ಗ್ರಾಮೀಣ ಪ್ರತಿಭೆ ಡಾ. ಜಿ. ರಾಮಕೃಷ್ಣ ಆಚಾರ್, ಜಾಗತಿಕ ಸಾಧನೆಯ ಪಯಣ ಅನಾವರಣ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಮೂಡಬಿದಿರೆಯ ಉದ್ಯಮಿ ಹಾಗೂ ಭತ್ತ ಸಂಸ್ಕರಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಅಂತರ ರಾಷ್ಟ್ರೀಯ ಮನ್ನಣೆ ಗಳಿಸಿರುವ ಡಾ. ಜಿ. ರಾಮಕೃಷ್ಣ ಆಚಾರ್ ಅವರ ಜೀವನಗಾಥೆ ಇದೀಗ ಪುಸ್ತಕ ರೂಪದಲ್ಲಿ ಅನಾವರಣಗೊಂಡಿದೆ.

‘ವಿಲೇಜ್ ಬಾಯ್ ಟು ಗ್ಲೋಬಲ್ ರೈಸ್ ಟೆಕ್ಕಿ’ (Village Boy to Global Rice Techie) ಕೃತಿಯನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮುಂಬಯಿಯ ಐಟಿಸಿ ಗ್ರ್ಯಾಂಡ್ ಸೆಂಟ್ರಲ್‌ನಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆ ಮಾಡಿದರು.

 

ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ಕೃಷಿ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಸಾಧ್ಯತೆಗಳನ್ನು ಹುಡುಕುವವರಿಗೆ, ಉದ್ಯಮಶೀಲತೆಯ ಕನಸು ಕಾಣುವ ಯುವಜನರಿಗೆ ಹಾಗೂ ಸಾಧನೆಯ ಹಾದಿಯಲ್ಲಿರುವವರಿಗೆ ಈ ಕೃತಿ ಸ್ಫೂರ್ತಿದಾಯಕ ದಾಖಲೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಗ್ರಾಮೀಣ ಹಿನ್ನೆಲೆಯಿಂದ ಉದ್ಯಮ ಜಗತ್ತಿಗೆ ಪ್ರವೇಶಿಸಿ, ಭತ್ತ ಸಂಸ್ಕರಣಾ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತಿಕ ಮನ್ನಣೆ ಗಳಿಸಿದ ಡಾ. ಆಚಾರ್ ಅವರ ಸಾಧನೆಯ ಪಯಣವನ್ನು ಕೃತಿ ಪರಿಚಯಿಸುತ್ತದೆ. ಅವರ ಉದ್ಯಮಶೀಲತೆ, ತಾಂತ್ರಿಕ ಆವಿಷ್ಕಾರಗಳು, ವೃತ್ತಿಜೀವನದ ಸವಾಲುಗಳು ಮತ್ತು ಯಶಸ್ಸಿನ ಪ್ರಮುಖ ಮೈಲಿಗಲ್ಲುಗಳನ್ನು ದಾಖಲಿಸಲಾಗಿದೆ.

ಸಾಮಾನ್ಯ ಗ್ರಾಮೀಣ ಪರಿಸರದಲ್ಲಿ ಬದುಕು ಆರಂಭಿಸಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಾ. ಆಚಾರ್ ಅವರ ಜೀವನವು ಪರಿಶ್ರಮ, ಛಲ ಮತ್ತು ದೂರದೃಷ್ಟಿಗೆ ಸಾಕ್ಷಿಯಾಗಿದೆ. ಪ್ರತಿಕೂಲ ಪರಿಸ್ಥಿತಿಗಳನ್ನು ಮೆಟ್ಟಿನಿಂತು ಅವಕಾಶಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಪರಿವರ್ತಿಸಿದ ಅವರ ಬದುಕು ಯುವ ಉದ್ಯಮಿಗಳಿಗೆ ಪ್ರೇರಣೆಯಾಗಲಿದೆ.

Leave a Reply

Your email address will not be published. Required fields are marked *