ಮಂಗಳೂರು ಇಂಡಿಯಾನಾ ಆಸ್ಪತ್ರೆಯ ವೈದ್ಯರ ತಂಡದ ಸಾಧನೆ, ಸಂಕೀರ್ಣ ಅವಳಿ ಗರ್ಭಧಾರಣೆ, ಶಸ್ತ್ರಚಿಕಿತ್ಸೆ ಯಶಸ್ವಿ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಅಪರೂಪದ ಹಾಗೂ ಜೀವಕ್ಕೆ ಅಪಾಯಕಾರಿ ಆಗಿದ್ದ ಅವಳಿ ಗರ್ಭಧಾರಣೆಯ ಪ್ರಕರಣವನ್ನು ಯಶಸ್ವಿಯಾಗಿ ನಿರ್ವಹಿಸಿದ ಇಂಡಿಯಾನಾ ಆಸ್ಪತ್ರೆ ಮತ್ತು ಹಾರ್ಟ್ ಇನ್‌ಸ್ಟಿಟ್ಯೂಟ್‌ನ ವೈದ್ಯಕೀಯ ತಂಡವು, ತಾಯಿ ಮತ್ತು ಅವಳಿ ಶಿಶುಗಳ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿರುವುದು ವೈದ್ಯರ ತಂಡದ ಸಾಧನೆ ಮತ್ತೊಂದು ಗರಿ ತಂದಿದೆ.

42 ವರ್ಷದ ಮಹಿಳೆಯೊಬ್ಬರು ಪ್ರನಾಳ ಶಿಶು ಪೋಷಣೆ (ಐವಿಎಫ್) ವಿಧಾನದ ಮೂಲಕ ಅವಳಿ ಗರ್ಭಧಾರಣೆ ಹೊಂದಿದ್ದರು. ಅವರಿಗೆ ‘ಪ್ಲಾಸೆಂಟಾ ಪರ್ಕ್ರೆಟಾ’ ಎಂಬ ಗಂಭೀರ ತೊಂದರೆ ಕಾಣಿಸಿಕೊಂಡಿತ್ತು. ಈ ಸ್ಥಿತಿಯಲ್ಲಿ ಜರಾಯು ಗರ್ಭಾಶಯದ ಗೋಡೆಯನ್ನು ಭೇದಿಸಿ ಪಕ್ಕದ ಅಂಗಾಂಶಗಳಿಗೆ ಆಳವಾಗಿ ಪ್ರವೇಶಿಸುತ್ತದೆ. ಈ ಪ್ರಕರಣದಲ್ಲಿ ಜರಾಯು ಗುದನಾಳದವರೆಗೆ ವ್ಯಾಪಿಸಿದ್ದರಿಂದ ತೀವ್ರ ರಕ್ತಸ್ರಾವದ ಅಪಾಯ ಎದುರಾಗಿತ್ತು.

ಆಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ. ಅಶ್ವಿನಿ ವಿಶ್ವನಾಥ್ ಅವರ ಮಾರ್ಗದರ್ಶನದಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲು ವಿವಿಧ ವಿಭಾಗಗಳ ತಜ್ಞ ವೈದ್ಯರ ತಂಡವು ಇಂತಹ ಕ್ಲಿಷ್ಟ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದೆ.

ತಂಡದಲ್ಲಿ ಜೀರ್ಣಾಂಗ ತಜ್ಞ ಡಾ. ನಿಹಾಲ್ ಅಲಿ, ಹಿರಿಯ ಸ್ತ್ರೀರೋಗ ತಜ್ಞೆ ಡಾ. ಭಾವನಾ ಶೆರಿಗಾರ್, ಶಸ್ತ್ರಚಿಕಿತ್ಸಾ ಕ್ಯಾನ್ಸರ್ ತಜ್ಞ ಡಾ. ಕಾರ್ತಿಕ್ ವೇಲ್ಮುರುಗನ್, ಸಾಮಾನ್ಯ ಹಾಗೂ ದೂರದರ್ಶಕ ಶಸ್ತ್ರಚಿಕಿತ್ಸಾ ತಜ್ಞ ಡಾ. ನವೀನ್ ಪಿ. ಗೋಪಾಲ್ ಮತ್ತು ಹೃದಯ ಹಾಗೂ ಎದೆಗೂಡಿನ ರಕ್ತನಾಳ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಪ್ರತೀಕ್ ವಾಸ್ವಾನಿ ಪಾಲ್ಗೊಂಡಿದ್ದರು.

ವೈದ್ಯಕೀಯ ತಂಡವು ಮೊದಲು ಸಿಸೇರಿಯನ್ ಶಸ್ತ್ರಚಿಕಿತ್ಸೆ ನಡೆಸಿತು. ಬಳಿಕ ಗರ್ಭಾಶಯವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ ಹಾಗೂ ಕರುಳಿನ ಹಾನಿಗೊಳಗಾದ ಭಾಗವನ್ನು ತೆಗೆದು ಹಾಕುವ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಹಲವು ವಿಭಾಗಗಳ ತಜ್ಞರ ಸಮನ್ವಯ ಮತ್ತು ಸಮಯೋಚಿತ ನಿರ್ಧಾರಗಳಿಂದ ಸಂಕೀರ್ಣ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಆಸ್ಪತ್ರೆಯ ಸಮೂಹ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಇ. ವಿಜಯ ಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *