ನೇತ್ರದಾನದಿಂದ ಐವರಿಗೆ ದೃಷ್ಟಿ: ಜಾಗೃತಿ ಮೂಡಿಸಿದ ವಾಕಥಾನ್

ಆರೋಗ್ಯ ಉಡುಪಿ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಮಂಗಳೂರು: ನೇತ್ರದಾನದ ಮಹತ್ವದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಗರದ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆ, ಯೆಕ್ಕೂರಿನ ಕಾಲೇಜ್ ಆಫ್ ಫಿಶರೀಸ್ ಹಾಗೂ ಡೆಕಾಥ್ಲಾನ್ ಮಂಗಳೂರು ಸಹಯೋಗದಲ್ಲಿ ‘ನೇತ್ರದಾನ ಜಾಗೃತಿ ವಾಕಥಾನ್–2026’ ಆಯೋಜಿಸಿತು.

<

ನೇತ್ರದಾನ ಜಾಗೃತಿ ಕಾರ್ಯಕ್ರಮವನ್ನು ಪ್ರತಿವರ್ಷ ಆಗಸ್ಟ್ 25ರಿಂದ ಸೆಪ್ಟೆಂಬರ್ 8ರವರೆಗೆ ಆಚರಿಸಲಾಗುತ್ತದೆ. ಇದರ ಅಂಗವಾಗಿ ನಡೆದ ವಾಕಥಾನ್‌ನಲ್ಲಿ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಡೆಕಾಥ್ಲಾನ್ ತಂಡದ ಸದಸ್ಯರು ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಡಾ. ಅದಿತಿ, ಡಾ. ವಸಂತ್ ಪೈ ಹಾಗೂ ಡಾ. ದೀಪ್ತಾ ಇದ್ದರು. ಡಾ. ಅದಿತಿ ಅವರು ನೇತ್ರದಾನದ ಮಹತ್ವ, ನೇತ್ರದಾನಕ್ಕೆ ಮುಂದಾಗುವ ವಿಧಾನ ಹಾಗೂ ಇದರಿಂದ ಇತರರ ಬದುಕಿನಲ್ಲಿ ಉಂಟಾಗುವ ಸಕಾರಾತ್ಮಕ ಬದಲಾವಣೆಗಳ ಕುರಿತು ಮಾಹಿತಿ ನೀಡಿದರು.

ಯೆಕ್ಕೂರಿನ ಕಾಲೇಜ ಆಫ್ ಫಿಶರೀಸ್‌ನ ಪ್ರಾಧ್ಯಾಪಕ ಹಾಗೂ ಎನ್‌ಎಸ್‌ಎಸ್ ಸಂಯೋಜಕ ಡಾ. ಪ್ರದೀಪ್ ಮತ್ತು ಡೆಕಾಥ್ಲಾನ್ ಮಂಗಳೂರು ತಂಡದ ಸಾನ್ವಿ ಶೆಟ್ಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನೇತ್ರದಾನವು ಕೇವಲ ಒಂದು ದಾನವಲ್ಲ; ಅಗತ್ಯವಿರುವವರಿಗೆ ದೃಷ್ಟಿಯ ಬೆಳಕು ನೀಡುವ ಮಹತ್ವದ ಮಾನವೀಯ ಕಾರ್ಯವಾಗಿದೆ. ಒಬ್ಬ ವ್ಯಕ್ತಿಯ ನಿರ್ಧಾರದಿಂದ ಐವರು ಅಗತ್ಯವಿರುವವರಿಗೆ ದೃಷ್ಟಿಯ ಭಾಗ್ಯ ದೊರೆಯಬಹುದು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ಮೂಡಿಸಲಾಯಿತು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *