ್ಸ್ ಪಾಟ್ನಾಗೆ ಆರ್. ಯಶಾ; ಏಮ್ಸ್ ಮಂಗಳಗಿರಿಗೆ ನಂದನ್ ಜಿ. ಪಾಟೀಲ್, ನಿಶಾಂತ್ ಎಂ. ಗೌಡ, ಶರತ್ ಸಿ.ಎನ್. ಮತ್ತು ಮೊಹಮ್ಮದ್ ಶಹಜೇಬ್; ಏಮ್ಸ್ ಗುವಾಹಟಿಗೆ ನಿಹಾಲ್ ಜಕ್ಕನಗೌಡರ್ ಮತ್ತು ಸ್ವಸ್ತಿಕ್ ಶೆಟ್ಟಿ; ಏಮ್ಸ್ ಹೈದರಾಬಾದ್‌ಗೆ ಸಿದ್ಧರಾಮ ಹೊಸಳ್ಳಿ ಹಾಗೂ ಏಮ್ಸ್ ರಾಜ್‌ಕೋಟ್‌ಗೆ ಅರಳೆ ವಿರೂಪಾಕ್ಷಿ ಎಂ. ಪ್ರವೇಶ ಪಡೆದಿದ್ದಾರೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಮುಂಬೈನ ಸೆಥ್ ಜಿ.ಎಸ್. ವೈದ್ಯಕೀಯ ಕಾಲೇಜು ಸೇರಿದಂತೆ ವಿವಿಧ ಪ್ರತಿಷ್ಠಿತ ಸಂಸ್ಥೆಗಳಲ್ಲೂ ಎಕ್ಸ್‌ಪರ್ಟ್ ವಿದ್ಯಾರ್ಥಿಗಳು ಸೀಟು ಪಡೆದಿದ್ದಾರೆ.

ಬಿಡಿಎಸ್‌ನಲ್ಲೂ ಸಾಧನೆ

ದಂತ ವೈದ್ಯಕೀಯ ಪ್ರವೇಶದಲ್ಲೂ 89 ವಿದ್ಯಾರ್ಥಿಗಳು ಸೀಟು ಪಡೆದಿದ್ದಾರೆ. ಇವರಲ್ಲಿ 70 ಮಂದಿ ಕೆಇಎ ಮೂಲಕ ಹಾಗೂ 19 ಮಂದಿ ಅಖಿಲ ಭಾರತ ಕೋಟಾದಡಿ ಪ್ರವೇಶ ಪಡೆದಿದ್ದಾರೆ.

ನೀಟ್‌ನ ತೀವ್ರ ಸ್ಪರ್ಧೆಯ ನಡುವೆಯೂ ವಿದ್ಯಾರ್ಥಿಗಳು ದೇಶದ ಪ್ರತಿಷ್ಠಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸಂಸ್ಥೆಗಳಲ್ಲಿ ಸೀಟು ಪಡೆದಿರುವುದು ಸಂಸ್ಥೆಯ ಶೈಕ್ಷಣಿಕ ಸಾಧನೆಗೆ ಮತ್ತೊಂದು ಗರಿ ಮೂಡಿಸಿದೆ. ಮುಂದಿನ ಸುತ್ತುಗಳಲ್ಲಿಯೂ ಇನ್ನಷ್ಟು ವಿದ್ಯಾರ್ಥಿಗಳು ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ ಪಡೆಯುವ ವಿಶ್ವಾಸವಿದೆ ಎಂದು ಎಕ್ಸ್‌ಪರ್ಟ್ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

sanotsh

Leave a Reply

Your email address will not be published. Required fields are marked *