ಮಂಗಳೂರು: ಉದ್ಯೋಗಿಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರು ಹಾಗೂ ಹಗಲಿನ ವೇಳೆ ಆಸ್ಪತ್ರೆಗೆ ಭೇಟಿ ನೀಡಲು ಸಾಧ್ಯವಾಗದವರಿಗೆ ಅನುಕೂಲವಾಗುವಂತೆ ಕೆಎಂಸಿ ಆಸ್ಪತ್ರೆ ಅತ್ತಾವರದಲ್ಲಿ ತಜ್ಞ ವೈದ್ಯರ ಸಮಾಲೋಚನೆಗಾಗಿ ವಿಶೇಷ ‘ಸಂಜೆ ಕ್ಲಿನಿಕ್’ ಆರಂಭಿಸಲಾಗಿದೆ. ಸಾಮಾನ್ಯ ಕೆಲಸದ ವೇಳೆಯ ನಂತರವೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ಈ ಹೊಸ ಸೇವೆ ಆರಂಭಿಸಲಾಗಿದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಸಂಜೆ 5 ರಿಂದ 7 ಗಂಟೆಯವರೆಗೆ ಕಾರ್ಯನಿರ್ವಹಿಸುವ ಈ ಕ್ಲಿನಿಕ್‌ನಲ್ಲಿ ಹೃದ್ರೋಗ, ಸಾಮಾನ್ಯ ವೈದ್ಯಕೀಯ, ಹಸ್ತ ಶಸ್ತ್ರಚಿಕಿತ್ಸೆ, ಮೂತ್ರಪಿಂಡ, ಮೆದುಳಿನ ಶಸ್ತ್ರಚಿಕಿತ್ಸೆ, ಪ್ರಸೂತಿ ಮತ್ತು ಸ್ತ್ರೀರೋಗ, ಕ್ಯಾನ್ಸರ್, ಮೂಳೆ, ಮಕ್ಕಳ ಆರೋಗ್ಯ, ಪ್ಲಾಸ್ಟಿಕ್ ಮತ್ತು ಸೌಂದರ್ಯ ಶಸ್ತ್ರಚಿಕಿತ್ಸೆ, ಮಾನಸಿಕ ಆರೋಗ್ಯ, ಶ್ವಾಸಕೋಶ ಹಾಗೂ ಜೀರ್ಣಾಂಗ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ವಿಭಾಗಗಳ ಅನುಭವಿ ತಜ್ಞ ವೈದ್ಯರ ಸಮಾಲೋಚನೆ ಲಭ್ಯವಿರಲಿದೆ.
ಕೆಎಂಸಿ ಆಸ್ಪತ್ರೆ ಅತ್ತಾವರದ ಟವರ್–2ರ ಸೂಪರ್ ಸ್ಪೆಷಾಲಿಟಿ ಹೊರ ರೋಗಿ ವಿಭಾಗದಲ್ಲಿ ಸೋಮವಾರದಿಂದ ಶನಿವಾರದವರೆಗೆ ಕ್ಲಿನಿಕ್ ಕಾರ್ಯನಿರ್ವಹಿಸಲಿದ್ದು, ಭಾನುವಾರ ಹಾಗೂ ಪ್ರತಿ ಮೂರನೇ ಶನಿವಾರ ರಜೆ ಇರಲಿದೆ. ಸಂಜೆ ವೇಳೆಯಲ್ಲೂ ಹೊರರೋಗಿ ಸೇವೆ ಲಭ್ಯವಾಗುವುದರಿಂದ ಕೆಲಸಕ್ಕೆ ರಜೆ ಪಡೆಯುವ ಅನಿವಾರ್ಯತೆ ತಪ್ಪುವುದರ ಜೊತೆಗೆ ಸಮಯೋಚಿತ ಚಿಕಿತ್ಸೆ ಪಡೆಯಲು ರೋಗಿಗಳಿಗೆ ಅನುಕೂಲವಾಗಲಿದೆ.
ಈ ಸೇವೆಯಿಂದ ಕಡಿಮೆ ಕಾಯುವಿಕೆ ಸಮಯ, ಸಾಕಷ್ಟು ವಾಹನ ನಿಲುಗಡೆ ವ್ಯವಸ್ಥೆ, ಸುಧಾರಿತ ಹೊರರೋಗಿ ವಿಭಾಗದ ಸೌಲಭ್ಯಗಳು ಹಾಗೂ ಒಂದೇ ಸ್ಥಳದಲ್ಲಿ ವಿವಿಧ ತಜ್ಞ ವೈದ್ಯರ ಸೇವೆ ದೊರೆಯಲಿದೆ ಎಂದು ಆಸ್ಪತ್ರೆ ತಿಳಿಸಿದೆ.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಚಕ್ರಪಾಣಿ ಎಂ. ಮಾತನಾಡಿ, ಹಲವರಿಗೆ ಸಾಮಾನ್ಯ ಕೆಲಸದ ವೇಳೆಯಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗದಿರುವುದನ್ನು ಗಮನಿಸಿ ಈ ಸೇವೆಯನ್ನು ಆರಂಭಿಸಲಾಗಿದೆ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಸಂಜೆ ವೇಳೆಯಲ್ಲೂ ತಜ್ಞ ವೈದ್ಯರ ಸಮಾಲೋಚನೆ ಒದಗಿಸುವ ಮೂಲಕ ಆರೋಗ್ಯ ಸೇವೆಯನ್ನು ಜನರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವುದು ಆಸ್ಪತ್ರೆಯ ಉದ್ದೇಶವಾಗಿದೆ ಎಂದು ಹೇಳಿದರು.
ಸಂಜೆ ಕ್ಲಿನಿಕ್‌ಗೆ ಮುಂಗಡ ನೋಂದಣಿಗಾಗಿ 88615 86249 ಮೊಬೈಲ್ ಸಂಖ್ಯೆಗೆ ಕರೆ ಮಾಡಬಹುದಾಗಿದ್ದು, ಆಸ್ಪತ್ರೆಯ ಅಧಿಕೃತ ಜಾಲತಾಣದ ಮೂಲಕ ನೋಂದಣಿ ಮಾಡಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
What do you feel about this post?
Like
Love
Happy
Haha
Sad





