ಸಾರಿ ವಾಕ್ ಅಂಡ್ ರನ್ ವಿಜೇತರಿಗೆ ಬಹುಮಾನ ವಿತರಣೆ, ವಿಜೇತರ ಸಂಭ್ರಮ, ಮಹಿಳೆಯರ ಕ್ರೀಡಾ ಸ್ಪೂರ್ತಿಗೆ ಸಾಟಿಯೇ ಇಲ್ಲ: ಮಮತಾ ಗಟ್ಟಿ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಛಾಪು ಮೂಡಿಸುವ ಮೂಲಕ ದೊಡ್ಡ ಮಟ್ದದ ಸಾಧನೆ ಮಾಡುತ್ತಿದ್ದು, ಸಾರಿ ವಾಕ್ ಅಂಡ್ ರನ್ ಸ್ಪರ್ಧೆಯಲ್ಲಿಯೂ ಕೂಡ ತಮ್ಮ ವಯಸ್ಸು ಮೀರಿ ಪಾಲ್ಗೊಂಡಿರುವುದು ಅವರ ಕ್ರೀಡಾ ಸ್ಫೂರ್ತಿಗೆ ಸಾಕ್ಷಿ ಆಗಿದೆ ಎಂದು ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಮತಾ ಗಟ್ಟಿ ಹೇಳಿದರು.

ಇಲ್ಲಿನ ಜಯಲಕ್ಷ್ಮಿ ಸೀರೆ ಮಳಿಗೆಯಲ್ಲಿ ಭಾನುವಾರ ನಾರಿ ಕ್ಲಬ್ ವತಿಯಿಂದ ಹಮ್ಮಿಕೊಂಡಿದ್ದ ಸಾರಿ ವಾಕ್ ಅಂಡ್ ರನ್ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ಮಾಡಿ ಅವರು ಮಾತನಾಡಿದರು.

ತಾಯಂದಿರು ಸಾಧನೆಗೆ ವಯಸ್ಸು ಎಂದಿಗೂ ಅಡ್ಡಿ ಆಗಲ್ಲ. ಸಾರಿ ವಾಕ್ ಅಂಡ್ ರನ್ ಕಳೆದ 6 ವರ್ಷಗಳಿಂದ ಸಾರಿ ವಾಕ್ ಅಂಡ್ ರನ್ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದೆ. ಮಹಿಳೆಯರು ಫಿಟ್ ನೆಸ್ ಹಾಗೂ ಆರೋಗ್ಯ ಕಾಪಾಡಿಕೊಳ್ಳಲು ಹಾಗೂ ಕ್ರೀಡಾ ಸ್ಫೂರ್ತಿ ಬೆಳೆಸಲು ಇದೊಂದು ವೇದಿಕೆ ಆಗಿದೆ. ಬರುವ ದಿನಗಳಲ್ಲಿ ಈ ವೇದಿಕೆ ಮೂಲಕ ಮತ್ತಷ್ಟು ಕಾರ್ಯಕ್ರಮಗಳು ನಡೆಯಲಿ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಮೂಲದ ನಟಿ ರೂಪಶ್ರೀ ವರ್ಕಾಡಿ ಅವರು ಇದ್ದರು. ಸೀರೆ ವಾಕ್ ಅಂಡ್ ರನ್ ಕಾರ್ಯಕ್ರಮದ ಸ್ಥಾಪಕ ರಾಜೇಶ್ ರಾಮಯ್ಯ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು.

ಸೀರೆ ವಾಕ್ ಆ್ಯಂಡ್ ರನ್ ಕಾರ್ಯಕ್ರಮದಲ್ಲಿ ವೀಣಾ ರೋಡ್ರಿಗಸ್ ಪ್ರಥಮ ಬಹುಮಾನ ಪಡೆದರೆ, ದಮಯಂತಿ ಎಂ. ದ್ವಿತೀಯ ಹಾಗೂ ದೀಕ್ಷಾ ಎಸ್. ಆಚಾರ್ಯ ತೃತೀಯ ಬಹುಮಾನ ಗಳಿಸಿದರು. ಶ್ರೀದೇವಿ ಗಿರೀಶ್ ಸಮಾಧಾನಕರ ಬಹುಮಾನಕ್ಕೆ ಆಯ್ಕೆಯಾದರು.

ಕಾರ್ಯಕ್ರಮದಲ್ಲಿ ವಿವಿಧ ವಿಭಾಗಗಳಲ್ಲಿ ಸ್ಪರ್ಧಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮರ್ಪಿತ ಭಾಗವಹಿಸುವಿಕೆ ಗುರುತಿಸುವ ಪ್ರಶಸ್ತಿಗೆ ವಸುಧಾ ರೈ ಮತ್ತು ಕವಿತಾ ಪಾಲ್ಕೆ ಆಯ್ಕೆಯಾದರು. ತಾಯಿ ಮತ್ತು ಮಕ್ಕಳ ಭಾಗವಹಿಸುವಿಕೆ ಪ್ರಶಸ್ತಿಯನ್ನು ಗಿವರ್ಣೇಶ್ವರಿ ವಿ. ಗಟ್ಟಿ, ದೀಕ್ಷ್ಣಾ ವೈ. ಕರ್ಕೇರ ಹಾಗೂ ಧನಶ್ರೀ ಮೋಹನ್ ಪೈ ಅವರಿಗೆ ನೀಡಲಾಯಿತು.

ಅತ್ಯುತ್ತಮ ಸೀರೆ ಸೌಂದರ್ಯ ಪ್ರಶಸ್ತಿಗೆ ಸುರೇಖಾ ಆರ್. ರೈ, ಲತಾ ರಾಜೇಶ್ ನಾಯಕ್ ಮತ್ತು ನಮಿತಾ ಪ್ರಮೋದ್ ಆಯ್ಕೆಯಾದರು. ಸ್ಫೂರ್ತಿದಾಯಕ ಮಾತೃತ್ವ ಪ್ರಶಸ್ತಿಯನ್ನು ಸುಶ್ಮಿತಾ ಬಿ. ಕರ್ಕೇರ ಪಡೆದುಕೊಂಡರು.

ಅತಿ ಹೆಚ್ಚು ನೋಂದಣಿ ಮಾಡಿದ ಶಿಕ್ಷಣ ಸಂಸ್ಥೆ ವಿಭಾಗದಲ್ಲಿ ಮಂಗಳೂರಿನ ಡೊಂಗರಕೇರಿಯ ಕೆನರಾ ಹೈಸ್ಕೂಲ್ ಪ್ರಥಮ ಬಹುಮಾನ ಪಡೆದರೆ, ರಯಾನ್ ಇಂಟರ್‌ನ್ಯಾಷನಲ್ ಸ್ಕೂಲ್ ದ್ವಿತೀಯ ಬಹುಮಾನ ಗಳಿಸಿತು.

ಕಾರ್ಯಕ್ರಮಕ್ಕೆ ಇನ್ನರ್ ವೀಲ್ ಕ್ಲಬ್ ಆಫ್ ಮಂಗಳೂರು ನಾರ್ತ್, ಇನ್ನರ್ ವೀಲ್ ಕ್ಲಬ್ ಆಫ್ ಸುರತ್ಕಲ್, ಇನ್ನರ್ ವೀಲ್ ಕ್ಲಬ್ ಆಫ್ ಕಿನ್ನಿಗೋಳಿ ಹಾಗೂ ಉಪಾಸನಾ ಡ್ಯಾನ್ಸ್ ಕ್ಲಾಸ್ ಸಹಕಾರ ನೀಡಿದವು. ನಾರಿ ಕ್ಲಬ್‌ನ ರಾಧಿಕಾ ಎಂ. ಹೆಗ್ಡೆ ಇದ್ದರು.

ಬಹುಮಾನದ ಮುಖ್ಯ ಪ್ರಾಯೋಜಕತ್ವವನ್ನು ಕೆನರಾ ಬ್ಯಾಂಕ್ ವಹಿಸಿಕೊಂಡಿತ್ತು. ಫ್ರೀಡಂ ಆಯಿಲ್, ಜಯಲಕ್ಷ್ಮಿ ಸಿಲ್ಕ್ಸ್, ಆಭರಣ್ ಜ್ಯುವೆಲ್ಲರ್ಸ್, ಏಮಿಲ್ ಆಯುರ್ವೇದ ಇಂಡಿಯಾ ಲಿಮಿಟೆಡ್ ಸೇರಿದಂತೆ ಹಲವರು ಪಾಲುದಾರರಾಗಿದ್ದರು.

Leave a Reply

Your email address will not be published. Required fields are marked *