ವಿ ಎಚ್ ಪಿ ಯಿಂದ ಧರ್ಮ ಪ್ರಸಾರ ಯಾತ್ರೆ, ಚಿತ್ರಾಪುರ ಶ್ರೀ ಪಾದಯಾತ್ರೆ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ

Spread the love

ಮಂಗಳೂರು: ವಿಶ್ವ ಹಿಂದೂ ಪರಿಷತ್ ಮಂಗಳೂರು ಜಿಲ್ಲೆಯ ಧರ್ಮ ಪ್ರಸಾರ ಹಾಗೂ ಸಾಮಾಜಿಕ ಸಮರಸತಾ ವಿಭಾಗದ ವತಿಯಿಂದ ಚಿಲಿಂಬಿ ಗುಡ್ಡೆಯ ಉಪೇಕ್ಷಿತ ಬಂಧುಗಳ ವಸತಿಯಲ್ಲಿ ಚಿತ್ರಾಪುರ ವಿದ್ಯೇಂದ್ರ ತೀರ್ಥ ಶ್ರೀಗಳಿಂದ ಸಂತರ ಪಾದಯಾತ್ರೆ ಕಾರ್ಯಕ್ರಮ ನಡೆಯಿತು.

<

ಶ್ರೀಗಳು ಹತ್ತಕ್ಕೂ ಹೆಚ್ಚು ಉಪೇಕ್ಷಿತ ಬಂಧುಗಳ ಮನೆಗೆ ತೆರಳಿ ಧರ್ಮ ಪಾಲನೆ ಮತ್ತು ರಕ್ಷಣೆಯ ಮಹತ್ವವನ್ನು ತಿಳಿಸಿದರು.

ಚಿಲಿಂಬಿಗುಡ್ಡೆ ರಾಮಾಂಜನೆಯ ಭಜನಾ ಮಂದಿರದಲ್ಲಿ ಶ್ರೀಪಾದರನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೆ ಶ್ರೀ ರಾಮಾಂಜನೆಯ ಯುವಕ ಮಂಡಲದ ಪದಾಧಿಕಾರಿಗಳು ಸಹಕಾರ ನೀಡಿದರು.

ವಿ. ಹಿಂ.ಪ ಜಿಲ್ಲಾ ಅಧ್ಯಕ್ಷ ಎಚ್. ಕೆ. ಪುರುಷೋತ್ತಮ್, ವಿ. ಹಿಂ. ಪ ಜಿಲ್ಲಾ ಪ್ರಮುಖರಾದ ಗುರು ಪ್ರಸಾದ್ ಕಡಂಬಾರ್, ಜಯರಾಮ್ ಆಚಾರ್ಯ, ರವಿ ಕಾಪಿಕ್ಕಾಡ್, ರಾಜು ಕುಲಾಲ್, ವಸಂತ ಶೇಟ್, ಸತೀಶ್ ಶೆಟ್ಟಿ ನೆಕ್ಕಿಲ, ಪ್ರಸಾದ್ ಕೊಂಚಾಡಿ, ಹರೀಶ್ ಶೇಟ್ ಮತ್ತು ಮಣ್ಣಾಗುಡ್ಡೆ ಪ್ರಖಂಡ ಪ್ರಮುಖರಾದ ಲೊಕೇಶ್ ಶೆಟ್ಟಿ, ಪ್ರಶಾಂತ್ ನಾಯ್ಕ್ ಹಾಗೂ ಪದಾಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *