ಕಾಸರಗೋಡಿನಲ್ಲಿ ಜು.27 ಕ್ಕೆ ಆರ್‌ವಿಆರ್‌ ಹೆಲ್ತ್‌ ಕೇರ್‌ ನ್ಯೂರೋ ಅಂಕಾಲಜಿ ಸೆಂಟರ್‌ ಉದ್ಘಾಟನೆ: ಡಾ. ರಾಘವೇಂದ್ರ

ಅಂತರ ಜಿಲ್ಲೆ ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ಶಿರಸಿ

Spread the love

ಮಂಗಳೂರು: ಆರ್‌ವಿಆರ್‌ ಹೆಲ್ತ್‌ ಕೇರ್‌ನ ಉಪ ಶಾಖೆ ಆರ್‌ವಿಆರ್‌ ಹೆಲ್ತ್‌ ಕೇರ್‌ ನ್ಯೂರೋ ಆಂಕಾಲಜಿ ಸೆಂಟರ್‌ ಇದೇ 26 ರಂದು ಕಾಸರಗೋಡಿನಲ್ಲಿ ಕಾರ್ಯಾರಂಭ ಮಾಡಲಿದ್ದು, ಒಂದೂವರೆ ತಿಂಗಳಿನಿಂದ ಮಂಗಳೂರಿನ ಫಳ್ನೀರ್‌ನಲ್ಲಿ ಇರುವ ಕೇಂದ್ರದಲ್ಲಿ ರೋಗಿಗಳಿಗೆ ಅತ್ಯಾಧುನಿಕ ವೈದ್ಯಕೀಯ ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಆರ್‌ವಿಆರ್‌ ಸೂಪರ್‌ ಸ್ಪೆಷಾಲಿಟಿ ಸೆಂಟರ್‌ ನಿರ್ದೇಶಕ ಡಾ. ರಾಘವೇಂದ್ರ ಬಿ.ಎಸ್‌ ಅವರು ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

<

ನ್ಯೂರೋ ಹಾಗೂ ಕ್ಯಾನ್ಸರ್‌ ರೋಗಗಳ ಚಿಕಿತ್ಸೆಗೆ ವಿಶೇಷ ಒತ್ತು ನೀಡಲಾಗುತ್ತಿದ್ದು, ವಿವಿಧ ತಜ್ಞ ವೈದ್ಯರ ಸೇವೆಯೊಂದಿಗೆ ಒಂದೇ ಸೂರಿನಡಿ ಸಮಗ್ರ ಮತ್ತು ಗುಣಮಟ್ಟದ ಚಿಕಿತ್ಸೆ ಒದಗಿಸಲಾಗುತ್ತಿದೆ. ಕಾಸರಗೋಡು ಕೇಂದ್ರದ ಬಳಿಕ ಚಿಕ್ಕಮಗಳೂರಿನಲ್ಲಿ ಶೀಘ್ರದಲ್ಲೇ ಮತ್ತೊಂದು ಉಪಶಾಖೆ ಆರಂಭವಾಗಲಿದ್ದು, ಮುಂದಿನ ಹಂತದಲ್ಲಿ ಶಿವಮೊಗ್ಗ ಹಾಗೂ ಬೆಂಗಳೂರಿಗೂ ಸೇವೆಗಳನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ. ಮಂಡ್ಯ ಭಾಗದಲ್ಲಿ ಆರ್‌ವಿಆರ್‌ ವತಿಯಿಂದ ಉಚಿತ ಧರ್ಮಾರ್ಥ ಆಸ್ಪತ್ರೆ ಸ್ಥಾಪಿಸುವ ಉದ್ದೇಶವೂ ಇದ್ದು, ಈ ಕುರಿತು ಯೋಜನಾ ಹಂತದ ಕೆಲಸಗಳು ನಡೆಯುತ್ತಿವೆ ಎಂದು ತಿಳಿಸಿದರು.

ಆರೋಗ್ಯ ಬೈ ಆರ್‌ವಿಆರ್‌’ ಕಾರ್ಯಕ್ರಮದಡಿ ಹಿಂದುಳಿದ ವರ್ಗಗಳಿಗೆ ಉಚಿತ ಆರೋಗ್ಯ ತಪಾಸಣೆ, ತಜ್ಞ ವೈದ್ಯರ ಸಲಹೆ ಹಾಗೂ ಆರೋಗ್ಯ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಶೀಘ್ರದಲ್ಲೇ ಕರ್ನಾಟಕ ಮತ್ತು ಕೇರಳ ಸೇರಿದಂತೆ ಇತರ ಭಾಗಗಳಿಗೂ ವಿಸ್ತರಿಸುವ ಯೋಜನೆ ಇದೆ ಎಂದರು.

ಆರ್‌ವಿಆರ್‌ ಅಧ್ಯಕ್ಷ ವಿಜಯ್‌ ಎಂ.ಎನ್‌. ಶೆಟ್ಟಿ, ತಜ್ಞ ವೈದ್ಯರಾದ ಡಾ. ಅಂಜನ್‌ ಕುಮಾರ್‌, ಡಾ. ವಿಘ್ನೇಶ್‌, ಡಾ. ಅಬೂ ಹಾಗೂ ಸಿಇಒ ಅನಂತ್‌ ಇದ್ದರು.

ಹೈಟೆಕ್ ಮಾದರಿಯ ವೈದ್ಯಕೀಯ ಸೌಲಭ್ಯ

ಮಂಗಳೂರಿನಲ್ಲಿ ಈಗಾಗಲೇ ಆರಂಭ ಆಗಿರುವ ಆರ್ ವಿಆರ್ ಹೆಲ್ತ್‌ ಕೇರ್‌ ನಲ್ಲಿ ಒಂದೇ ಸೂರಿನಡಿಯಲ್ಲಿ ಎಲ್ಲ ವಿಭಾಗಗಳ ವೈದ್ಯಕೀಯ ಸೇವೆ ನೀಡಲಾಗುತ್ತಿದೆ. ಇದಕ್ಕೆ ಜನರಿಂದ ಕೂಡ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನ್ಯೂರೋ, ಕ್ಯಾನ್ಸರ್, ಇಎನ್ ಟಿ, ಯೂರಾಲಜಿ, ಕಿಡ್ನಿ ಸೇರಿದಂತೆ ಹಲವಾರು ವೈದ್ಯಕೀಯ ಸೇವೆಗಳನ್ನು ನೀಡುವ ಹೈಟೆಕ್ ಮಾದರಿಯ ಸೌಲಭ್ಯಗಳು ಆರ್ ವಿಆರ್ ನಲ್ಲಿ ಇವೆ. ಜನರಿಗೆ ಉತ್ತಮ ಆರೋಗ್ಯ ಭಾಗ್ಯ ನೀಡುವ ಉದ್ದೇಶದಿಂದ ಇಂತಹ ವ್ಯವಸ್ಥಿತಿ ಆರೋಗ್ಯ ಸೇವೆಗಳನ್ನು ನೀಡುವುದಕ್ಕೆ ಆರ್ ವಿಆರ್ ಹೆಜ್ಜೆ ಇಟ್ಟಿದೆ ಎಂದು ಆರ್ ವಿಆರ್ ಹೆಲ್ತ್‌ ಕೇರ್‌ ನ ನಿರ್ದೇಶಕ ಹಾಗೂ ತಜ್ಞ ವೈದ್ಯ ಡಾ. ರಾಘವೇಂದ್ರ ಅವರು ತಿಳಿಸಿದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *