ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸಿಎನ್‌ಜಿ ಬೆಲೆಯನ್ನು ಕೆ.ಜಿಗೆ 2 ರೂಪಾಯಿ ಏರಿಸಿದ್ದು, ಎರಡು ವಾರಗಳಿಗಿಂತ ಕಡಿಮೆ ಅವಧಿಯಲ್ಲಿ ನಾಲ್ಕನೇ ಬಾರಿ ಹೆಚ್ಚಳ ಆಗಿದೆ.
ಸಿಎನ್‌ಜಿಗೆ ಈಗ ಪ್ರತಿ ಕೆ.ಜಿಗೆ 83.09 ರೂ. ಇದೆ. ಮೇ 15 ರ ನಂತರ ಒಟ್ಟಾರೆ ಪ್ರತಿ ಕೆಜಿಗೆ 4 ರೂಪಾಯಿ ಬೆಲೆ ಏರಿಕೆ ಆಗಿದೆ. ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ದೇಶದಲ್ಲಿ ಇಂಧನ ಬೆಲೆಗಳು ಮತ್ತೆ ಏರುಗತಿಯಲ್ಲಿ ಸಾಗುತ್ತಿವೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಕ್ರಮವಾಗಿ 2.61 ರೂ ಮತ್ತು 2.71 ರೂಪಾಯಿಗಳಷ್ಟು ಹೆಚ್ಚಿಸಲಾಗಿತ್ತು. ಈ ಮೂಲಕ 11 ದಿನಗಳಲ್ಲಿ ಇಂಧನ ಬೆಲೆಗಳು ಲೀಟರ್‌ಗೆ 7.5 ರೂಪಾಯಿಯಷ್ಟು ತುಟ್ಟಿ ಆಗಿವೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 110.69 ರೂ, ಡೀಸೆಲ್‌ಗೆ 98.69 ರೂ, ನವದೆಹಲಿಯಲ್ಲಿ ಪೆಟ್ರೋಲ್‌ಗೆ 102.12 ರೂ. ಡೀಸೆಲ್‌ಗೆ 95.20 ರೂಪಾಯಿಗಳಷ್ಟಾಗಿತ್ತು. ಇನ್ನುಳಿದಂತೆ, ಮುಂಬೈನಲ್ಲಿ ಪೆಟ್ರೋಲ್‌ಗೆ 111.21 ರೂ. ಮತ್ತು ಡೀಸೆಲ್‌ಗೆ 97.83 ರೂ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ಗೆ 113.51 ರೂ, ಡೀಸೆಲ್‌ಗೆ 99.82 ರೂ ಹಾಗೂ ಚೆನ್ನೈನಲ್ಲಿ ಪೆಟ್ರೋಲ್‌ಗೆ 107.77 ರೂಪಾಯಿ ಮತ್ತು ಡೀಸೆಲ್‌ಗೆ 99.55 ರೂಪಾಯಿ ಇದೆ ಎಂದು ಉದ್ಯಮ ಮೂಲಗಳು ತಿಳಿಸಿದ್ದವು. ಸ್ಥಳೀಯ ತೆರಿಗೆಗಳಿಂದಾಗಿ ವಿವಿಧ ರಾಜ್ಯಗಳಲ್ಲಿ ಈ ಬೆಲೆಗಳು ಬದಲಾಗುತ್ತವೆ.
ಸರ್ಕಾರಿ ಸ್ವಾಮ್ಯದ ತೈಲ ಪೂರೈಕೆ ಕಂಪನಿಗಳು ತಮ್ಮ ನಷ್ಟ ಸರಿದೂಗಿಸಲು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಾದ ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸುತ್ತಿವೆ.
What do you feel about this post?
Like
Love
Happy
Haha
Sad
