ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲ್ಲೂಕಿನ ಶಿರಾಲಿ ಸಮೀಪದ ತಟ್ಟೆಹಕ್ಕಲು ಎಂಬಲ್ಲಿ ಕಡಲ ತೀರದಲ್ಲಿ ಕಪ್ಪೆಚಿಪ್ಪು ತೆಗೆದಯಲು ಹೋಗಿದ್ದ ಒಂದೇ ಕುಟುಂಬದ 8 ಮಂದಿ ದುರಂತ ಸಾವು ಕಂಡಿದ್ದಾರೆ.
ಮಾಲತಿ ಜಟ್ಟಪ್ಪ ನಾಯ್ಕ, ಲಕ್ಷ್ಮೀ ಶಿವರಾಮ ನಾಯ್ಕ, ಲಕ್ಷ್ಮೀ ಅಣ್ಣಪ್ಪ ನಾಯ್ಕ, ಉಮೇಶ ಮಂಜುನಾಥ ನಾಯ್ಕ, ಲಕ್ಮೀ ಮಾಧೆವ ನಾಯ್ಕ, ಜ್ಯೋತಿ ನಾಗಪ್ಪ ನಾಯ್ಕ, ಮಾಸ್ತಮ್ಮ ಮಂಜುನಾಥ ನಾಯ್ಕ , ಲಕ್ಮೀ ಮಾಧೆವ ನಾಯ್ಕ ಎಂಬಬುವವರು ನೀರಿನ ಸೆಳೆತಕ್ಕೆ ಸಿಕ್ಕು ಹಾಕಿಕೊಂಡು ಸಾವನ್ನಪ್ಪಿದ್ದಾರೆ. ಮೃತಪಟ್ಟವರ ಶವಗಳನ್ನು ಭಟ್ಕಳ ಆಸ್ಪತ್ರೆಯಲ್ಲಿ ಇಡಲಾಗಿದೆ.

ಇನ್ನು ಮೂರು ಮಂದಿ ಬದುಕಿದ್ದು, ಅವರಿಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮಾದೇವಿ ಮಂಜುನಾಥ ನಾಯ್ಕ, ಲತಾ ಜಗದೀಶ ನಾಯ್ಕ, ನಾಗರತ್ನ ಈಶ್ವರ ನಾಯ್ಕ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಮೂರು ಮಂದಿ ನೀರನ ಸೆಳೆತಕ್ಕೆ ಸಿಕ್ಕು ಹಾಕಿಕೊಂಡು ನಾಪತ್ತೆ ಆಗಿದ್ದಾರೆ. ನಾಪತ್ತೆ ಆಗಿರುವ ಮಾದೇವ ಬೈರಪ್ಪ ನಾಯ್ಕ, ಮಂಜಮ್ಮ ಗೋಯ್ದ ನಾಯ್ಕ, ನಾಗರತ್ನ ಪರಮೇಶ್ವರ ನಾಯ್ಕ ಅವರ ಶೋಧ ಕಾರ್ಯ ನಡೆದಿದೆ.
ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಎಲ್ಲರೂ ಸಂಬಂಧಿಕರಾಗಿದ್ದು ಒಂದೇ ಕುಟುಂಬದವರು ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ.
What do you feel about this post?
Like
Love
Happy
Haha
Sad
