ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ, ಹೈಕಮಾಂಡ್ ತೀರ್ಮಾನವೇ ಅಂತಿಮ: ಸಚಿವ ದಿನೇಶ್ ಗುಂಡೂರಾವ್

ಮಂಗಳೂರು: ಮುಖ್ಯಮಂತ್ರಿ ಬದಲಾವಣೆ ಕುರಿತ ಎಲ್ಲ ನಿರ್ಧಾರಗಳನ್ನೂ ಪಕ್ಷದ ವರಿಷ್ಠರೇ ಕೈಗೊಳ್ಳುತ್ತಾರೆ ಎಂದು ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು. ತಾವು ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದೇ, ಯಾವುದೇ ತೀರ್ಮಾನವಾದರೂ ಪಕ್ಷದ ಹೈಕಮಾಂಡ್ ತೆಗೆದುಕೊಳ್ಳುತ್ತದೆ. ಇದಕ್ಕೆ ಎಲ್ಲರೂ ಬದ್ಧರಾಗಿದ್ದೇವೆ. ಸರ್ಕಾರಕ್ಕೆ ಮೂರು ವರ್ಷ ಪೂರ್ತಿಯಾದ ಬಳಿಕ ವಿಸ್ತರಣೆ ಮಾಡುವ ಚರ್ಚೆ ನಡೆದಿತ್ತು. ಕೇರಳದಲ್ಲಿ ಸರ್ಕಾರ ರಚನೆಯ ನಂತರ ಪಕ್ಷದ ವರಿಷ್ಠರು ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು. […]

Continue Reading

ಎಂಐಒ ಆಸ್ಪತ್ರೆಯ ಡಾ. ವಿಶ್ವಪ್ರಿಯಾ ಗೋದ್ಖಿಂಡಿಗೆ ಪ್ರತಿಷ್ಠಿತ ಯುರೋಪಿಯನ್ ಪೆಥಾಲಜಿ ಗೌರವ

ಮಂಗಳೂರು: ಇಲ್ಲಿನ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ (ಎಂಐಒ) ಆಸ್ಪತ್ರೆಯಲ್ಲಿ ಪೆಥಾಲಜಿ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಡಾ. ವಿಶ್ವಪ್ರಿಯಾ ಗೋದ್ಖಿಂಡಿ ಅವರು ಯುರೋಪಿಯನ್ ಸೊಸೈಟಿ ಆಫ್ ಪೆಥಾಲಜಿ ಅಕಾಡೆಮಿ–2026 ರ ಗೌರವಕ್ಕೆ ಭಾಜನರಾಗಿದ್ದಾರೆ ಎಂದು ಎಂಐಒ ಆಸ್ಪತ್ರೆಯ ನಿರ್ದೇಶಕ ಡಾ. ಸುರೇಶ್ ರಾವ್ ಅವರು ತಿಳಿಸಿದ್ದಾರೆ. ಪೆಥಾಲಜಿ ಕ್ಷೇತ್ರದಲ್ಲಿ ಅವರ ಶೈಕ್ಷಣಿಕ ಹಾಗೂ ವೃತ್ತಿಪರ ಸಾಧನೆ ಗುರುತಿಸಿ ಈ ಗೌರವ ಲಭಿಸಿದೆ. 2026ನೇ ಸಾಲಿನಲ್ಲಿ ಯೂರೋಪಿಯನ್ ಸೊಸೈಟಿ ಆಫ್ ಪಥಾಲಜಿ ವತಿಯಿಂದ ಆಯ್ಕೆಯಾದ ಏಕೈಕ ಭಾರತೀಯ ಪ್ರಶಸ್ತಿ […]

Continue Reading

ಉ.ಕ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿವ ನೀರಿನ ಸಮಸ್ಯೆ ಕಂಡು ಬಾರದಂತೆ ಎಚ್ಚರ ವಹಿಸಿ: ಸಚಿವ ಮಂಕಾಳ ವೈದ್ಯ ತಾಕೀತು

ಕುಮಟಾ: ಉತ್ತರ ಕನ್ನಡ ಜಿಲ್ಲೆಯ ಯಾವುದೇ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಧಿಕಾರಿಗಳು ಕಾರ್ಯ ನಿರ್ವಹಿಸಿ, ಸಾರ್ವಜನಿಕರ ನೀರಿನ ಸಮಸ್ಯೆಯ ದೂರುಗಳಿಗೆ ತಕ್ಷಣವೇ ಸೂಕ್ತ ರೀತಿಯಲ್ಲಿ ಸ್ಪಂದಿಸುವಂತೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಕುಮಟಾ ಉಪ ವಿಭಾಗಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲೆಯ ಕುಡಿವ ನೀರಿನ ಸಮಸ್ಯೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಮಸ್ಯೆ ಕುರಿತು ‌ನಡೆದ ಸಭೆಯ ಅಧ್ಯಕ್ಷತೆ ವಹಿಸಿ […]

Continue Reading

ನೂತನ ಪತ್ರಿಕಾ ವಾಹನಕ್ಕೆ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಚಾಲನೆ

ಕುಮಟಾ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉತ್ತರ‌ ಕನ್ನಡ ಜಿಲ್ಲೆಗೆ ಹಂಚಿಕೆ ಮಾಡಿರುವ ಹೊಸ ಪತ್ರಿಕಾ ವಾಹನಕ್ಕೆ ಕುಮಟಾ ಆಡಳಿತ ಸೌಧದ ಆವರಣದಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು‌ ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್ ವೈದ್ಯ ಹಸಿರು ನಿಶಾನೆ ತೋರಿದರು. ಜಿಲ್ಲಾಧಿಕಾರಿ‌ ಕಚೇರಿ ಡಿವಿ ಶಾಖೆಯ 3 ಹೊಸ ವಾಹನ, ಚುನಾವಣೆ ಶಾಖೆ ಹಾಗೂ ದಾಂಡೇಲಿ ತಹಶೀಲ್ದಾರ್ ಕಚೇರಿಯ ನೂತನ ವಾಹನಕ್ಕೂ ಕೂಡ ಸಚಿವರು ಚಾಲನೆ‌ ನೀಡಿದರು. ಶಾಸಕರಾದ ದಿನಕರ ಶೆಟ್ಟಿ, […]

Continue Reading

ಮಂಗಳೂರಿನಲ್ಲಿ ಜೆಎಲ್‌ಆರ್ ಇಂಡಿಯಾ ನೂತನ ಮಳಿಗೆಗೆ ರಾಜನ್ ಅಂಬಾ ಚಾಲನೆ

ಮಂಗಳೂರು: ಐಷಾರಾಮಿ ಕಾರುಗಳ ವಿಭಾಗದಲ್ಲಿ ಮಂಗಳೂರು, ದಕ್ಷಿಣ ಭಾರತದ ಅತ್ಯಂತ ಪ್ರಮುಖ ಮಾರುಕಟ್ಟೆ ಆಗಿದೆ. ಇಲ್ಲಿ ನಮ್ಮ ನೂತನ ಘಟಕವನ್ನು ಆರಂಭಿಸಲು ನಮಗೆ ಸಂತೋಷ ಆಗಿದೆ. ಕರ್ನಾಟಕದಲ್ಲಿ ಮತ್ತು ಈ ಭಾಗದಲ್ಲಿ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿರುವುದರಿಂದ ಈ ಹೆಜ್ಜೆ ಇಟ್ಟಿದ್ದೇವೆ” ಎಂದು ಪ್ರತಿಷ್ಠಿತ ಐಷಾರಾಮಿ ಕಾರು ತಯಾರಿಕಾ ಸಂಸ್ಥೆ ಜೆಎಲ್‌ಆರ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ರಾಜನ್ ಅಂಬಾ ಅವರು ತಿಳಿಸಿದರು. ಮಂಗಳೂರಿನ ಕೊಟ್ಟಾರದಲ್ಲಿ ಇರುವ ಜೆಎಲ್‌ಆರ್ ಇಂಡಿಯಾದ ಸೇವಾ ಮತ್ತು ಬಿಡಿಭಾಗಗಳ ಕೇಂದ್ರದ ಪಕ್ಕದಲ್ಲೇ ಸಂಸ್ಥೆಯು […]

Continue Reading

ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಪೀಠ, ಸ್ಥಳ ಪರಿಶೀಲನೆ: ಐವನ್ ಡಿಸೋಜ ಶೀಘ್ರವೇ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ಮಂಗಳೂರಿಗೆ

ಮಂಗಳೂರು: ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ , ಚಿಕ್ಕಮಗಳೂರು, ಕೊಡಗು ಜಿಲ್ಲೆಗಳನ್ನು ಒಳಗೊಂಡು ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಹಾಗೂ ಕಾಯಂ ಪೀಠ ಸ್ಥಾಪಿಸಬೇಕು ಎಂಬ ಬೇಡಿಕೆ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಮನವರಿಕೆ ಆಗಿದ್ದು, ಅವರೇ ಸ್ಥಳ ಪರಿಶೀಲನೆಗೆ ಬರುವುದಾಗಿ ಒಪ್ಪಿಕೊಂಡಿದ್ದಾರೆ. ಶೀಘ್ರವೇ ಅವರು ಮಂಗಳೂರಿಗೆ ಭೇಟಿ ನೀಡುವ ದಿನವು ನಿಗದಿ ಆಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳೀಸಿದರು. ಹಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೈಕೋರ್ಟ್ ಸಂಚಾರ […]

Continue Reading

ಪಂಚರಾಜ್ಯ ಚುನಾವಣೆ ಫಲಿತಾಂಶ, ಸಂಘಟನಾ ಶಕ್ತಿಗೆ ಸಾಕ್ಷಿ ಪಶ್ಚಿಮ ಬಂಗಾಳ, ಬಿಜೆಪಿ ಚಾರಿತ್ರಿಕ ಗೆಲುವು: ಸಂಸದ ಚೌಟ

ಮಂಗಳೂರು: ಪಂಚರಾಜ್ಯ ಚುನಾವಣೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಅಸ್ಸಾಂನಲ್ಲಿ ಬಿಜೆಪಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವುದು ಹಾಗೂ ಪುದುಚೇರಿಯಲ್ಲಿ ಎನ್‌ಡಿಎ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆದಿರುವುದು ಹಾಗೂ ಕೇರಳದಲ್ಲಿ ಉತ್ತಮ ಸಾಧನೆ ಮಾಡಿರುವುದು ಪ್ರಧಾನಮಂತ್ರಿ ಮೋದಿ ಅವರ ಸರ್ಕಾರದ ಮೇಲಿರುವ ಜನರ ವಿಶ್ವಾಸಕ್ಕೆ ಹಾಗೂ ‘ವಿಕಸಿತ ಭಾರತ’ದ ಸಂಕಲ್ಪಕ್ಕೆ ಮತ್ತಷ್ಟು ಶಕ್ತಿಯನ್ನು ತುಂಬಿದೆ ಎಂದು ಸಂಸದ ಬ್ರಿಜೇಶ್ ಚೌಟ ಅವರು ತಿಳಿಸಿದ್ದಾರೆ. ಇನ್ನೊಂದೆಡೆ, ಪಶ್ಚಿಮ ಬಂಗಾಲದಲ್ಲಿ ಬಿಜೆಪಿಯ ಗೆಲುವು ಇಡೀ ದೇಶದಲ್ಲಿರುವ ಬಿಜೆಪಿ ಕಾರ್ಯಕರ್ತರಿಗೆ ಸಂದ ಗೆಲುವು. […]

Continue Reading

ನಗರದಲ್ಲಿ ಇಬ್ಬರು ಶಾಸಕರಿದ್ದರು ಮಾಹಿತಿ ನೀಡದೇ ನೀರಿನ ರೇಷನಿಂಗ್ ನಿರ್ಧಾರ   ಎಎಂಆರ್‌ ಡ್ಯಾಂ ನಿಂದ ತುಂಬೆಗೆ ನೀರು ಹರಿಸಿ: ಶಾಸಕ ಕಾಮತ್  

ಮಂಗಳೂರು: ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟವು ಕನಿಷ್ಠ ಮಟ್ಟಕ್ಕೆ ಕುಸಿದು ಅಣೆಕಟ್ಟಿನಲ್ಲಿ ಕೇವಲ 4 ಮೀಟರ್‌ಗೆ ಇಳಿಕೆ ಆಗುವ ಮೂಲಕ ನಗರದಲ್ಲಿ ಕೃತಕ ಜಲಕ್ಷಾಮ ಸೃಷ್ಟಿಸಲಾಗಿದೆ. ಕೂಡಲೇ ಎಎಂಆರ್‌ ಡ್ಯಾಂ ನಿಂದ ತುಂಬೆ ಡ್ಯಾಂ ಗೆ ನೀರು ಹರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಅವರು ಆಗ್ರಹಿಸಿದರು. ತುಂಬೆ ಡ್ಯಾಂ ಗೆ ಅವರು ಖುದ್ದು ಭೇಟಿ ನೀಡಿ ವೀಕ್ಷಣೆ ನಡೆಸಿ ಮಾತನಾಡಿದ ಅವರು, ನಗರ ವ್ಯಾಪ್ತಿಯಲ್ಲಿ ಇಬ್ಬರು ಶಾಸಕರುಗಳು ಇದ್ದರೂ ಯಾವುದೇ ಮಾಹಿತಿ ನೀಡದೇ ಜಿಲ್ಲಾಡಳಿತ […]

Continue Reading

ಸಂವಿಧಾನದ 10 ನೇ ವಿಧಿ ಬಲಿಷ್ಠಗೊಳಿಸುವುದಕ್ಕೆ ಲೋಕಸಭೆ ವರದಿ ಮಂಡನೆ ಪಕ್ಷಾಂತರ ನಿಷೇಧ ಕಾಯ್ದೆ, ಜೂನ್ ನಲ್ಲಿ ಸಮಿತಿ ಸಭೆ- ಸ್ಪೀಕರ್ ಖಾದರ್

ಮಂಗಳೂರು: ಪಕ್ಷಾಂತರ ನಿಷೇಧ ಕಾಯ್ದೆ ಕುರಿತಂತೆ ಲೋಕಸಭೆಯ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ 3 ನೇ ಸಭೆ ರಾಜ್ಯದಲ್ಲಿ ಜೂನ್ ತಿಂಗಳ ಅಂತ್ಯದಲ್ಲಿ ನಡೆಯಲಿದ್ದು, ಬಳಿಕ ಸಮಿತಿ ತನ್ನ ವರದಿ ಲೋಕಸಭೆಗೆ ಮಂಡಿಸಲಿದೆ ಎಂದು ವಿಧಾನಸಭೆ ಸ್ಪೀಕರ್ ಯು. ಟಿ. ಖಾದರ್ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಚುನಾಯಿತ ಪ್ರತಿನಿಧಿಗಳು ಮತ್ತೇ ಮತ್ತೇ ಪಕ್ಷಾಂತರ ಮಾಡುವುದ್ನು ತಡೆಯುವ ಉದ್ದೇಶದಿಂದ ಸಂವಿಧಾನದ 10 ನೇ ವಿಧಿ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸ್ಪೀಕರ್ […]

Continue Reading

ಮಾತಾ ಅಮೃತಾನಂದಮಯಿಮ ಮಠಕ್ಕೆ 28ಕ್ಕೆ ಅಮ್ಮ ಭೇಟಿ, ಚಪ್ಪರ ಮುಹೂರ್ತ ಅಮ್ಮ ನಡೆದಾಡುವ, ಮಾತನಾಡುವ ದೇವರು: ಮಾಜಿ ಸಂಸದ ಕಟೀಲ್

ಮಂಗಳೂರು: ಮಾತಾ ಅಮೃತಾನಂದಮಯಿ ಮಠಕ್ಕೆ ಮೇ 28 ರಂದು ಆಗಮಿಸುವ ಸದ್ಗುರು ಮಾತಾ ಅಮೃತಾನಂದಮಯಿ ದೇವಿ ಅವರ ಕಾರ್ಯಕ್ರಮ” ಬ್ರಹ್ಮಸ್ಥಾನಂ ಮಹೋತ್ಸವ ಮತ್ತು ಅಮೃತಸಂಗಮ ಅಂಗವಾಗಿ ಚಪ್ಪರ ಮುಹೂರ್ತ ನಡೆಯಿತು. ಸ್ವಾಮಿನಿ ಮಂಗಳಾಮೃತ ಪ್ರಾಣ ಅವರ ಉಪಸ್ಥಿತಿಯಲ್ಲಿ ನಡೆದ ಈ‌ ಕಾರ್ಯಕ್ರಮದಲ್ಲಿ ನಿಕಟಪೂರ್ವ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಅವರು ವಿಧ್ಯುಕ್ತವಾಗಿ ಚಾಲನೆ ನೀಡಿ ಮಾತನಾಡಿ, ಮಾನವ ಮಹಾದೇವತ್ವಕ್ಕೆ ಏರುವ ಪುಣ್ಯಭೂಮಿ ಭಾರತ. ನಡೆದಾಡುವ , ಮಾತನಾಡುವ ದೇವರು ಮಾತಾ ಅಮೃತಾನಂದಮಯಿ ದೇವಿ, ಅವರು ಜಗತ್ತಿಗೆ […]

Continue Reading