Sample Page

ವೇಟ್‌ಲಿಫ್ಟಿಂಗ್‌ನಲ್ಲಿ ಆಳ್ವಾಸ್‌ಗೆ ಅವಳಿ ಸಮಗ್ರ ಪ್ರಶಸ್ತಿ, ಹುಡುಗರ ವಿಭಾಗದಲ್ಲಿ 5 ಚಿನ್ನ; ಹುಡುಗಿಯರ ವಿಭಾಗದಲ್ಲಿ 5 ಚಿನ್ನ, ಬೆಳ್ಳಿ–ಕಂಚಿನ ಪದಕಗಳ ಸಾಧನೆ

ಮೂಡುಬಿದಿರೆ: ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ದಕ್ಷಿಣ ಕನ್ನಡ ಹಾಗೂ ಮಂಗಳೂರಿನ ಬದ್ರಿಯಾ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಪದವಿಪೂರ್ವ ಕಾಲೇಜು ವೇಟ್‌ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಮೂಡುಬಿದಿರೆಯ ಆಳ್ವಾಸ್ ಪದವಿಪೂರ್ವ ಕಾಲೇಜು ಹುಡುಗರ ಹಾಗೂ ಹುಡುಗಿಯರ ಎರಡೂ ವಿಭಾಗಗಳಲ್ಲಿ ಸಮಗ್ರ ಪ್ರಶಸ್ತಿ ಗೆದ್ದು ಅವಳಿ ಗೌರವಕ್ಕೆ ಪಾತ್ರವಾಗಿದೆ. ಹುಡುಗರ ವಿಭಾಗದಲ್ಲಿ ಆಳ್ವಾಸ್ ತಂಡದ ಕ್ರೀಡಾಪಟುಗಳು ಐದು ವಿಭಾಗಗಳಲ್ಲೂ ಪ್ರಥಮ ಸ್ಥಾನ ಪಡೆದು ಐದು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡರು. 60 ಕೆ.ಜಿ. ವಿಭಾಗದಲ್ಲಿ ಸಂತೋಷ್, 71 ಕೆ.ಜಿ.ಯಲ್ಲಿ ಪ್ರಫುಲ್, […]

Continue Reading

ಪ್ರಜಾಸೇವೆ ಆಂದೋಲನ, 1,163 ಅರ್ಜಿಗಳ ವಿಲೇವಾರಿ,ಬಾಕಿ ಅರ್ಜಿಗಳಿಗೆ ವೇಗ ನೀಡಿ: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಕಾರವಾರ: ಜಿಲ್ಲೆಯಲ್ಲಿ ಸೆಪ್ಟೆಂಬರ್ 5ರಂದು ನಡೆದ ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕರಿಸಲಾದ 1,641 ಅರ್ಜಿಗಳ ಪೈಕಿ 1,163 ಅರ್ಜಿಗಳನ್ನು ಇದುವರೆಗೆ ವಿಲೇವಾರಿ ಮಾಡಲಾಗಿದೆ. ಬಾಕಿ ಇರುವ 478 ಅರ್ಜಿಗಳ ವಿಲೇವಾರಿ ಪ್ರಕ್ರಿಯೆಯನ್ನು ಚುರುಕುಗೊಳಿಸಿ, ಇನ್ನೆರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಅರ್ಜಿಗಳನ್ನು ಇತ್ಯರ್ಥಪಡಿಸುವಂತೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಜಾಸೇವೆ ಆಂದೋಲನದಲ್ಲಿ ಸ್ವೀಕರಿಸಲಾದ ಅರ್ಜಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಅರ್ಜಿದಾರರಿಗೆ ಹಿಂಬರಹ […]

Continue Reading

ಅನಂತ್ ನಾಗ್‌ಗೆ ದಾದಾಸಾಹೇಬ್ ಫಾಲ್ಕೆ ಗೌರವ: ಸಿಎಂ ಡಿ.ಕೆ. ಶಿವಕುಮಾರ್ ಅಭಿನಂದನೆ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ, ಅಪ್ರತಿಮ ಕಲಾವಿದ ಹಾಗೂ ಬಹುಮುಖ ಪ್ರತಿಭೆ ಅನಂತ್ ನಾಗ್ ಅವರಿಗೆ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿರುವುದಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ. ಭಾರತೀಯ ಸಿನಿಮಾ ರಂಗದ ಅತ್ಯುನ್ನತ ಗೌರವಗಳಲ್ಲಿ ಒಂದಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಅವರು ಭಾಜನರಾಗಿರುವುದು ಕನ್ನಡಿಗರೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಕನ್ನಡದ ಜತೆಗೆ ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಅನಂತ್ ನಾಗ್ ಅವರ […]

Continue Reading

ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ನಟ ಅನಂತ್ ನಾಗ್ ಆಯ್ಕೆ:ಸೆ.22 ರಂದು ರಾಷ್ಟ್ರಪತಿಗಳಿಂದ ಪ್ರದಾನ

ಬೆಂಗಳೂರು: ಐದು ದಶಕಗಳಿಗೂ ಹೆಚ್ಚು ಕಾಲ ಕನ್ನಡ ಸೇರಿದಂತೆ ಭಾರತೀಯ ಚಿತ್ರರಂಗದಲ್ಲಿ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಒಲಿದುಬಂದಿದೆ. ಭಾರತೀಯ ಚಿತ್ರರಂಗಕ್ಕೆ ನೀಡಿರುವ ಸುದೀರ್ಘ ಕೊಡುಗೆಯನ್ನು ಪರಿಗಣಿಸಿ 2024ನೇ ಸಾಲಿನ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಅನಂತ್ ನಾಗ್ ಅವರನ್ನು ಆಯ್ಕೆ ಮಾಡಲಾಗಿದೆ. ಸೆಪ್ಟೆಂಬರ್ 22ರಂದು ಗುಜರಾತ್‌ನ ಏಕತಾ ನಗರ, ಕೆವಾಡಿಯಾದಲ್ಲಿ ನಡೆಯಲಿರುವ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ […]

Continue Reading

ವಾರ್ಡ್‌ಗಳ ಸಮಸ್ಯೆ ಅರಿಯಲು ‘ವಾಕ್ ವಿತ್ ಕಮಿಷನರ್’: ಕಮಿಷನರ್ ರಾಹುಲ್ ರತ್ನ ಪಾಂಡೆ

ಮಂಗಳೂರು: ನಗರದ ಸಮಸ್ಯೆಗಳನ್ನು ಕಚೇರಿಯಲ್ಲೇ ಕುಳಿತು ಪರಿಶೀಲಿಸುವ ಬದಲು ಜನರ ಬಳಿಗೆ ತೆರಳಿ ಸ್ಥಳದಲ್ಲೇ ಅರಿತುಕೊಳ್ಳುವ ಉದ್ದೇಶದಿಂದ ಮಂಗಳೂರು ಮಹಾನಗರ ಪಾಲಿಕೆ ಹೊಸ ಪ್ರಯತ್ನಕ್ಕೆ ಮುಂದಾಗಿದೆ. ‘ವಾಕ್ ವಿತ್ ಕಮಿಷನರ್’ ಪರಿಕಲ್ಪನೆಯಡಿ ಮುಂದಿನ ತಿಂಗಳಿನಿಂದ ವಾರ್ಡ್‌ಗಳಲ್ಲಿ ಸ್ವತಃ ಸುತ್ತಾಡಿ ಸಮಸ್ಯೆಗಳನ್ನು ಪರಿಶೀಲಿಸುವುದಾಗಿ ಪಾಲಿಕೆ ಆಯುಕ್ತ ರಾಹುಲ್ ರತ್ನ ಪಾಂಡೆ ತಿಳಿಸಿದ್ದಾರೆ. ಜಪ್ಪು ಅಂಬಾನಗರದ ಅಂಬಾಮಹೇಶ್ವರಿ ಸೇವಾ ಟ್ರಸ್ಟ್ ವತಿಯಿಂದ ನಗರದ ರೆಡ್‌ಕ್ರಾಸ್ ಭವನದಲ್ಲಿ ಆಯೋಜಿಸಿದ್ದ ‘ಬೆಳೆಯುತ್ತಿರುವ ನಗರದ ತ್ಯಾಜ್ಯ ಹಾಗೂ ಸಂಚಾರ ನಿರ್ವಹಣೆಯಲ್ಲಿನ ಸವಾಲುಗಳು–ಪರಿಹಾರ ಕಂಡುಕೊಳ್ಳುವಲ್ಲಿ ಸಾರ್ವಜನಿಕರು […]

Continue Reading

ದಾವಣಗೆರೆ ಪೂರ್ವ ವಲಯಕ್ಕೆ ಖಡಕ್ ಐಪಿಎಸ್ ಅಧಿಕಾರಿ ಎನ್. ಸತೀಶ್ ಕುಮಾರ್ ನೂತನ ಐಜಿಪಿಯಾಗಿ ಅಧಿಕಾರ ಸ್ವೀಕಾರ

ಬೆಂಗಳೂರು: ಗಣೇಶೋತ್ಸವ ಸೇರಿದಂತೆ ಸಾಲು ಸಾಲು ಹಬ್ಬಗಳ ಹಿನ್ನೆಲೆಯಲ್ಲಿ ದಾವಣಗೆರೆ ಪೂರ್ವ ವಲಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ಷ್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ವಹಿಸುವುದರ ಜತೆಗೆ, ಹೆಚ್ಚುತ್ತಿರುವ ಸೈಬರ್ ಅಪರಾಧ ಮತ್ತು ಆನ್‌ಲೈನ್ ವಂಚನೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗುವುದು ಎಂದು ನೂತನ ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಎನ್. ಸತೀಶ್ ಕುಮಾರ್ ಅವರು ಹೇಳಿದರು. ದಾವಣಗೆರೆ ಪೂರ್ವ ವಲಯದ ನೂತನ ಐಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಅವರು ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಲಯದ ಭದ್ರತಾ ವ್ಯವಸ್ಥೆ […]

Continue Reading

ಪ್ರಜಾಸೇವೆ ಮೂಲಕ ಜನರ ಮನೆಬಾಗಿಲಿಗೆ ಆಡಳಿತ: ಶಾಸಕ ಭೀಮಣ್ಣ ನಾಯ್ಕ

ಸಿದ್ದಾಪುರ: ಸರ್ಕಾರದ ಜನಪರ ಯೋಜನೆಗಳು ಕೇವಲ ದಾಖಲೆಗಳಲ್ಲಿ ಉಳಿಯದೆ, ಬಡವರು ಹಾಗೂ ಸಾಮಾನ್ಯ ಜನರ ಬದುಕಿನಲ್ಲಿ ನೈಜ ಬದಲಾವಣೆ ತರುವಂತಿರಬೇಕು. ಸರ್ಕಾರದ ಯೋಜನೆಗಳು ಜನರ ಜೀವನಕ್ಕೆ ಬೆಳಕು ನೀಡಬೇಕು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು. ಸಿದ್ದಾಪುರ ತಾಲ್ಲೂಕಿನ ಹಲಿಗೇರಿ ಹೋಬಳಿಯಲ್ಲಿ ಶನಿವಾರ ನಡೆದ ತಾಲೂಕು ಮಟ್ಟದ ‘ಪ್ರಜಾಸೇವೆ ಆಂದೋಲನ’ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರದ ಯೋಜನೆಗಳು ಹಾಗೂ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ‘ಪ್ರಜಾಸೇವೆ’ ಆಂದೋಲನ ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಪ್ರದೇಶದ ಜನರು ಎದುರಿಸುತ್ತಿರುವ […]

Continue Reading

ಕರಾವಳಿ ಕರ್ನಾಟಕದ ನಾವೀನ್ಯತೆಗೆ ‘ಎಸಿಐಸಿ ಸಹ್ಯಾದ್ರಿ’ ಉದ್ಘಾಟಿಸಿದ ಕ್ಯಾ. ಗಣೇಶ್ ಕಾರ್ಣಿಕ್

ಮಂಗಳೂರು:ಕರಾವಳಿ ಕರ್ನಾಟಕದ ತಳಮಟ್ಟದ ಆವಿಷ್ಕಾರಕರು, ಉದ್ಯಮಿಗಳು ಹಾಗೂ ನವೋದ್ಯಮಗಳಿಗೆ ಕಲ್ಪನೆಯ ಹಂತದಿಂದ ವಾಣಿಜ್ಯೀಕರಣದವರೆಗೆ ಅಗತ್ಯ ಬೆಂಬಲ ಒದಗಿಸುವ ‘ಎಸಿಐಸಿ ಸಹ್ಯಾದ್ರಿ ಫೌಂಡೇಶನ್’ ಅನ್ನು ಮಂಗಳೂರಿನ ಸಹ್ಯಾದ್ರಿ ಎಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಆರಂಭಿಸಲಾಯಿತು. ಭಾರತ ಸರ್ಕಾರದ ನೀತಿ ಆಯೋಗದ ಅಟಲ್ ಇನ್ನೋವೇಶನ್ ಮಿಷನ್‌ನ ಬೆಂಬಲದೊಂದಿಗೆ ಸ್ಥಾಪನೆಯಾಗಿರುವ ಅಟಲ್ ಸಮುದಾಯ ನಾವೀನ್ಯತೆ ಕೇಂದ್ರವು ಕರಾವಳಿ ಭಾಗದಲ್ಲಿ ನಾವೀನ್ಯತೆ, ಉದ್ಯಮಶೀಲತೆ ಹಾಗೂ ಸುಸ್ಥಿರ ಜೀವನೋಪಾಯಗಳನ್ನು ಉತ್ತೇಜಿಸುವ ಗುರಿ ಹೊಂದಿದೆ. ಎಸಿಐಸಿ ಸೌಲಭ್ಯದ ಉದ್ಘಾಟನೆಯ ಬಳಿಕ ಸಹ್ಯಾದ್ರಿಯ ನಾವೀನ್ಯತಾ ಮೂಲಸೌಕರ್ಯಗಳಾದ ‘ವಿಕಾನ್ […]

Continue Reading

Giridhar Salian: ಜಾವಲಿನ್‌ ಹಿಡಿದು ಗೆಲುವಿನೆಡೆಗೆ ಗಿರಿಧರ್ ಸಾಲಿಯಾನ್, ಇಂದು ವಿಶ್ವ ವೇದಿಕೆಯಲ್ಲಿ ಪದಕಗಳ ಬೇಟೆ

ಮಂಗಳೂರು: ಕ್ರೀಡಾಂಗಣದಲ್ಲಿ ಓಡಿ, ಜಿಗಿದು ಗೆಲ್ಲಬೇಕೆಂಬ ಕನಸು ಕಂಡಿದ್ದ ಗಿರಿಧರ್ ಸಾಲಿಯಾನ್ ಅವರ ಬದುಕಿನಲ್ಲಿ ಒಂದು ಗಾಯ ಎಲ್ಲವನ್ನೂ ಬದಲಿಸಿತ್ತು. ಕಬಡ್ಡಿ ಆಡುವ ವೇಳೆ ಸಂಭವಿಸಿದ ಅಪಘಾತದಲ್ಲಿ ಕಾಲಿನ ಒಂದಲ್ಲ, ಮೂರು ಮೂಳೆಗಳು ಮುರಿದವು. ಕ್ರೀಡೆಯಿಂದ ದೂರ ಉಳಿಯಬೇಕೆಂಬ ವೈದ್ಯರ ಸಲಹೆ ಅವರ ಮುಂದಿನ ಹಾದಿಯನ್ನು ಕತ್ತಲೆಯಾಗಿಸಿತ್ತು. ಆದರೆ, ಕ್ರೀಡಾಪಟುವಿನ ಮನಸ್ಸಿನಲ್ಲಿದ್ದ ಗೆಲ್ಲುವ ಹಂಬಲ ಮಾತ್ರ ಮುರಿಯಲಿಲ್ಲ. ಉದ್ದ ಜಿಗಿತ ಮತ್ತು ಎತ್ತರ ಜಿಗಿತದಲ್ಲಿ ಶಾಲಾ ದಿನಗಳಿಂದಲೇ ಸಾಧನೆ ಮಾಡುತ್ತಿದ್ದ ಗಿರಿಧರ್, ಗಾಯದ ಬಳಿಕ ಜಿಗಿತದ ಕ್ರೀಡೆಗಳಿಂದ […]

Continue Reading

ಕ್ಯಾಂಪ್ಕೊಗೆ ದಾಖಲೆ ವಹಿವಾಟು, 3,735 ಕೋಟಿ ವ್ಯವಹಾರ, 49.62 ಕೋಟಿ ತೆರಿಗೆಪೂರ್ವ ಲಾಭ ,ಶೇ 14 ಲಾಭಾಂಶಕ್ಕೆ ಶಿಫಾರಸು: ಅಧ್ಯಕ್ಷ ಸತೀಶ್ಚಂದ್ರ

ಮಂಗಳೂರು: ಅಡಿಕೆ ಮಾರುಕಟ್ಟೆಯ ಏರಿಳಿತ ಮತ್ತು ಕೊಕ್ಕೊ ವಲಯದ ಸವಾಲುಗಳ ನಡುವೆಯೂ ಕ್ಯಾಂಪ್ಕೊ 2025–26ನೇ ಆರ್ಥಿಕ ವರ್ಷದಲ್ಲಿ 3,735 ಕೋಟಿ ಒಟ್ಟು ವಹಿವಾಟು ನಡೆಸಿದ್ದು, 49.62 ಕೋಟಿ ತೆರಿಗೆಪೂರ್ವ ಲಾಭ ದಾಖಲಿಸಿದೆ. ಸದಸ್ಯರಿಗೆ ಶೇ 14ರಷ್ಟು ಡಿವಿಡೆಂಡ್ ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕ್ಯಾಂಪ್ಕೊದ ಪ್ರಮುಖ ವ್ಯವಹಾರವಾಗಿರುವ ಅಡಿಕೆ ಖರೀದಿ 2,924.32 ಕೋಟಿಗೆ ತಲುಪಿದ್ದು, ಒಟ್ಟು 58,742.76 ಮೆಟ್ರಿಕ್ ಟನ್ […]

Continue Reading