ಕಾರವಾರ: ನಗರದ ಪುರಾತನ ಸಹಕಾರಿ ಸಂಘಗಳಲ್ಲಿ ಒಂದಾದ ರಾಧಾಕೃಷ್ಣ ದೇವಸ್ಥಾನ ರಸ್ತೆಯ ಹರಿಕಂತ್ರ-ಖಾರ್ವಿ ಮೀನುಗಾರರ ಸಹಕಾರಿ ಸಂಘದ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಮಂಗಳವಾರ ನಡೆಯಿತು.
ಸಂಘದ ನೂತನ ಅಧ್ಯಕ್ಷರಾಗಿ ರೋಹಿದಾಸ ಗಿರಿಯಾ ಬಾನಾವಳಿ ಹಾಗೂ ಉಪಾಧ್ಯಕ್ಷರಾಗಿ ಅಶೋಕ ಚಿಮಣು ಹರಿಕಂತ್ರ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾಗಿ ವಿಕಾಶ ಕೃಷ್ಣ ತಾಂಡೇಲ್, ವಿಶ್ವನಾಥ ಪಾಂಡುರಂಗ ತಾಂಡೇಲ್, ಚೇತನ್ ಯಶವಂತ ಹರಿಕಂತ್ರ, ಸೂರಜ್ ಮಧುಕರ್ ಕುರುಮಕರ್, ಚಂದ್ರಕಾಂತ ವೆಂಕಟೇಶ ಹರಿಕಂತ್ರ, ನಳಿನಿ ಗೋಪಾಲ ಹರಿಕಂತ್ರ ಹಾಗೂ ಕುಸುಮಾ ಡಿ. ಕುಡ್ತಲಕರ್ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿ ರೂಪಾ ನಾಯ್ಕ ಅವರು ಆಯ್ಕೆ ಪ್ರಕ್ರಿಯೆ ನಡೆಸಿಕೊಟ್ಟರು. ಸಂಘದ ಕಾರ್ಯದರ್ಶಿ ಅಶೋಕ್ ಗೋವೇಕರ್ ಸಹಕರಿಸಿದರು.


