ಅಂಕೋಲಾ: ಶಾಂತಿನಿಕೇತನ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಶಾಂತಿ ನಾಯಕ ಧ್ವಜಾರೋಹಣ ಮಾಡಿ ಹಿರಿಯರು ಒದಗಿಸಿಕೊಟ್ಟ ಸ್ವಾತಂತ್ರ್ಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಲಾ ಭಾರತಿ ಟ್ರಸ್ಟ್ ಅಧ್ಯಕ್ಷ ಪ್ರಶಾಂತ ಶೆಟ್ಟಿ ಹಾಗೂ ದಂತವೈದ್ಯ ಡಾ. ಸಂಜು ನಾಯಕ ಹಾಗೂ ವಿದ್ಯಾರ್ಥಿಗಳ ಪಾಲಕರು ಇದ್ದರು. ದೇಶಭಕ್ತಿ ಗೀತೆಯನ್ನು ಮಕ್ಕಳು ಪ್ರಸ್ತುತಪಡಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿಯರಾದ ಶೀತಲ್ ನಾಯ್ಕ್, ಮಮತಾ ನಾಯ್ಕ, ಶ್ರದ್ಧಾ ಆಚಾರ್ಯ, ಮೈತ್ರಿ ಭಟ್, ಲಕ್ಷ್ಮೀ ಪೂಜಾರ, ಜ್ಯೋತಿ ವೆರ್ಣೇಕರ್ ಇದ್ದರು.
What do you feel about this post?
0%
Like
0%
Love
0%
Happy
0%
Haha
0%
Sad
0%





