ಮಂಗಳೂರು: ಮಹಿಳೆಯರ ಆರೋಗ್ಯ, ದೈಹಿಕ ಕ್ಷಮತೆ ಹಾಗೂ ಫಿಟ್‌ನೆಸ್ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ನಾರಿ ಕ್ಲಬ್ ನೇತೃತ್ವದಲ್ಲಿ ‘ಸಾರಿ ವಾಕ್ ಅಂಡ್ ರನ್–2026’ ಕಾರ್ಯಕ್ರಮ ಭಾನುವಾರ( ಅ.4) ರಂದು ಮಂಗಳೂರಿನಲ್ಲಿ ನಡೆಯಲಿದೆ ಎಂದು ಆಯೋಜಕರಾದ ರಾಜೇಶ್ ರಾಮಯ್ಯ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. .
ಸೀರೆಯಲ್ಲಿಯೇ ನಡೆದು, ಓಡುವ ಮೂಲಕ ಸಾಂಪ್ರದಾಯಿಕ ಉಡುಗೆ ದೈಹಿಕ ಚಟುವಟಿಕೆಗೆ ಅಡ್ಡಿಯಾಗುವುದಿಲ್ಲ ಎಂಬ ಸಂದೇಶ ಸಾರುವ ಕಾರ್ಯಕ್ರಮದ ಆರನೇ ಆವೃತ್ತಿಗೆ 350ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.
ಗೋಕರ್ಣನಾಥೇಶ್ವರ ಕಾಲೇಜು ಆವರಣದಿಂದ ಆರಂಭವಾಗುವ 2 ಕಿ.ಮೀ. ಓಟ–ನಡಿಗೆ ಮಣ್ಣುಗುಡ್ಡ, ಗುರ್ಜಿ, ಲೇಡಿಹಿಲ್ ಹಾಗೂ ಮಾರಿಯಮ್ಮ ವೃತ್ತದ ಮೂಲಕ ಸಾಗಿ ಮತ್ತೆ ಕಾಲೇಜು ಆವರಣದಲ್ಲಿ ಅಂತ್ಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಪಾಲ್ಗೊಳ್ಳುವವರಿಗೆ ಪದಕ, ಪ್ರಮಾಣಪತ್ರ ಹಾಗೂ ಲಘು ಉಪಾಹಾರ ನೀಡಲಾಗುವುದು. ಮಾರ್ಗದುದ್ದಕ್ಕೂ ಕುಡಿಯುವ ನೀರು ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಮೈಸೂರು ಸಿಲ್ಕ್ ಕಾರ್ಪೊರೇಷನ್, ಫ್ರೀಡಂ ಆಯಿಲ್, ಮೈಸೂರು ಸ್ಯಾಂಡಲ್, ಜಯಲಕ್ಷ್ಮಿ ಬಿಜೈ, ಕೆನರಾ ಬ್ಯಾಂಕ್, ಆಭರಣ ಜ್ಯುವೆಲರ್ಸ್, ಎ.ಜೆ. ಆಸ್ಪತ್ರೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮಂಗಳೂರು ನಾರ್ತ್ ಮತ್ತು ಸುರತ್ಕಲ್ ಸೇರಿದಂತೆ ವಿವಿಧ ಸಂಘಟನೆಗಳು ಸಹಕರಿಸಲಿವೆ ಎಂದರು.
Mangaluru to host ‘Saree Walk and Run’ on Sunday
Mangaluru: The sixth edition of ‘Saree Walk and Run–2026’, aimed at promoting women’s health, physical fitness and an active lifestyle, will be held in Mangaluru on Sunday (October 4), organisers said.
Organised under the leadership of Nari Club, the event seeks to convey that traditional attire need not come in the way of physical activity. More than 350 participants are expected to take part in the event, organiser Rajesh Ramaiah said in a statement.
The 2-km walk-and-run will begin at the Gokarnanatheshwara College campus and pass through Mannagudda, Gurji, Lady Hill and Mariyamma Circle before concluding at the college campus.
Participants will be given medals, certificates and refreshments. Drinking water and medical facilities will be available along the route, the organisers said.
Mysore Silk Corporation, Freedom Oil, Mysore Sandal, Jayalakshmi Bijai, Canara Bank, Abharan Jewellers, A.J. Hospital and Inner Wheel Club Mangaluru North and Surathkal are among those supporting the event.
What do you feel about this post?
Like
Love
Happy
Haha
Sad





