ಸುಲ್ತಾನ್ ಬತ್ತೇರಿ– ಫಲ್ಗುಣಿ ನದಿ ಸಂಪರ್ಕ ಸೇತುವೆ, 64 ಕೋಟಿ ವೆಚ್ಚ, ಶೀಘ್ರವೇ ಕಾಮಗಾರಿ ಪೂರ್ಣ: ಸಚಿವ ದಿನೇಶ್ ಗುಂಡೂರಾವ್

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ
<

Spread the love

ಮಂಗಳೂರು: ಸುಲ್ತಾನ್ ಬತ್ತೇರಿ ಬಳಿ ಫಲ್ಗುಣಿ ನದಿಯಿಂದ ತಣ್ಣೀರುಬಾವಿ ಸಂಪರ್ಕಸುವ ಬೋ ಸ್ಟ್ರಿಂಗ್ ಸೇತುವೆ ಕಾಮಗಾರಿ ಸೆಪ್ಟಂಬರ್‌ಗೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರಿಗೆ ತಿಳಿಸಿದರು.

<

ಸುಲ್ತಾನ್ ಬತ್ತೇರಿಯಿಂದ ತಣ್ಣೀರುಬಾವಿಗೆ ಸಂಪರ್ಕ ಕಲ್ಪಿಸುವ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಅಲ್ಲಿನ ಜನರು ಮಂಗಳೂರಿನ ನಗರಕ್ಕೆ ಬಂದು ಹೋಗಿ ಮಾಡುವುದಕ್ಕೆ ಸುಲಭವಾಗಲಿದೆ. ಈಗ ಜನರು ಫೆರ್ರಿ ಮೂಲಕ ಅಥವಾ ಸುತ್ತು ಬಳಸಿ ಸುಮಾರು ಅರ್ಧ ಗಂಟೆ ದಾರಿ ಸುತ್ತು ಹಾಕಿ ಬರಬೇಕು. ಸ್ಮಾರ್ಟ್ ಸಿಟಿ ಯೋಜನೆ ಯಡಿ 64 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಕಾಮಗಾರಿ ನಿರ್ಮಾಣ ಆಗುತ್ತಿದೆ. ಇದರಿಂದ ಬೆಂಗ್ರೆ ಪ್ರದೇಶದ 4000 ಕುಟುಂಬಕ್ಕೆ ಪ್ರಯೋಜನ ಸಿಗಲಿದೆ ಎಂದರು.

ದೋಣಿಗಳು ಯಾವುದೇ ಅಡಚಣೆ ಇಲ್ಲದೆ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ಆಕರ್ಷಣೀಯ ರೀತಿಯಲ್ಲಿ ಸೇತುವೆ ಕಾಮಗಾರಿ ನಡೆಸಲಾಗುತ್ತಿದ್ದು, ಜೂನ್ ತಿಂಗಳ ವೇಳೆಗೆ ಬೋ ಸ್ಟ್ರಿಂಗ್ ಮೇಲೆತ್ತುವ ಕಾರ್ಯ ನಡೆಯಲಿದ್ದು, ಬಳಿಕ ದೋಣಿಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಸೆಪ್ಟಂಬರ್ ವೇಳೆಗೆ ಸೇತುವೆ ಲೋಕಾರ್ಪಣೆ ಕಾರ್ಯ ನಡೆಸಲಾಗುವುದು ಎಂದರು.

ನೀರಿನ ಆಳ ಹಾಗೂ ಸೇತುವೆ ಎತ್ತರ ಇಲ್ಲಿ ಯಾವುದೇ ರೀತಿಯ ಸಹಜ ಚಟುವಟಿಕೆಗಳಿಗೆ ತೊಂದರೆ ಆಗದ ರೀತಿಯಲ್ಲಿ ರಾಷ್ಟ್ರೀಯ ಜಲಮಾರ್ಗದ ಮಾರ್ಗಸೂಚಿ ಅಡಿ ಮಾಡಲಾಗುತ್ತಿದೆ. ಸೇತುವೆಯಲ್ಲಿ ಎಲ್ಲ ರೀತಿಯ ವಾಹನಗಳ ಓಡಾಟಕ್ಕೆ ಅನುಕೂಲ ಆಗುವ ರೀತಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಮಂಗಳೂರು ನಗರಕ್ಕೆ ಇದೊಂದು ಪ್ರಮುಖ ಹಾಗೂ ಮಹತ್ವದ ಯೋಜನೆ ಎಂದವರು ಹೇಳಿದರು.

 

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *