ಕಾರವಾರ: ಕನ್ನಡ ನಾಡು, ನುಡಿ ಹಾಗೂ ಸಂಸ್ಕೃತಿಯ ಅಭಿಮಾನವನ್ನು ಸಾರುವ 71ನೇ ಕರ್ನಾಟಕ ರಾಜ್ಯೋತ್ಸವವನ್ನು ಕರ್ನಾಟಕ ರಕ್ಷಣಾ ವೇದಿಕೆಯ ಕಾರವಾರ ತಾಲ್ಲೂಕು ನಗರ ಮತ್ತು ಗ್ರಾಮೀಣ ಘಟಕಗಳ ವತಿಯಿಂದ ಅಮದಳ್ಳಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಕರವೇ ತಾಲ್ಲೂಕು ಅಧ್ಯಕ್ಷ ನರೇಂದ್ರ ತಳೇಕರ ಧ್ವಜಾರೋಹಣ ನೆರವೇರಿಸಿ, ರಾಜ್ಯೋತ್ಸವದ ಶುಭಾಶಯ ಕೋರಿದರು. ಬಳಿಕ ಕನ್ನಡಾಂಬೆ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕನ್ನಡ ನಾಡಿನ ಗೀತೆಗಳನ್ನು ಹಾಡುವ ಮೂಲಕ ಕನ್ನಡಾಭಿಮಾನ ಮೆರೆದರು. ಇದೇ ವೇಳೆ ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರ ಭಾಷಣವನ್ನು ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಯಿತು.
ಈ ಸಂದರ್ಭದಲ್ಲಿ ಕರವೇ ಕಾರವಾರ ನಗರ ಘಟಕದ ಅಧ್ಯಕ್ಷ ರಾಜಾ ನಾಯ್ಕ, ಗ್ರಾಮೀಣ ಘಟಕದ ಅಧ್ಯಕ್ಷ ನಾಗರಾಜ ಅಮದಳ್ಳಿ, ಉಪಾಧ್ಯಕ್ಷ ಪ್ರವೀಣ ನಾಯ್ಕ, ದೀಪಕ ಗಾಂವಕರ, ನಿಲೇಶ ಆಗೇರ, ಅಕ್ಷಯ ಗೌಡ, ಸಾಗರ ಆಗೇರ, ಸಂಕೇತ ಗೌಡ, ಸುನಿಲ ಗೌಡ, ಸ್ನೇವಿಶ ಕೀಣಿಕರ ಸೇರಿದಂತೆ ಇದ್ದರು.



