ಮಂಗಳೂರು: ವರ್ಲ್ಡ್ ಮಾಸ್ಟರ್ಸ್ ಕ್ರೀಡಾಕೂಟ ಪ್ರಶಸ್ತಿ ವಿಜೇತರಿಗೆ ಸನ್ಮಾನ, ಕ್ರೀಡಾ ಅನುಭವ ಹಂಚಿಕೊಂಡ ಗಿರಿಧರ ಸಾಲಿಯಾನ್

ಕ್ರೀಡೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ದಕ್ಷಿಣ ಕೊರಿಯಾದ ದೇಗುನಲ್ಲಿ ನಡೆದ 2026ರ ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳನ್ನು ದಕ್ಷಿಣ ಕನ್ನಡ ಮಾಸ್ಟರ್ ಅಥ್ಲೀಟ್ಸ್ ಅಸೋಸಿಯೇಷನ್ ವತಿಯಿಂದ ಭಾನುವಾರ ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ಸನ್ಮಾನಿಸಲಾಯಿತು.

ವಿಶ್ವ ಮಾಸ್ಟರ್ಸ್ ಕ್ರೀಡಾಕೂಟದಲ್ಲಿ ವಿಶ್ವದ ಸುಮಾರು 106 ದೇಶಗಳ ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಪ್ರತಿಷ್ಠಿತ ಅಂತರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದ ಗಿರಿಧರ ಸಾಲಿಯಾನ್, ಗ್ಲಾಡಿಸ್ ಪಾಯಸ್, ಮೇರಿ ಹಿಲ್ಡಾ, ಸುಭಾಷ್ ರೈ ಹಾಗೂ ಡಾ. ಅಮೃತ ಭಂಡಾರಿ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿದ ಗಿರಿಧರ ಸಾಲಿಯಾನ್ ಹಾಗೂ ಮೇರಿ ಹಿಲ್ಡಾ ಅವರು ವಿದೇಶಗಳಲ್ಲಿ ಭಾಗವಹಿಸಿದ ತಮ್ಮ ಕ್ರೀಡಾ ಅನುಭವ, ಕ್ರೀಡಾಕೂಟದ ಆಯೋಜನೆ ಹಾಗೂ ಅಲ್ಲಿನ ವಿಶೇಷತೆಗಳ ಕುರಿತು ಮಾತನಾಡಿದರು.

ಕ್ರೀಡಾ ಸಂಘಟನೆಗಳ ಬಲವರ್ಧನೆ ಅಗತ್ಯ ಅಗಿದ್ದು, ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಕ್ಷೇತ್ರಕ್ಕೆ ಪ್ರವೇಶಿಸಬೇಕು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ವೃದ್ಧಿಯಾಗುತ್ತದೆ ಎಂದು ಮೇರಿ ಹಿಲ್ಡಾ ಅಭಿಪ್ರಾಯಪಟ್ಟರು.

ಸಂಘದ ಕಾರ್ಯದರ್ಶಿ ಲಕ್ಷ್ಮಣ ರೈ ಅವರು ಶುಭ ಸಂದೇಶ ನೀಡಿದರು. ಹಿರಿಯ ಕ್ರೀಡಾಪಟು ಸುಭಾಷ್ ಚಂದ್ರ ರೈ ಅವರು ತಮ್ಮ ದೀರ್ಘಕಾಲದ ಕ್ರೀಡಾ ಅನುಭವಗಳನ್ನು ಹಂಚಿಕೊಂಡು, ಜೀವನದಲ್ಲಿ ಸ್ಫೂರ್ತಿ, ಮನೋಸ್ಥೈರ್ಯ ಹಾಗೂ ದೈಹಿಕ ಆರೋಗ್ಯವನ್ನು ಬೆಳೆಸುವಲ್ಲಿ ಕ್ರೀಡೆಯ ಮಹತ್ವವನ್ನು ವಿವರಿಸಿದರು.

ಸಂಘದ ಉಪಾಧ್ಯಕ್ಷರಾದ ಮಹಾಬಲ ಶೆಟ್ಟಿ, ಸುಭಾಷ್ ಚಂದ್ರ ರೈ, ಸದಾನಂದ ಪ್ರಭು, ಹೆನ್ರಿ ಫರ್ನಾಂಡಿಸ್, ಜಗದೀಶ್ ಶೆಟ್ಟಿ ಸೇರಿದಂತೆ ಹಲವು ಕ್ರೀಡಾಪಟುಗಳು ಹಾಗೂ ಸಂಘದ ಸದಸ್ಯರು ಇದ್ದರು.

ಸಂಘದ ಸದಸ್ಯ ಕ್ರೀಡಾಪಟು ಭಾಗೀರತಿ ರೈ ನಿರೂಪಿಸಿದರು. ಸದಸ್ಯ ಕ್ರೀಡಾಪಟು ಸುಕನ್ಯಾ ಕಾರ್ಯಕ್ರಮದ ಆಯೋಜನೆಯಲ್ಲಿ ಸಹಕರಿಸಿ ವಂದಿಸಿದರು.

Mangaluru: Athletes from Dakshina Kannada who represented India and won medals at the 2026 World Masters Games held in Daegu, South Korea, were felicitated by the Dakshina Kannada Masters Athletes Association at Mangaluru’s Mangala Stadium on Sunday.

Athletes from around 106 countries participated in the prestigious international sporting event.

The association honoured Giridhar Salian, Gladys Pais, Mary Hilda, Subhash Rai and Dr. Amrutha Bhandari, who represented India and secured honours at the event.

Speaking on the occasion, Giridhar Salian and Mary Hilda shared their experiences of participating in international sporting events, besides highlighting the arrangements and special features of the World Masters Games in South Korea.

Mary Hilda stressed the need to strengthen sports associations and encouraged more youngsters to take up sports. She said participation in sports not only improves physical fitness but also contributes significantly to mental well-being.

Association Secretary Lakshman Rai delivered a message on the occasion. Veteran athlete Subhash Chandra Rai shared his long experience in sports and spoke about the importance of sporting activities in developing inspiration, mental strength and physical health.

Association Vice-President Mahabala Shetty, Subhash Chandra Rai, Sadananda Prabhu, Henry Fernandes, Jagadish Shetty and several athletes and members of the association were present.

Association member and athlete Bhagirathi Rai compered the programme, while member and athlete Sukanya assisted in organising the event and proposed the vote of thanks.

Leave a Reply

Your email address will not be published. Required fields are marked *