ನ್ಯೂಜೆರ್ಸಿ: ಎಕ್ಸ್‌ಟ್ರಾ ಟೈಮ್‌ನಲ್ಲಿ ಸ್ಪೇನ್‌ಗೆ ವಿಶ್ವಕಪ್ ಕಿರೀಟ; ಅರ್ಜೆಂಟೀನಾ ವಿರುದ್ಧ 1–0 ಗೋಲುಗಳ ರೋಚಕ ಜಯ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಕ್ರೀಡೆ ದೇಶ ವಿದೇಶ ಪುತ್ತೂರು ಮಂಗಳೂರು ಶಿರಸಿ

Spread the love

ನ್ಯೂಜೆರ್ಸಿ: ಕೊನೆಯ ಕ್ಷಣದವರೆಗೂ ಗೋಲುರಹಿತವಾಗಿದ್ದ ಫಿಫಾ ವಿಶ್ವಕಪ್–2026ರ ಫೈನಲ್ ಪಂದ್ಯದಲ್ಲಿ ಎಕ್ಸ್‌ಟ್ರಾ ಟೈಮ್‌ನಲ್ಲಿ ಫೆರಾನ್ ಟೊರೆಸ್ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಸ್ಪೇನ್, ಅರ್ಜೆಂಟೀನಾವನ್ನು 1–0 ಅಂತರದಿಂದ ಮಣಿಸಿ ವಿಶ್ವ ಚಾಂಪಿಯನ್ ಪಟ್ಟ ಅಲಂಕರಿಸಿದೆ. ರೋಚಕ ಪೈಪೋಟಿಯಲ್ಲಿ ಅರ್ಜೆಂಟೀನಾ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರ ಅದ್ಭುತ ಪ್ರದರ್ಶನವೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವೇ ಆಗಲಿಲ್ಲ.

<

ನಿಗದಿತ 90 ನಿಮಿಷಗಳ ಆಟದಲ್ಲಿ ಎರಡೂ ತಂಡಗಳು ಗೋಲು ಗಳಿಸಲು ವಿಫಲವಾದ ಕಾರಣ ಪಂದ್ಯ ಎಕ್ಸ್‌ಟ್ರಾ ಟೈಮ್‌ಗೆ ಸಾಗಿತು. 106 ನೇ ನಿಮಿಷದಲ್ಲಿ ಬದಲಿ ಆಟಗಾರ ಫೆರಾನ್ ಟೊರೆಸ್ ಡಿ-ಬಾಕ್ಸ್ ಒಳಗೆ ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಎಡಗಾಲಿನಿಂದ ಚೆಂಡ ಅನ್ನು ಗೋಲು ಪೆಟ್ಟಿಗೆ ಮೇಲ್ಭಾಗಕ್ಕೆ ಅಚ್ಚುಕಟ್ಟಾಗಿ ತಳ್ಳುವ ಮೂಲಕ ಸ್ಪೇನ್‌ಗೆ ನಿರ್ಣಾಯಕ ಮುನ್ನಡೆ ತಂದುಕೊಟ್ಟರು. ಇದೇ ಗೋಲು ತಂಡಕ್ಕೆ ಐತಿಹಾಸಿಕ ವಿಶ್ವಕಪ್ ಕಿರೀಟ ಒಲಿಸಿತು.

ಪಂದ್ಯದ ದ್ವಿತೀಯಾರ್ಧದ ಇಂಜುರಿ ಅವಧಿಯಲ್ಲಿ ಅರ್ಜೆಂಟೀನಾದ ಎಂಜೊ ಫರ್ನಾಂಡಿಸ್ ಸ್ಪೇನ್‌ನ ಪಾವು ಕುಬಾರ್ಸಿ ವಿರುದ್ಧ ಫೌಲ್ ಎಸಗಿದ ಕಾರಣ ಎರಡನೇ ಹಳದಿ ಕಾರ್ಡ್ ಪಡೆದರು. ಇದರೊಂದಿಗೆ ಅವರು ಪಂದ್ಯದಿಂದ ಹೊರನಡೆಯಬೇಕಾಗಿ ಬಂದಿದ್ದು, ಅರ್ಜೆಂಟೀನಾ ಅಂತಿಮ ಹಂತದಲ್ಲಿ 10 ಆಟಗಾರರೊಂದಿಗೆ ಹೋರಾಟ ಮುಂದುವರೆಸಬೇಕಾಯಿತು.

ಇಡೀ ಪಂದ್ಯದಲ್ಲಿ ಸ್ಪೇನ್ ಹಲವು ಬಾರಿ ಗೋಲು ಗಳಿಸಲು ಯತ್ನಿಸಿದರೂ, ಅರ್ಜೆಂಟೀನಾದ ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅಸಾಧಾರಣ ಪ್ರದರ್ಶನ ನೀಡಿ 10 ಗೋಲು ಅವಕಾಶಗಳನ್ನು ತಡೆದು ಗಮನ ಸೆಳೆದರು. ಫಿಫಾ ವಿಶ್ವಕಪ್ ಫೈನಲ್ ಪಂದ್ಯಗಳ ಇತಿಹಾಸದಲ್ಲೇ ಇದು ದಾಖಲೆಯ ಪ್ರದರ್ಶನವೆಂದು ಹೇಳಲಾಗುತ್ತಿದೆ. ವಿಶೇಷವಾಗಿ ಇಂಜುರಿ ಟೈಮ್‌ನಲ್ಲಿ ಲ್ಯಾಮೈನ್ ಯಮಾಲ್ ಅವರ ಫ್ರೀ ಕಿಕ್ ಅನ್ನು ತಡೆದ ಅವರ ಸಾಹಸ ಪ್ರಶಂಸೆಗೆ ಪಾತ್ರವಾಯಿತು. ಆದರೆ ಎಕ್ಸ್‌ಟ್ರಾ ಟೈಮ್‌ನಲ್ಲಿ ಫೆರಾನ್ ಟೊರೆಸ್ ಗಳಿಸಿದ ಗೋಲಿನ ಮುಂದೆ ಅರ್ಜೆಂಟೀನಾದ ಹೋರಾಟ ಫಲ ನೀಡದೆ, ಸ್ಪೇನ್ ವಿಶ್ವ ಫುಟ್‌ಬಾಲ್‌ನ ಹೊಸ ಚಾಂಪಿಯನ್ ಆಗಿ ಹೊರಹೊಮ್ಮಿತು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *