ಸುರತ್ಕಲ್ : ಜೋಕಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಬಿ.ಎಸ್. ರೈಲ್ವೇ ಗೇಟ್‌ನಿಂದ ಎಂಎಸ್‌ಇಝೆಡ್ ಮುಖಾಂತರ ಹಳೆ ಮಸೀದಿ ತನಕ ನಿರ್ಮಾಣಗೊಳ್ಳಲಿರುವ 900 ಮೀಟರ್ ಉದ್ದದ ಕಾಂಕ್ರಿಟ್ ರಸ್ತೆ ಕಾಮಗಾರಿಗೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಶುಕ್ರವಾರ ಶಿಲಾನ್ಯಾಸ ನೆರವೇರಿಸಿದರು.
₹2.25 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣಗೊಳ್ಳಲಿದ್ದು, ಎಂಆರ್‌ಪಿಎಲ್‌ನ ಸಿಎಸ್‌ಆರ್ ಅನುದಾನ ಬಳಸಿಕೊಳ್ಳಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘ಎಂಆರ್‌ಪಿಎಲ್ ಸ್ಥಳೀಯ ಗ್ರಾಮಗಳ ಅಭಿವೃದ್ಧಿಗೆ ಇನ್ನಷ್ಟು ಅನುದಾನ ನೀಡಬೇಕು. ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸುವಂತೆ ಸ್ಥಳೀಯರು ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಸಂಸ್ಥೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ಅನುದಾನ ತರಲಾಗಿದೆ’ ಎಂದು ಹೇಳಿದರು.
‘ಈ ಭಾಗದ ರಸ್ತೆಗಳ ನಿರ್ವಹಣೆಯನ್ನು ಸಂಬಂಧಿತ ಇಲಾಖೆಗೆ ವಹಿಸುವ ಕುರಿತು ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಮಾತನಾಡಿ, ‘ಉಸ್ತುವಾರಿ ಸಚಿವರ ಮುತುವರ್ಜಿಯಿಂದ ರಸ್ತೆ ಕಾಮಗಾರಿಗೆ ಅಗತ್ಯ ಸಿದ್ಧತೆ ಪೂರ್ಣಗೊಂಡಿದೆ. ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವವರೆಗೆ ಸಾರ್ವಜನಿಕರು ಸಹಕರಿಸಬೇಕು’ ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಕೆಪಿಸಿಸಿ ಸದಸ್ಯ ವಸಂತ್ ಬರ್ನಾರ್ಡ್, ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಟಿ.ಎ. ಖಾದರ್, ಹಸನಬ್ಬ, ಅಬ್ದುಲ್ ಖಾದರ್, ಸಿರಾಜ್ ಮನಿಗಾರ್, ಮೋನಪ್ಪ ಶೆಟ್ಟಿ ಎಕ್ಕಾರ್, ಭಾಸ್ಕರ್ ಮೊಯ್ಲಿ, ಜಯಂತ್ ಸಾಲ್ಯಾನ್, ಅಬೂಬಕರ್ ಬಾವಾ, ಬಶೀರ್ ಅಹ್ಮದ್, ಎಂಆರ್‌ಪಿಎಲ್ ಅಧಿಕಾರಿ ಶ್ರೀನಿವಾಸ್, ಇಂಜಿನಿಯರ್ ಪ್ರಶಾಂತ್ ಆಳ್ವ, ಎಕ್ಸಿಕ್ಯೂಟಿವ್ ಇಂಜಿನಿಯರ್ ವೇಣುಗೋಪಾಲ್ ಹಾಗೂ ಗುತ್ತಿಗೆದಾರ ಮುಹಮ್ಮದ್ ರಾಫಿ ತೊಕ್ಕೊಟ್ಟು ಉಪಸ್ಥಿತರಿದ್ದರು.
What do you feel about this post?
Like
Love
Happy
Haha
Sad
