ಕಾರವಾರ: ಚಂಡಮಾರುತ ಹಾಗೂ ಭಾರಿ ಗಾಳಿ ಬೀಸುವ ಕುರಿತು ಭಾರತೀಯ ಹವಾಮಾನ ಇಲಾಖೆಯ ಮೂನ್ಸಚನೆ ನೀಡಿದ್ದು, ಅಲೆಗಳು ಮಳಗಾಲಕ್ಕಿಂತಲೂ ಹೆಚ್ಚು ಅಪ್ಪಳಿಸಲಿರುವ ಹಿನ್ನಲೆಯಲ್ಲಿ ಕಡಲ ತೀರಗಳಲ್ಲಿ ಹಾಗೂ ನದಿ ತೀರಗಳಲ್ಲಿ ನಡೆಸುತ್ತಿರುವ ಬೋಟಿಂಗ್ ಹಾಗೂ ಜಲ ಸಾಹಸ ಕ್ರೀಡೆಗಳನ್ನು ಹಾಗೂ ಅಪ್ಸರಕೊಂಡ ಬೀಚ್ ನಲ್ಲಿ ಪ್ಯಾರಾ ಮೋಟರ್ ಆಳವಡಿಕೆಗಳನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸ್ಥಗಿತಗೊಳಿಸಿ ಆದೇಶ ಹೊರಡಿಸಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಮೇನ್ ಬೀಚ್, ಓಂ ಬೀಚ್, ಕೂರ್ಡೆ ಬೀಚ್, ಹಾಫ್ ಮೂನ್ ಬೀಚ್, ಪ್ಯಾರಡೈಸ್ ಬೀಚ್, ಭಟ್ಕಳ ತಾಲೂಕಿನ ಮುರುಡೇಶ್ವರ ಬೀಚ್, ಕಾರವಾರ ಬೀಚ್ ಗಳಲ್ಲಿ ಪ್ರವಾಸಿ ಬೋಟಿಂಗ್ ಹಾಗೂ ಜಲಸಾಹಸ ಕ್ರೀಡೆ ಚಟುವಟಿಕೆ, ಮುರುಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಸ್ಕೂಬಾ ಡೈವಿಂಗ್ ಚಟುವಟಿಕೆ ನಡೆಸಲು ಪ್ರವಾಸೋದ್ಯಮ ಇಲಾಖೆಯಿಂದ ಟೆಂಡರ್ ಕರೆಯುವ ಬಗ್ಗೆ ಕಾರ್ಯೋಚನೆ ನೀಡಲಾಗಿತ್ತು. ಕುಮಟಾ ತಾಲೂಕಿನ ತಡಡಿ ಅಘನಾಶಿನಿ ನದಿ ತೀರ, ಹೊನ್ನಾವರ ಮತ್ತು ಕಾಸರಕೋಡು ಭಾಗದ ಶರಾವತಿ ಹಿನ್ನೀರಿನಲ್ಲಿ ಪ್ರವಾಸಿ ಬೋಟಿಂಗ್ ಚಟುವಟಿಕೆ ಕೈಗೊಳ್ಳಲು ಮತ್ತು ಅಪ್ಸರಕೊಂಡ ಬೀಚ್ ನಲ್ಲಿ ಪ್ಯಾರಾ ಮೋಟರ್ ಆಳವಡಿಕೆಗೆ ಈ ಕಚೇರಿಯಿಂದ ಅನುಮತಿ ನೀಡಲಾಗಿದ್ದು, ಆದರೆ ಸಮುದ್ರದ ಅಲೆಗಳು ಭಾರಿ ಗಾತ್ರದಲ್ಲಿ ಅಪ್ಪಳಿಸುವ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad
