ಜಿಎಂಯು ದಂತ ವೈದ್ಯಕೀಯ ಕಾಲೇಜಿಗೆ ವಿಶ್ವಮಟ್ಟದ ಮಾನ್ಯತೆ, 120 ದಂತ ಚಿಕಿತ್ಸಾ ಘಟಕಗಳ ಮೂಲಕ ಪ್ರಾಯೋಗಿಕ ತರಬೇತಿಗೆ ಆದ್ಯತೆ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ಜಿಎಂಯು)ಯ ದಂತ ವೈದ್ಯಕೀಯ ಕಾಲೇಜು ವಿಶ್ವಮಟ್ಟದ ಕ್ಲಿನಿಕಲ್ ಶಿಕ್ಷಣ ವ್ಯವಸ್ಥೆ ಹಾಗೂ ಅತ್ಯಾಧುನಿಕ ಮೂಲಸೌಕರ್ಯದಿಂದ ಗಮನ ಸೆಳೆದಿದೆ. ವಿಶ್ವವಿದ್ಯಾಲಯದ ಅಧೀನದಲ್ಲಿರುವ ಥಂಬೇ ಡೆಂಟಲ್ ಆಸ್ಪತ್ರೆಯಲ್ಲಿ 120 ದಂತ ಚಿಕಿತ್ಸಾ ಕುರ್ಚಿಗಳ ವ್ಯವಸ್ಥೆ ಕಲ್ಪಿಸಲಾಗಿದ್ದು, ವಿದ್ಯಾರ್ಥಿಗಳಿಗೆ ನೈಜ ರೋಗಿಗಳ ಚಿಕಿತ್ಸೆಯ ಮೂಲಕ ಪ್ರಾಯೋಗಿಕ ತರಬೇತಿ ನೀಡಲಾಗುತ್ತಿದೆ.

<

ದಂತ ಶಿಕ್ಷಣದಲ್ಲಿ ಪ್ರಾಯೋಗಿಕ ಅನುಭವಕ್ಕೆ ಹೆಚ್ಚಿನ ಮಹತ್ವ ನೀಡಿರುವ ಕಾಲೇಜು, ಆರಂಭಿಕ ಹಂತದಿಂದಲೇ ತಜ್ಞ ವೈದ್ಯರ ಮೇಲ್ವಿಚಾರಣೆಯಲ್ಲಿ ವಿದ್ಯಾರ್ಥಿಗಳಿಗೆ ಚಿಕಿತ್ಸಾ ಕೌಶಲ್ಯ ಬೆಳೆಸುವ ಅವಕಾಶ ಒದಗಿಸಿದೆ. ಇದಕ್ಕಾಗಿ ವಿಶೇಷ ಪ್ರೀ-ಕ್ಲಿನಿಕಲ್ ಸ್ಕಿಲ್ಸ್ ಲ್ಯಾಬ್ ಹಾಗೂ ಅತ್ಯಾಧುನಿಕ ಡೆಂಟಲ್ ಸಿಮ್ಯುಲೇಷನ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

2024ರ ಜನವರಿಯಲ್ಲಿ ಜಿಎಂಯುನ ಬ್ಯಾಚುಲರ್ ಆಫ್ ಡೆಂಟಲ್ ಸರ್ಜರಿ ಕೋರ್ಸ್ ಯುಎಇಯಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಡೆಂಟಲ್ ಕೌನ್ಸಿಲ್ ಮಾನ್ಯತೆ ಪಡೆದ ಪದವಿಪೂರ್ವ ದಂತ ಶಿಕ್ಷಣ ಕಾರ್ಯಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಜೊತೆಗೆ ಯುಎಇ ಶಿಕ್ಷಣ ಸಚಿವಾಲಯದ ಪೂರ್ಣ ಮಾನ್ಯತೆ ಹಾಗೂ ಥಂಬೇ ಡೆಂಟಲ್ ಆಸ್ಪತ್ರೆಯ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕೆ ರಾಷ್ಟ್ರೀಯ ಆರೋಗ್ಯ ವಿಶೇಷತಾ ಸಂಸ್ಥೆಯ ಐದು ವರ್ಷಗಳ ಮಾನ್ಯತೆ ದೊರೆತಿದೆ.

ಐದು ವರ್ಷಗಳ ಬಿಡಿಎಸ್ ಪಠ್ಯಕ್ರಮದಲ್ಲಿ ಕ್ಲಿನಿಕಲ್ ಸಾಮರ್ಥ್ಯ, ರೋಗ ನಿರ್ಣಯ, ಚಿಕಿತ್ಸಾ ಯೋಜನೆ, ಡಿಜಿಟಲ್ ಡೆಂಟಿಸ್ಟ್ರಿ, 3ಡಿ ಪ್ರಿಂಟಿಂಗ್ ಹಾಗೂ ಕ್ಯಾಡ್,ಕ್ಯಾಮ್ ತಂತ್ರಜ್ಞಾನಗಳಿಗೆ ವಿಶೇಷ ಒತ್ತು ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಆಧುನಿಕ ದಂತ ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯವಾದ ತಾಂತ್ರಿಕ ಪರಿಣತಿಯನ್ನು ಬೆಳೆಸುವ ರೀತಿಯಲ್ಲಿ ಪಠ್ಯಕ್ರಮ ರೂಪಿಸಲಾಗಿದೆ.

ಬಿಡಿಎಸ್ ನಂತರ ಒಂದು ವರ್ಷದ ಇಂಟರ್ನ್‌ಶಿಪ್, ಎಂಡಿಎಸ್, ರೆಸಿಡೆನ್ಸಿ, ಡೆಂಟಲ್ ಇಂಪ್ಲಾಂಟಾಲಜಿ ಹಾಗೂ ಡೆಂಟಲ್ ಅಸಿಸ್ಟೆಂಟ್ ಡಿಪ್ಲೊಮಾ ಸೇರಿದಂತೆ ಹಲವು ಉನ್ನತ ಶಿಕ್ಷಣ ಕಾರ್ಯಕ್ರಮಗಳನ್ನು ಕಾಲೇಜು ನಡೆಸುತ್ತಿದೆ.

1998ರಲ್ಲಿ ಸ್ಥಾಪನೆಯಾದ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ ಯುಎಇಯ ಪ್ರಮುಖ ಖಾಸಗಿ ವೈದ್ಯಕೀಯ ಹಾಗೂ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದ್ದು, ಜಾಗತಿಕ ಮಟ್ಟದ ಶಿಕ್ಷಣ, ಸಂಶೋಧನೆ ಹಾಗೂ ವೃತ್ತಿಪರ ಅವಕಾಶಗಳನ್ನು ವಿದ್ಯಾರ್ಥಿಗಳಿಗೆ ಒದಗಿಸುತ್ತಿದೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *