ಕಾರವಾರ: ಒಲವಿನ ಗಾನ ’ ಹನಿಗವನ – ಹನಿಮುತ್ತು ಪುಸ್ತಕ ಲೋಕಾರ್ಪಣೆ

ಜಿಲ್ಲಾ ಸುದ್ದಿ ಕಾರವಾರ ಶಿರಸಿ
<

Spread the love

ಕಾರವಾರ: ನಗರದ ಸಂತ್ ಜೋಸೆಫ್ ಹೈಸ್ಕೂಲ್ ಶಿಕ್ಷಕ ಆಗಸ್ಟಿನ್ ಪ್ರಕಾಶ ಕುರಿಯನ್ ಅವರ ಕವನ ಸಂಕಲನ – ‘ ಒಲವಿನ ಗಾನ ’ ಹಾಗೂ ಹನಿಗವನ – ‘ ಹನಿಮುತ್ತು ’ ಲೋಕಾರ್ಪಣ ಕಾರ್ಯಕ್ರಮ ನಡೆಯಿತು.

<

ಪುಸ್ತಕಗಳ ಲೋಕಾರ್ಪಣೆಯನ್ನು ಸಂತ್ ಜೋಸೆಫ್ ಚರ್ಚ್ ನ ಧರ್ಮಗುರು ರೆವರೆಂಡ್ ಫಾದರ್ ಜೋನ್ ಫರ್ನಾಂಡಿ ಅವರು ನೆರವೇರಿಸಿ ಶುಭಕೋರಿದರು. ಕಾರ್ಯಕ್ರಮದ ಅಧ್ಯಕ್ಷರಾಗಿ ಸಂತ್ ಮಿಲಾಗ್ರಿಸ್ ಅಧ್ಯಕ್ಷ ಜಾರ್ಜ್ ಫರ್ನಾಂಡಿಸ್ ಹಾಗೂ ಮುಖ್ಯ ಅತಿಥಿಗಳಾಗಿ ಸಾಹಿತಿಗಳು ಹಾಗೂ ವಿಮರ್ಶಕರು ರಾಮಕೃಷ್ಣ ಜಿ. ಗುಂದಿ, ಮತ್ತು ಕನ್ನಡ ಸಾಹಿತ್ಯ ಪರಿಷತ್, ಅಧ್ಯಕ್ಷ ರಾಮಾ ನಾಯ್ಕ ಪಾಲ್ಗೊಂಡಿದ್ದರು.

ಪುಸ್ತಕ ಪರಿಚಯವನ್ನು ಪ್ರೇಮಾ ಟಿ. ಎಂ. ಆರ್. ಹಾಗೂ ಜೆ. ಪ್ರೇಮಾನಂದ ನಡೆಸಿಕೊಟ್ಟರು. ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅಗಸ್ಟಿನ್ ಪ್ರಕಾಶ ಕುರಿಯನ್ ಅವರು ಸ್ವಾಗತಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *