ಬೆಳಗಾವಿ ಜಿ.ಪಂ ಸಿಇಒ ರಾಹುಲ್ ಶಿಂಧೆಗೆ ರಾಜ್ಯಮಟ್ಟದ ಹೊಸ ಜವಾಬ್ದಾರಿ, ಪಂಚಾಯತ್ ರಾಜ್ ಆಯುಕ್ತಾಲಯದ ವಿಶೇಷ ಅಧಿಕಾರಿಯಾಗಿ ನೇಮಕ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಬೆಂಗಳೂರು: ಬೆಳಗಾವಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ರಾಹುಲ್ ಶಿಂಧೆ ಅವರ ಆಡಳಿತಾತ್ಮಕ ಕಾರ್ಯವ್ಯಾಪ್ತಿ ಇದೀಗ ರಾಜ್ಯ ಮಟ್ಟಕ್ಕೆ ವಿಸ್ತರಣೆ ಆಗಿದೆ. ಹಾಲಿ ಹುದ್ದೆಯ ಜತೆಗೆ ಪಂಚಾಯತ್ ರಾಜ್ ಆಯುಕ್ತಾಲಯದ ವಿಶೇಷ ಅಧಿಕಾರಿಯಾಗಿ ಅವರನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

<

ಅಗಸ್ಟ್ 27 ರಂದು ಹೊರಡಿಸಿರುವ ಆದೇಶದಂತೆ ರಾಹುಲ್ ಶಿಂಧೆ ಅವರು ಪಂಚಾಯತ್ ರಾಜ್ ಆಯುಕ್ತಾಲಯದ ವಿಶೇಷ ಅಧಿಕಾರಿಯ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ರಾಜ್ಯದ ಅತಿ ದೊಡ್ಡ ಜಿಲ್ಲೆಗಳಲ್ಲೊಂದಾದ ಬೆಳಗಾವಿಯಲ್ಲಿ ಆಡಳಿತಾತ್ಮಕ ಅನುಭವ ಹೊಂದಿರುವ ಹಿನ್ನೆಲೆಯಲ್ಲಿ ಅವರಿಗೆ ಈ ಹೆಚ್ಚುವರಿ ಹೊಣೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

ಪಂಚಾಯತ್ ರಾಜ್ ಆಯುಕ್ತಾಲಯದಲ್ಲಿ ಯೋಜನಾ ನಿರ್ವಹಣಾ ಘಟಕ (ಪಿಎಂಯು) ಬಲಪಡಿಸುವುದು ಹಾಗೂ ಗ್ರಾಮೀಣಾಭಿವೃದ್ಧಿ ಯೋಜನೆಗಳಿಗೆ ಅಗತ್ಯ ತಾಂತ್ರಿಕ ನೆರವು ಮತ್ತು ಸಮನ್ವಯ ಕಲ್ಪಿಸುವುದು ಅವರ ಪ್ರಮುಖ ಜವಾಬ್ದಾರಿ ಆಗಿರಲಿದೆ.

ರಾಜ್ಯದ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳ ಅನುಷ್ಠಾನವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸುವ ನಿಟ್ಟಿನಲ್ಲಿ ಯೋಜನಾ ನಿರ್ವಹಣಾ ಘಟಕದ ಕಾರ್ಯವೈಖರಿಯನ್ನು ಬಲಪಡಿಸುವುದು ಮಹತ್ವದ ಜವಾಬ್ದಾರಿ ಆಗಿದೆ.

ಬೆಳಗಾವಿ ಜಿಲ್ಲಾ ಪಂಚಾಯಿತಿಯ ದೈನಂದಿನ ಆಡಳಿತದ ಹೊಣೆಗಾರಿಕೆಯೊಂದಿಗೆ ಬೆಂಗಳೂರಿನಲ್ಲಿರುವ ಪಂಚಾಯತ್ ರಾಜ್ ಆಯುಕ್ತಾಲಯದ ರಾಜ್ಯಮಟ್ಟದ ಜವಾಬ್ದಾರಿಯನ್ನೂ ನಿಭಾಯಿಸಬೇಕಿರುವುದು ರಾಹುಲ್ ಶಿಂಧೆ ಅವರು ನಿಭಾಯಿಸಲಿದ್ದಾರೆ. ರಾಜ್ಯಮಟ್ಟದ ಈ ಹೆಚ್ಚುವರಿ ಜವಾಬ್ದಾರಿ ಅವರ ಆಡಳಿತಾತ್ಮಕ ಅನುಭವ ಮತ್ತು ಕಾರ್ಯಕ್ಷಮತೆಗೆ ದೊರೆತಿರುವ ಮಹತ್ವದ ಮನ್ನಣೆಯಾಗಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *