ಮಂಗಳೂರಿನಲ್ಲಿ ಕಿಂಗ್ ಖಾನ್‌ ಹವಾ: ರೋಹನ್‌ ಕಾರ್ಪೊರೇಶನ್‌ ಅನ್‌ ಈವ್ನಿಂಗ್‌ ವಿತ್‌ ಶಾರುಖ್‌ ಖಾನ್‌ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ ಸಿನಿಮಾ

Spread the love

ಮಂಗಳೂರು: ಬಾಲಿವುಡ್‌ ನಟ ಶಾರುಖ್‌ ಖಾನ್‌ ಅವರ ಉಪಸ್ಥಿತಿಯಿಂದ ರೋಹನ್‌ ಕಾರ್ಪೊರೇಶನ್‌ ಆಯೋಜಿಸಿದ್ದ ‘ಅನ್‌ ಈವ್ನಿಂಗ್‌ ವಿತ್‌ ಶಾರುಖ್‌ ಖಾನ್‌’ ಕಾರ್ಯಕ್ರಮ ಗುರುವಾರ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ಗಮನ ಸೆಳೆಯಿತು.

<

ಉದ್ಯಮ ವಲಯದ ಗಣ್ಯರು, ವಿವಿಧ ಕ್ಷೇತ್ರಗಳ ಪ್ರಮುಖರು, ಸಮಾಜದ ಪ್ರತಿನಿಧಿಗಳು ಮತ್ತು ಸಂಸ್ಥೆಯ ಹಿತೈಷಿಗಳು ಕಾರ್ಯಕ್ರಮದಲ್ಲಿ ಇದ್ದರು. ಸಂಜೆ ಆರಂಭವಾದ ಕಾರ್ಯಕ್ರಮ ರಾತ್ರಿ ತನಕ ಉತ್ಸಾಹಭರಿತ ವಾತಾವರಣದಲ್ಲಿ ನಡೆಯಿತು.

ಕರಾವಳಿಯ ಕಲಾತಂಡಗಳ ಸಾಂಸ್ಕೃತಿಕ ಪ್ರದರ್ಶನಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದವು. ಇಂಡಿಯನ್‌ ಐಡಲ್‌ ಖ್ಯಾತಿಯ ಗಾಯಕ ಸಲ್ಮಾನ್‌ ಅಲಿ ಅವರ ಗಾಯನ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಆಗಿತ್ತು.

ಬಾಲಿವುಡ್ ನಟ ಶಾರುಖ್‌ ಖಾನ್‌ ಅವರು ಮಾತನಾಡಿ, ಮಂಗಳೂರಿನ ಆತಿಥ್ಯ, ಸಂಸ್ಕೃತಿ ಮತ್ತು ಅಭಿವೃದ್ಧಿ ತುಂಬಾ ಇಷ್ಟವಾಗಿದೆ. ಯುವಕರು ದೊಡ್ಡ ಕನಸು ಕಾಣಬೇಕು ಹಾಗೂ ಗುರಿ ಸಾಧನೆಗಾಗಿ ನಿರಂತರ ಶ್ರಮಿಸಬೇಕು ಎಂದರು.

ರೋಹನ್‌ ಕಾರ್ಪೊರೇಶನ್‌ ತನ್ನ ಸಮುದ್ರತೀರ ವಸತಿ ಯೋಜನೆಯಾದ ‘ರೋಹನ್‌ ಮರೀನಾ ಒನ್‌’ ಅನ್ನು ಮರು ಅನಾವರಣಗೊಳಿಸಿತು. ಸಂಸ್ಥೆಯ ಬೆಳವಣಿಗೆಯ ಪಯಣದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಡಾ. ರೋಹನ್‌ ಮೊಂತೇರೊ ತಿಳಿಸಿದರು.

ನಿರ್ದೇಶಕ ಡಿಯೋನ್‌ ಮೊಂತೇರೊ ಮಾತನಾಡಿ, ಮಂಗಳೂರಿನ ಜನತೆಗೆ ವಿಶಿಷ್ಟ ಅನುಭವ ನೀಡುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ದೊರೆತ ಸ್ಪಂದನೆ ನಿರೀಕ್ಷೆಗೂ ಮೀರಿ ಬಂದಿದೆ ಎಂದು ತಿಳಿಸಿದರು.

ಬಳಿಕ ನಡೆದ ಸಂವಾದದಲ್ಲಿ ಶಾರುಖ್‌ ಖಾನ್‌, ಡಾ. ರೋಹನ್‌ ಮೊಂತೇರೊ ಹಾಗೂ ಡಿಯೋನ್‌ ಮೊಂತೇರೊ ಅವರು ನಾಯಕತ್ವ, ಉದ್ಯಮಶೀಲತೆ, ಪರಿಶ್ರಮ ಮತ್ತು ಯಶಸ್ಸಿನ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ತಮ್ಮ ನೆಚ್ಚಿನ ನಟನನ್ನು ನೇರವಾಗಿ ನೋಡುವ ಅವಕಾಶ ಸಿಕ್ಕಿದ್ದು ಅಭಿಮಾನಿಗಳಿಗೆ ಅವಿಸ್ಮರಣೀಯ ಕ್ಷಣವಾಗಿ ಉಳಿಯಿತು. ಸಾಹಿಲ್‌ ಜಹೀರ್‌ ಮತ್ತು ಆರ್‌.ಜೆ ಡೋನಾ ನಿರೂಪಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *