ರಾಷ್ಟ್ರ ಮಟ್ಟಕ್ಕೆ ಮಂಗಳೂರಿನ ವೀವನ್ ಈಜು ಪಟುಗಳು, 18 ಪದಕಗಳ ಸಾಧನೆ

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ಶಿರಸಿ

Spread the love

ಮಂಗಳೂರು: ಕರ್ನಾಟಕ ರಾಜ್ಯ ಈಜು ಸಂಸ್ಥೆ ಹಾಗೂ ವೀ ವನ್ ಅಕ್ವಾ ಸೆಂಟರ್ ಆಶ್ರಯದಲ್ಲಿ ಮಂಗಳೂರಿನ ಎಮ್ಮೆಕೆರೆ ಅಂತರ ರಾಷ್ಟ್ರೀಯ ಈಜುಕೊಳದಲ್ಲಿ ನಡೆದ ಎನ್‌ಆರ್‌ಜೆ ರಾಜ್ಯ ಸಬ್ ಜೂನಿಯರ್ ಈಜು ಸ್ಪರ್ಧೆಯಲ್ಲಿ ವೀ ವನ್ ಅಕ್ವಾ ಸೆಂಟರ್‌ ಈಜುಪಟುಗಳು ಅತ್ಯುತ್ತಮ ಪ್ರದರ್ಶನ ನೀಡಿ ಒಟ್ಟು 18 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ. ಮೂರು ಮಂದಿ ಈಜುಪಟುಗಳು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

<

ಶ್ವಿತಿ ದಿವಾಕರ್, ಅಲಿಟಾ ಡಿಸೋಜಾ ಹಾಗೂ ಸಿದ್ಧಿ ಶೆಟ್ಟಿ ಅವರು ಆಗಸ್ಟ್ 6ರಿಂದ 9ರವರೆಗೆ ಜೈಪುರದಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಈಜು ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಸ್ಪರ್ಧೆಯಲ್ಲಿ ಶ್ವಿತಿ ದಿವಾಕರ್ ಆರು ಚಿನ್ನ ಹಾಗೂ ಬೆಳ್ಳಿ, ದೇವಿಕ ಎಂ ಚಿನ್ನ, ಅಲಿಟಾ ಡಿಸೋಜ ಎರಡು ಚಿನ್ನ ಹಾಗೂ ಕಂಚು, ಸ್ಮಿತಿಕ್ ವೈ.ಎನ್. ಎರಡು ಬೆಳ್ಳಿ ಹಾಗೂ ಕಂಚು, ಸಿದ್ಧಿ ಶೆಟ್ಟಿ ಬೆಳ್ಳಿ, ಅವನೀಶ್ ನಾಯಕ್ (ಸುಜೀರ್) ಕಂಚು, ಆನ್ನಾ ಜೂಲಿ ಫರ್ನಾಂಡಿಸ್ ಕಂಚು ಹಾಗೂ ಆದ್ವಿಕ್ ಬಾಗ್ಚಿ ಕಂಚಿನ ಪದಕ ಗೆದ್ದಿದ್ದಾರೆ. ತಂಡ ಒಟ್ಟು 9 ಚಿನ್ನ, 4 ಬೆಳ್ಳಿ ಮತ್ತು 5 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಜತೆಗೆ ಹಂಸ್ವಿ ಮೆಂಡನ್, ಆರಿಕ್ ಜೇಕ್ ಡಿಸೋಜ, ನಿಷ್ಕಾ ಸೋನರ್ ಫರ್ನಾಂಡಿಸ್, ದಿಯಾ ನಾಯಕ್, ನೋವಾ ಜಾಯ್ ಪಾಯ್ಸ್ ಹಾಗೂ ಸುದೀಪ್ತಿ ಸುನಿಲ್ ಅವರು ಫೈನಲ್ ಎಂಟರ ಹಂತಕ್ಕೆ ಪ್ರವೇಶಿಸಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಈ ಈಜುಪಟುಗಳಿಗೆ ಮುಖ್ಯ ತರಬೇತಿದಾರ ಲೋಕರಾಜ್ ವಿಟ್ಲ ಅವರ ಮಾರ್ಗದರ್ಶನದಲ್ಲಿ ಅಭಿಲಾಶ್ ಹಾಗೂ ತರಬೇತುದಾರರಾದ ಗಗನ್ ಜಿ. ಪ್ರಭು, ಸ್ಕಂದ, ಆರೋಮಲ್ ಎ.ಎಸ್., ಸುಧೀನ್ ರಾಜ್ ಮತ್ತು ಸಂಜಯ್ ತರಬೇತಿ ನೀಡಿದ್ದಾರೆ.

ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಮಂಗಳೂರಿನಲ್ಲಿ ತರಬೇತಿ ಪಡೆಯುತ್ತಿರುವ ಈಜುಪಟುಗಳ ಸಾಧನೆಯನ್ನು ಶ್ಲಾಘಿಸಿರುವ ವೀ ವನ್ ಅಕ್ವಾ ಸೆಂಟರ್‌ನ ನಿರ್ದೇಶಕಿ ರೂಪ ಜಿ. ಪ್ರಭು ಹಾಗೂ ನವೀನ್ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ಸ್ಪರ್ಧಿಗಳಿಗೆ ಶುಭ ಹಾರೈಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *