ಉ. ಕ ದಲ್ಲಿ ಶೇ100 ರಷ್ಟು ಎನ್ಯುಮರೇಷನ್ ಫಾರಂ ಗಣಕೀಕರಣ ಪೂರ್ಣ: ಡಿಸಿ ಲಕ್ಷ್ಮಿಪ್ರೀಯಾ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಅಂಗವಾಗಿ ವಿತರಿಸಲಾಗಿದ್ದ ಎಲ್ಲಾ ಎನ್ಯುಮರೇಷನ್ ಫಾರಂಗಳನ್ನು ಯಶಸ್ವಿಯಾಗಿ ಗಣಕೀಕರಣಗೊಳಿಸಲಾಗಿದ್ದು, ಜಿಲ್ಲೆ ಶೇ100 ಸಾಧನೆ ಮಾಡಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

<

ಜಿಲ್ಲೆಯಲ್ಲಿ ಒಟ್ಟು 12,30,037 ಮತದಾರರಿದ್ದು, ಪ್ರತಿಯೊಬ್ಬರಿಗೂ ಎನ್ಯುಮರೇಷನ್ ಫಾರಂ ವಿತರಿಸಲಾಗಿತ್ತು. ಮನೆ ಮನೆ ಭೇಟಿ ವೇಳೆ ಸಂಗ್ರಹಿಸಿದ ಎಲ್ಲಾ ಫಾರಂಗಳನ್ನು ಗಣಕೀಕರಣಗೊಳಿಸುವ ಕಾರ್ಯ ಪೂರ್ಣಗೊಂಡಿದೆ. ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸ್ಥಳಾಂತರ, ಶಾಶ್ವತ ವಲಸೆ, ಮರಣ, ದ್ವಿಪ್ರತಿ ಸೇರಿದಂತೆ ವಿವಿಧ ಕಾರಣಗಳಿಂದ ಒಟ್ಟು 1,07,385 ಪ್ರಕರಣಗಳನ್ನು ಗುರುತಿಸಲಾಗಿದೆ. ಇದರಲ್ಲಿ 45,878 ಶಾಶ್ವತ ವಲಸೆ, 44,006 ಮರಣ, 12,463 ದ್ವಿಪ್ರತಿ, 5,002 ಗೈರು ಹಾಗೂ 36 ಇತರೆ ಪ್ರಕರಣಗಳಾಗಿವೆ ಎಂದು ತಿಳಿಸಿದ್ದಾರೆ.

ವಿಧಾನಸಭಾ ಕ್ಷೇತ್ರವಾರು ಪರಿಶೀಲನೆಯಲ್ಲಿ ಕಾರವಾರ ಕ್ಷೇತ್ರದಲ್ಲಿ 24,424, ಹಳಿಯಾಳದಲ್ಲಿ 19,951, ಭಟ್ಕಳದಲ್ಲಿ 18,132, ಯಲ್ಲಾಪುರದಲ್ಲಿ 16,115, ಕುಮಟಾದಲ್ಲಿ 14,715 ಹಾಗೂ ಶಿರಸಿಯಲ್ಲಿ 14,048 ಸ್ಥಳಾಂತರ, ಮರಣ, ದ್ವಿಪ್ರತಿ, ಗೈರು ಹಾಗೂ ಇತರೆ ಪ್ರಕರಣಗಳನ್ನು ಗುರುತಿಸಲಾಗಿದೆ. ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ–2026ರ ಪ್ರಕ್ರಿಯೆಯು ಆಗಸ್ಟ್ 8ರವರೆಗೆ ನಡೆಯಲಿದ್ದು, ಸ್ಥಳಾಂತರ, ವಲಸೆ, ದ್ವಿಪ್ರತಿ, ಗೈರು ಅಥವಾ ಇತರೆ ಕಾರಣಗಳಿಂದ ಎನ್ಯುಮರೇಷನ್ ಫಾರಂ ಸಲ್ಲಿಸದ ಮತದಾರರು ನಿಗದಿತ ಅವಧಿಯೊಳಗೆ ತಮ್ಮ ಮತಗಟ್ಟೆ ವ್ಯಾಪ್ತಿಯ ಬಿಎಲ್‌ಒ ಅವರಿಗೆ ಫಾರಂ ಸಲ್ಲಿಸಬೇಕು. ನಿಗದಿತ ಅವಧಿಯಲ್ಲಿ ಸಲ್ಲಿಸಲಾದ ಅರ್ಜಿಗಳ ಆಧಾರದ ಮೇಲೆ ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *